ಮಾರ್ಗದರ್ಶನದ ಶಾಶ್ವತ ಸಂಕೇತ ಪ್ರೀತಿಯ ತಂದೆ

Feb 28, 2025 - 22:53
 0
ಮಾರ್ಗದರ್ಶನದ ಶಾಶ್ವತ ಸಂಕೇತ ಪ್ರೀತಿಯ ತಂದೆ

ತಂದೆ ಎಂಬುದು ಕೇವಲ ಒಂದು ಪದವಲ್ಲ, ಅದು ಪ್ರೀತಿ, ತ್ಯಾಗ, ಮತ್ತು ಮಾರ್ಗದರ್ಶನದ ಶಾಶ್ವತ ಸಂಕೇತ. ಜನನದಿಂದ ಜೀವನದ ಪ್ರತಿಯೊಂದು ಹಂತದಲ್ಲೂ ತಂದೆ ತಮ್ಮ ಮಮತೆಯ ಚಾಯೆಯನ್ನು ನೀಡುತ್ತಾ, ಮಕ್ಕಳ ಭವಿಷ್ಯವನ್ನು ಬೆಳಗಿಸುವ ದೀಪವಾಗಿರುತ್ತಾರೆ.

ತಾಯಿ ಮಗುವಿನ ಮೊದಲ ಗುರುವಾಗಿದ್ದರೆ, ತಂದೆ ಜೀವನ ಪಾಠಗಳನ್ನು ಕಲಿಸುವ ಮೊದಲ ಶಿಕ್ಷಕರಾಗಿರುತ್ತಾರೆ. ಅವರ ಪ್ರೀತಿ ಮಾತುಗಳಲ್ಲಿ ವ್ಯಕ್ತವಾಗದೇ ಇರಬಹುದು, ಆದರೆ ಅವರ ಹೃದಯದಲ್ಲಿ ಸದಾ ಮಕ್ಕಳ ಕಲ್ಯಾಣವೇ ಶ್ರೇಷ್ಠ ಗುರಿಯಾಗಿದೆ. ತಂದೆಯ ಪ್ರೀತಿ ಸುಪ್ತವಾದರೂ ಅದನ್ನು ಅನುಭವಿಸುವಾಗ ಅದರ ಮಹತ್ವ ತಿಳಿಯುತ್ತದೆ.

ಜೀವನದ ಪ್ರತಿಯೊಂದು ಹಂತದಲ್ಲೂ ತಂದೆಯ ಪಾತ್ರ ಅಮೂಲ್ಯ ಮತ್ತು ಅವಿಭಾಜ್ಯ. ಅವರು ಮಕ್ಕಳ ಕನಸುಗಳಿಗೆ ಬಲವನ್ನೂ, ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ಹೋರಾಡುವ ಶಕ್ತಿಯನ್ನೂ ನೀಡುತ್ತಾರೆ. ತಂದೆಯ ಪ್ರೀತಿ, ಮಾರ್ಗದರ್ಶನ, ತ್ಯಾಗ, ಮತ್ತು ಅನಿವಾರ್ಯತೆ ಕುರಿತು ಈ ಲೇಖನ ಪ್ರಸ್ತಾಪಿಸುತ್ತದೆ.

