ಸಂತಸದ ಸೊಬಗು ತಂದ ಅಗಡಿ ಫಾರ್ಮ ಪ್ರವಾಸ

Jan 30, 2025 - 22:44
Jan 31, 2025 - 00:19
 0
ಸಂತಸದ ಸೊಬಗು ತಂದ ಅಗಡಿ ಫಾರ್ಮ ಪ್ರವಾಸ
ಸಂತೋಷ ನರೇಂದ್ರ
ಅAದು ಜನವರಿ ೨೬ ಗಣರಾಜ್ಯೋತ್ಸವ ಆಚರಣೆಯಲ್ಲಿ ಎಲ್ಲರೂ ತೊಡಗಿದ್ದರು. ನಾವು ಕೂಡ ನಮ್ಮ ಕಚೇರಿಯಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದೆವು. ತದನಂತರ ನಮ್ಮ ಕಚೇರಿಯ ಸಿಬ್ಬಂದಿಗಳೆಲ್ಲಾ ಸೇರಿ ಹುಬ್ಬಳ್ಳಿಯಿಂದ ಸುಮಾರು ೩೦ ಕಿ.ಮೀ. ದೂರದಲ್ಲಿರುವ ಅಗಡಿ ಫಾರ್ಮ್ಗೆ ತೆರೆಳಿದೆವು. ಈ ಅಗಡಿ ಫಾರ್ಮ ಹೋಗುವ ವಿಚಾರ ಈ ಮೊದಲೇ ತೀರ್ಮಾನಿಸಲಾಗಿತ್ತು. ಅಲ್ಲದೇ ಎಲ್ಲರ ಒಪ್ಪಿಗೆಯನ್ನು ಸಹ ಪಡೆದುಕೊಳ್ಳಲಾಗಿತ್ತು.
ಅಗಡಿ ತೋಟ ಒಂದು ಸುಂದರವಾದ ತೋಟ. ಇದು ಮನೋರಂಜನೆಗೆ ಹೇಳಿ ಮಾಡಿಸಿದ ತಾಣವಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರ ಗ್ರಾಮದ ಬಳಿ ಅಗಡಿ ತೋಟವಿದೆ. ಈಗಾಗಲೇ ತೋಟಕ್ಕೆ ಹಲವಾರು ಪ್ರವಾಸಿಗರು ಮತ್ತು ಕುಟುಂಬಸ್ಥರು ಭೇಟಿ ನೀಡಿದ ಹಿನ್ನೆಲೆಯಲ್ಲಿ ನಾವು ಅಲ್ಲಿಗೆ ಹೋಗಬೇಕು ಎಂದು ನಿರ್ಧಾರ ಮಾಡಿದ್ದೇವು. ಅಲ್ಲದೇ ಅಗಡಿ ತೋಟದ ಮಾಹಿತಿಯನ್ನು ಗೆಳೆಯ ರಮೇಶ ಸವಿವರವಾಗಿ ವಿವರಿಸಿದ್ದನು. ಹೀಗಾಗಿ ಯಾರೂ ಸಹ ತಕರಾರು ಮಾಡದೇ ಹೋಗಲು ಒಪ್ಪಿಗೆ ಸೂಚಿಸಿದ್ದರು.
 
ಗಣರಾಜ್ಯೋತ್ಸವದ ಧ್ವಜಾರೋಹಣ ಮುಗಿದ ಬಳಿಕ, ಎಲ್ಲರೂ ಕಚೇರಿ ಮುಂಭಾಗದಲ್ಲಿದ್ದ ವಾಹನದಲ್ಲಿ ಕುಳಿತುಕೊಂಡೆವು. ನಂತರ ಹುಬ್ಬಳ್ಳಿಯಿಂದ ಅಗಡಿ ತೋಟದ ಕೆಡೆಗೆ ವಾಹನ ಚಲಿಸತೊಡಗಿತು. ದಾರಿಯ ಮಧ್ಯದಲ್ಲಿ ವಾಹನಕ್ಕೆ ಇಂಧನವನ್ನು ಹಾಕಿಸಿಕೊಳ್ಳಲಾಯಿತು. ವಾಹನದಲ್ಲಿ ಸಣ್ಣ ನಗೆ ಚಟಾಕಿ, ಹಾಡು ಹಾಡುತ್ತ ಅಗಡಿ ತೋಟ ತಲುಪಿದೆವು. ಅಗಡಿ ತೋಟದ ಪ್ರವೇಶದ್ವಾರದಲ್ಲಿ ತಿನ್ನಲು ಶೇಂಗಾ ಚೆಕ್ಕಿ ಕೊಟ್ಟರು. ಅದನ್ನು ತಿಂದು ಮುಂದೆ ನಡೆದೆವು. ಮರದ ಎಲೆಗಳಿಂದ ಮಾಡಿದ ಕಿರೀಟ್ ತೊಡಿಸಿದರು. ಆ ಘಳಿಗೆಯಲ್ಲಿ ಕೆಲವು ಫೋಟೊಗಳನ್ನು ಕ್ಲಿಕಿಸಿಕೊಂಡು ಮುಂದೆ ಸಾಗಿದೆವು. ಟಿಕೆಟ್ ಕೌಂಟರ್ ಬಳಿ ಎಲ್ಲರೂ ಟಿಕೆಟ್ ಪಡೆದು, ಪಾನೀಯವನ್ನು ಸೇವಿಸಲು ನೀಡಿದರು. ಬಳಿಕ ಕೊಂಚ ದೂರ ಸಾಗಿದ ತಕ್ಷಣ ತಿನ್ನಲು ಮತ್ತೆ ಕರಿ ಕಲ್ಲಂಗಡಿ ಹಣ್ಣನ್ನು ಕೊಟ್ಟರು. ಹಣ್ಣು ತಿಂದು ಸ್ವಲ್ಪ ಹೊತ್ತು ದಣಿವಾರಿಸಿಕೊಂಡೆವು. ಬೆಳಿಗ್ಗಿನ ಉಪಹಾರ ಸೇವಿಸಿ, ನಿಂಬೆ ಹಣ್ಣಿನ ಚಹಾವನ್ನು ಕುಡಿದೆವು.
