ಕರ ಆಸ್ತಿ ತೆರಿಗೆ ವಸೂಲಾತಿ ಜಾಗೃತಿ ಅಭಿಯಾನ ಕಾರ್ಯಕ್ರಮ

Oct 1, 2024 - 08:34
 0
ಕರ ಆಸ್ತಿ ತೆರಿಗೆ ವಸೂಲಾತಿ ಜಾಗೃತಿ ಅಭಿಯಾನ ಕಾರ್ಯಕ್ರಮ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 
                    
ಕಲಬುರಗಿ:  ಕಲಬುರಗಿ ಮಹಾನಗರ ಪಾಲಿಕೆಯ ಜನರು ಕರ ಪಾವತಿಯನ್ನು ಕಟ್ಟಬೇಕು ಸುಮಾರು ೨೦ ಕೋಟಿ ಯಿಂದ ೪೦ ಕೋಟಿ ಬಾಕಿ ಇದೆ  ಇಲ್ಲಿಯವರೆಗೆ ಸುಮಾರು ೩೦ ಕೋಟಿ ವಸೂಲಿ ಮಾಡಿದ್ದೇವೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಅವರು ತಿಳಿಸಿದರು.  
ಸೋಮವಾರ  ಜಗತ್ ಸರ್ಕಲ್‌ನಲ್ಲಿ ಕಲಬುರಗಿ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಿಗೆ ಅಭಿಯಾನ ಕಾರ್ಯಕ್ರವನ್ನು ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಕಿ ಇರುವ ಆಸ್ತಿ ತೆರಿಗೆ ವಸೂಲಾತಿ ಮಾಡಲು ವಿಶೇಷ ಅಭಿಯಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಡಿ ಪಾಲಿಕೆಯ ಜನರು ಪಾಲಿಕೆಗೆ ಬಂದು ಕರವನ್ನು ಪಾವತಿಸಬೇಕು. ಎಂದು ಹೇಳಿದರು. ಹಣಕಾಸು ಕಮೀಟಿಯಿಂದ  ೫೦ ಕೋಟಿ ಟಾರ್ಗೆಟ್ ಕೊಟ್ಟಿದ್ದೇವೆ ನಾಗರಿಕರು ಬೇರೆ ಬೇರೆ ಮೂಲ ಸೌಕರ್ಯಗಳು ನಮಗೆ ನೀಡಿಲ್ಲ ಎಂದು ಕೇಳುತ್ತಾರೆ.  ಕೇಳುವುದು ಅದು ಅವರ ಹಕ್ಕಾಗಿದೆ ಯಾವುದೇ ಒಂದು ಕಂಪನಿ ಟ್ಯಾಕ್ಸ್, ಅಥವಾ ವಾಟರ್ ಟ್ಯಾಕ್ಸ್, ಎಲ್ಲಾ ರೀತಿಯ ಟ್ಯಾಕ್ಸಗಳು ತುಂಬಬೇಕು ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ ಆಯಕ್ತರಾದ ಭುವನೇಶ ದೇವಿದಾಸ ಪಾಟೀಲ  ಮಾತನಾಡಿ, ಅವರು ೨೦ ಕೋಟಿ ಇದ್ದ ತೆರಿಗೆ ಸುಮಾರು ೪೦ ಕೋಟಿಯಾಗಿದೆ.  ಇನ್ನು ೩೫ ಕೋಟಿ ಬಾಕಿ ಇದೆ ಪ್ರತಿ ವರ್ಷ ೪೫ ಕೋಟಿ ನಲ್ಲಿ ಈ ವರ್ಷ ಇನ್ನು ೨೫ ರಿಂದ ೩೦ ಕೋಟಿ ಸಂಗ್ರಹಿಸಬೇಕೆಂದರು.  ಅದೇ ರೀತಿ ಪಾಲಿಕೆಯಲ್ಲಿ ವಾಸ ಮಾಡುತ್ತಿರುವ ಜನರು ಮತ್ತು ಉದ್ಯಮಿದಾರರು ತಮ್ಮ ಕರವನ್ನು ಪಾವತಿ ಮಾಡಬೇಕು. ನಾವು ಪ್ರತಿ ಒಂದು ಸ್ಥಳಗಳಿಗೆ ಹೋಗಿ ಲೈಸನ್ಸ್ ಕೊಟ್ಟು  ಮತ್ತು ಸ್ಥಳದಲ್ಲೇ ಅವರ ಕರ ವಸೂಲಿ ಮಾಡುತ್ತೇವೆ ಎಂದರು.
ನಮ್ಮ ಪಾಲಿಕೆಗೆ ಕರ ಕಟ್ಟುವುದರಿಂದ ಹಲವಾರು ಅಭಿವೃದ್ಧಿ ಕೆಲಸಗಳು ಹಾಗೂ ಆರ್ಥಿಕ ಸ್ಥಿತಿಗತಿ  ಮಾಡಲಿಕೆ ಸಹಾಯವಾಗುತ್ತದೆ ನಗರದಲ್ಲಿ ಇರುವಂತಹ ಸಾರ್ವಜನಿಕರು ಉದ್ಯಮಿದಾರರು ಪಾಲಿಕೆಗೆ ಬಂದು ಸಾಹಾಯ ಮಾಡಬೇಕು.   ನಾಗರಿಕರಿಗೆ ಎಷ್ಟು  ಕರಗಳಿದ್ದರೆ ನಾವು ಸಹಾಯ ಮಾಡುತ್ತವೆ ಯಾವುದೇ ಒಂದು ದಂಡ ಹೆಚ್ಚಗೆ ಮಾಡುವುದಿಲ್ಲ ಎಂದರು.  ಸ್ಥಳದಲ್ಲಿಯ ಅಂಗಡಿ ಮಾಲ್ಲಿಕರಿಗೆ ಭೇಟಿ ನೀಡಿ ಕರ ವಸೂಲಿ ಬಗ್ಗೆ ಮಾಹಿತಿ ನೀಡಿದ್ದರು.
       ಮಹಾನಗರ ಪಾಲಿಕೆ ಕರ ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪರವಿನ ಬೇಗಂ, ನಗರ ಯೋಜನೆ ಮತ್ತು ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ, ಮಹ್ಮದ್ ಅಜಿಮೋದ್ದೀನ್, ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಪರವೀನ ಪಾಲಿಕೆ ಉಪ ಆಯುಕ್ತರಾದ ಆರ್.ಪಿ. ಜಾಧವ್, ಉಪ ಆಯುಕ್ತರು (ಕಂದಾಯ) ವಲಯ ಆಯುಕ್ತರುಗಳಾದ ರಮೇಶ ಪಟ್ಟೇದಾರ, ಉಮೇಶ ಚವ್ಹಾಣ, ಮುಜಾಮಿನ್ ಅಲ್ಲಮ್ ಮಹಾನಗರ ಪಾಲಿಕೆ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.