ತಂದೆ ಪ್ರೀತಿ ಎಂದಾಗ ಅದು ಕೇವಲ ಒಂದು ಪದವಲ್ಲ ಅದು ನಮ್ಮ ಜೀವನದ ಶಕ್ತಿ ಪ್ರೀತಿ ಮತ್ತು ಮಾರ್ಗದರ್ಶನದ ಸತ್ಯವಾದ ಚಿತ್ರ, ಅವರ ಪ್ರೀತಿ ಅನಂತ ನಿಶ್ಚಲ ಮತ್ತು ಅತ್ಯಂತ ಅಮೂಲ್ಯವಾದ ಬೆಂಬಲವಾಗಿದೆ ತಂದೆ ಎಂದರೆ ಯಾವಾಗಲೂ ನಿರೀಕ್ಷೆಗಳಿಲ್ಲದೆ ನಿಜವಾದ ಹಿತ ಚಿಂತನೆ ಶಕ್ತಿಯ ಮತ್ತು ಸಮರ್ಪಣೆಯ ಪ್ರಕಾರ ಕೊಟ್ಟ ಪ್ರೀತಿ, ಒಂದು ಗಾಢವಾದ ನಂಬಿಕೆ ಅವರು ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಎಲ್ಲಾ ಸಮರ್ಥತೆಯನ್ನು ತ್ಯಾಗ ಮಾಡುತ್ತಾರೆ , ಅಪ್ಪನೆಂದರೆ ರಕ್ಷಣೆ ಇನ್ನೊಂದು ಹೆಸರು ಅವರ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ನಮಗೆ ನೀತಿಯನ್ನು ಆಚಾರ ವಿಚಾರದ ಮಾರ್ಗದರ್ಶನ ಜೀವನದ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬ ಪಾಠಗಳನ್ನು ನೀಡುತ್ತಾರೆ. ತಮ್ಮ ಸ್ವಂತ ಕನಸುಗಳನ್ನು ತಮ್ಮ ಮಕ್ಕಳ ಕನಸುಗಳಿಗೆ ಬದಲಾಯಿಸಿಕೊಳ್ಳುತ್ತಾರೆ ಹಾಗೂ ಮಕ್ಕಳ ಕನಸುಗಳಿಗೆ ಸಾಕಾರವಾಗಿ ನಿಲ್ಲುತ್ತಾರೆ , ತಂದೆ ಮಕ್ಕಳ ಮೊದಲ ಸ್ನೇಹಿತರಿದಂತೆ ಹಾಸ್ಯ ಸ್ನೇಹ ಮತ್ತು ಅನೇಕ ಸಂರಕ್ಷಣೆಗಳನ್ನು ಹಂಚಿಕೊಳ್ಳುತ್ತಾರೆ. ಅವರು ತಮ್ಮ ಮಕ್ಕಳಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಬೋಧಿಸುವ ಮೂಲಕ ನಾವು ಇಚ್ಛಿಸುವ ರೀತಿಯಲ್ಲಿ ನಮ್ಮ ಜೀವನವನ್ನು ಮುನ್ನಡೆಸಲು ಸಹಾಯ ಮಾಡುತ್ತಾರೆ 
"ಅಪ್ಪಾ" ಎಂಬ ಪದ ಕೇಳಿದಾಗ ನಮ್ಮ ಮನಸ್ಸಿನಲ್ಲಿ ತಕ್ಷಣವೇ ಅನೇಕ ಕ್ಷಣಗಳು ನೆನಪಾಗುತ್ತವೆ ಅವರು ನಿಜವಾಗಿಯೂ ನಮ್ಮ ಜೀವನದ ಅಡಿಪಾಯವಾಗಿದ್ದು ಶಕ್ತಿಯ ಚಿನ್ಹೆ ಎಂದರೆ ತಪ್ಪಾಗಲಾರದು ಅಪ್ಪನಿಂದ ನಾವು ಜೀವನದ ಮೌಲ್ಯಗಳನ್ನು ಕಲಿಯುತ್ತೇವೆ. ಅಪ್ಪನೊಂದಿಗೆ ಇರುವ ಸಮಯ ಕೇವಲ ಸಮಯವಿಲ್ಲ ಅದು ಜೀವನದ ಸಂತೋಷ ಮತ್ತು ನೆಮ್ಮದಿಯ ಕ್ಷಣಗಳು ಅವರು ನಮ್ಮೊಂದಿಗೆ ನಗುತ್ತಾ ನಮ್ಮ ದಿನದ ಮಾಸಿಕ ಒತ್ತಡವನ್ನು ನಿವಾರಿಸುತ್ತಾರೆ.
ಅಪ್ಪ ಎಂದರೆ ಆಕಾಶ ಅದು ಜೀವನದ ಗಾಢವಾದ ಅನುಭವವನ್ನು ಪ್ರತಿಬಿಂಬಿಸುತ್ತದೆ ಅವರು ನಮ್ಮ ಜೀವನದ ಅಮೂಲ್ಯವಾದ ಉಡುಗೊರೆಯಾಗಿದ್ದಾರೆ ನಮ್ಮ ಮನೆ ನಿಜವಾದ ನಾಯಕಪನೇ ತನ್ನ ಮಕ್ಕಳ ಬಾಳಿಗೆ ಧೈರ್ಯ ಪ್ರೀತಿ ಮತ್ತು ನಿರಂತರ ಬೆಂಬಲ ನೀಡಲು ತನ್ನ ಆಸೆಗಳನ್ನು ಮೀರಿ ಯಾವಾಗಲೂ ತನ್ನ ಮಕ್ಕಳ ಆನಂದವನ್ನು ಅರಿತುಕೊಂಡು ಅವರ ಭವಿಷ್ಯಕ್ಕಾಗಿ ಕ್ಷಮಿಸುವವನು ಅಪ್ಪನ ಪ್ರೀತಿ ಎಂದರೆ ಅದು ನಮ್ಮ ಬದುಕಿನ ಅಡಿಪಾಯ ಪ್ರೋತ್ಸಾಹ ಮಾರ್ಗದರ್ಶನ ಮತ್ತು ಶಕ್ತಿಯ ಶಾಶ್ವತ ಮೂಲವಾಗಿದೆ.