 
ಸಾಹಸಮಯ ಆಟ ಆಡುವ ಸ್ಥಳಕ್ಕೆ ಧಾವಿಸಿ, ಸಾಹಸಮಯ ಆಟಗಳನ್ನು ಆಡಿ ನಲಿದೆವು. ಹಳೆ ಕಾಲದ ಕಬ್ಬಿನ ರಸ ತೆಗೆಯುವ ಯಂತ್ರದಿAದ ಕಬ್ಬಿನ ರಸವನ್ನು ಸ್ವಯಂ ನಾವೇ ತೆಗೆದು ಕುಡಿದೆವು. ಉತ್ತರ ಕರ್ನಾಟಕ ಶೈಲಿಯ ಉಡುಪುಗಳನ್ನು ಧರಿಸದ ತಕ್ಷಣ ನಾವೇ ಹಳೆಯ ಕಾಲದ ಹಿರಿಯರನ್ನು ನೆನೆಯುವ ರೀತಿಯಲ್ಲಿ ಕನ್ನಡಿಯಲ್ಲಿ ಗೋಚರಿಸಿದೆವು. ಕೆಲವೊಂದಿಷ್ಟು ಚಿತ್ರಗಳನ್ನು ತೆಗೆದುಕೊಂಡೆವು. ಹತ್ತಿರದಲ್ಲಿ ಇದ್ದ ಎತ್ತಿನಗಾಡಿಯನ್ನು ಏರಿ ಏಲ್ಲರೂ ಫೋಟೊಗಳನ್ನು ಕ್ಲಿಕಿಸಿಕೊಂಡರು. ಒಂಟೆ, ಹಳೆಯ ವಾಹನ ಅಂಬಾಸಿಡರ್ ಕಾರು, ಹಳೆಯ ಮೋಟರ್ ಸೈಕಲ್ ಎಂ ೮೦ ಹಾಗೂ ಸೈಕಲ್ ಗಾಡಿಗಳು ಮತ್ತು ಜೋಕಾಲಿಗಳನ್ನು ಆಡಿದೆವು. ಅಷ್ಟೇಲ್ಲಾ ಆಡುವುದರಲ್ಲಿ ದಣಿವು ಆಗಿತ್ತು. ಅಲ್ಲದೇ ಬಿಸಿಲೂ ಕೂಡ ನೆತ್ತಿ ಮೇಲೆ ಇದ್ದಿದ್ದರಿಂದ ಗೋಲಿಸೋಡಾ ಕುಡಿದು ತಂಪಾದೆವು. ಸೀರೆ ನೈಯುವ ಮಗ್ಗಗಳು, ಜ್ಯೋತಿಷ್ಯ ಶಾಸ್ತç ಹೇಳುವವರೂ ಕೂಡ ಇದ್ದರು. ಮುಂದೆ ಸಾಗಿದಾಗ ಮ್ಯಾಜಿಕ್ ಮಾಡುವವನ ಬಳಿ ಕುಳಿತುಕೊಂಡೆವು. ವಿಧ ವಿಧವಾದ ಮ್ಯಾಜಿಕ್ ಶೋಗಳನ್ನು ನೋಡಿ ರೋಮಾಂಚನವಾದೆವು. ಕೊಳದ ಬಳಿ ತೆರಳಿ, ದೋಣಿ ವಿಹಾರ ಮಾಡಿದೆವು. ಎಟಿವಿ ಬೈಕ್‌ಗಳನ್ನು ಓಡಿಸುವ ಜಾಗಕ್ಕೆ ತೆರೆಳಿದೆವು. ಅಲ್ಲಿ ಎಲ್ಲರೂ ಒಂದೊAದು ಸುತ್ತು ಬೈಕ್ ರೈಡ್ ಮಾಡಿ, ಖುಷಿ ಪಟ್ಟೆವುಈ ಸುಂದರ ಕ್ಷಣಗಳ ಫೋಟೊ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಂಡು, ಪಕ್ಕದಲ್ಲಿಯೇ ಓಡಾಡುತ್ತಿದ್ದ ಎತ್ತರವಾದ ಉಷ್ಟç ಪಕ್ಷಿಗಳನ್ನು ಕಂಡೆವು.
ಮಳೆಯ ನೃತ್ಯವನ್ನು ಆಡುತ್ತಿದ್ದ ಜಾಗಕ್ಕೆ ತೆರಳಿದೆವು. ಅಲ್ಲಿ ರಾಗಿ ಗಂಜಿ ಹಾಗೂ ಹುಣಸೆ ಜಿಗಳೆ ಸವಿದೆವು. ಇಷ್ಟೇಲ್ಲ ಆಡುವುದರಲ್ಲಿ ಹೊಟ್ಟೆಯೊಳಗೆ ಹುಳ ಓಡಾಡುತ್ತಿತ್ತು. ಊಟದ ಕೌಂಟರ್ ಬಳಿ ಎಲ್ಲರೂ ಧಾವಿಸಿ ಮಣ್ಣಿನ ತಟ್ಟೆಯಲ್ಲಿ ಉತ್ತರ ಕರ್ನಾಟಕ ಶೈಲಿಯ ೨೦ಕ್ಕೂ ಹೆಚ್ಚು ಬಗೆ ಬಗೆಯ ಖಾದ್ಯಗಳನ್ನು  ಊಟದಲ್ಲಿ ಸವಿದೆವು. ಮಣ್ಣಿನ ಲೋಟದಲ್ಲಿ ತಂಪಾದ ನೀರನ್ನು ಕುಡಿದೆವು. ನಂತರ ಮಳೆಯ ನೃತ್ಯಕ್ಕೆ ಮರಳಿ ನೃತ್ಯ ಮಾಡಿ ನಲಿದೆವು. ಈಜುಕೊಳಕ್ಕೆ ಇಳಿದು ಕೆಲವು ಸಮಯದವರೆಗೂ ನೀರಿನಲ್ಲಿ ಈಜಿ ಆನಂದಿಸಿದೆವು. ೪ ಗಂಟೆಯವರೆಗೆ ಈಜುಕೊಳವನ್ನು ಬಿಟ್ಟು ಹೊರ ಬರಲಿಲ್ಲ.
ಸಂಜೆ ೪.೩೦ ಗಂಟೆಗೆ ಅಗಡಿ ತೋಟದಿಂದ ೨೦ ಕಿ.ಮೀ. ದೂರದಲ್ಲಿರುವ ಮುಂಡಗೋಡಕ್ಕೆ ತೆರಳಿದೆವು. ಮುಂಡಗೋಡದ ಟಿಬೇಟಿಯನ್ ಕ್ಯಾಂಪ್ ತಲುಪುವಷ್ಟರಲ್ಲಿ ಸಂಜೆ ೫ ಗಂಟೆ ಸಮಯವಾಗಿತ್ತು. ಸಮಯದ ಅಭಾವ ಇರುವುದರಿಂದ ತಡ ಮಾಡದೇ ಎಲ್ಲರೂ ಸೇರಿ ಒಳ ಪ್ರವೇಶಿಸಿ ವಿಶಾಲವಾದ ಬುದ್ಧನ ವಿಗ್ರಹಗಳನ್ನು ನೋಡಿ ಕಣ್ತುಂಬಿಕೊAಡೆವು. ಅಲ್ಲಿನ ಧ್ಯಾನದ ವಸ್ತುಗಳನ್ನು ಕಂಡು ಬೆರಗಾದೆವು. ಅವರ ಧರಿಸಿದ ಉಡುಗೆ ತೊಡುಗೆಗಳನ್ನು ನೋಡಿ ಅವರ ಪ್ರಾರ್ಥನಾ ಮಂದಿರಗಳನ್ನು ವೀಕ್ಷಿಸಿದೆವು. ಬುದ್ಧನ ಹಾಗೆ ಶಾಂತಿ, ಅಹಿಂಸೆ, ಧ್ಯಾನ ಮಾಡುವ ಅಭ್ಯಾಸಗಳನ್ನು ಎಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿದುಕೊಂಡು ಅಲ್ಲಿಂದ ವಾಪಸ್ಸು ಸಂಜೆ ಚಹಾ ಸೇವಿಸಿ, ಮರಳಿ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿದೆವು. ಅಂದಿನ ಪ್ರವಾಸದ ಮೋಜು ಮಸ್ತಿಗಳನ್ನು ಇನ್ನೂ ಸಹ ನನ್ನ ತಲೆಯಲ್ಲಿ ತೇಲಾಡುತ್ತಿವೆ. ಮರಳಿ ಇಂತಹ ಅಮೋಘ ಪ್ರವಾಸವನ್ನು ಕೈಗೊಳ್ಳಬೇಕು ಎಂದು ಮನದಲ್ಲಿ ಕಾಡುತ್ತಿದೆ. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.