ತಂದೆ ಕೇವಲ ಒಂದು ಕುಟುಂಬದ ಮುಖ್ಯಸ್ಥರಷ್ಟೇ ಅಲ್ಲ, ಅವರು ಜೀವನ ಪಾಠಗಳನ್ನು ಕಲಿಸುವ ಪ್ರೇರಕಶಕ್ತಿಯುಳ್ಳ ವ್ಯಕ್ತಿ. ಅವರು ನೀಡುವ ಪ್ರೀತಿ ಮಾತುಗಳ ಮೂಲಕ ತೋರುವುದಿಲ್ಲ, ಆದರೆ ಕೃತ್ಯಗಳ ಮೂಲಕ ಪ್ರತಿಬಿಂಬಿಸುತ್ತದೆ. ನಮ್ಮ ಪ್ರಗತಿಯ ಹಿಂದೆ ಅವರ ಪರಿಶ್ರಮ ಮತ್ತು ತ್ಯಾಗ ಅಡಗಿರುವುದು ನಾವು ಯಾವತ್ತೂ ಮರೆಯಬಾರದು.

ನಾವು ಜೀವನದಲ್ಲಿ ಏನೇ ಸಾಧಿಸಿದರೂ ತಂದೆಯ ಪ್ರೇಮ ಮತ್ತು ಮಾರ್ಗದರ್ಶನವಿಲ್ಲದೆ ಅದು ಅಸಾಧ್ಯ. ಅವರು ನಮ್ಮ ಮೊದಲ ಹೀರೋ, ನಮ್ಮ ಗುರಿಯ ದಾರಿದೀಪ, ಮತ್ತು ನಮ್ಮ ಅಡಿಪಾಯ. ಅಂತಿಮವಾಗಿ, ತಂದೆಯ ಪ್ರೀತಿ ಎಂದರೆ ಅದು ಕೇವಲ ಪ್ರೀತಿಯಲ್ಲ, ಅದು ಬದುಕನ್ನು ಬೆಳಗಿಸುವ ದಿವ್ಯ ಶಕ್ತಿ.

ವಿದ್ಯಾಶ್ರೀ ಮೇಗಾಡಿ 
ಮಹಿಳಾ ವಿವಿ ವಿಜಯಪುರ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.