ಆಸ್ತಿ ಅಂತಸ್ತುಕ್ಕಿಂತ ಅಭಿಮಾನ ದೊಡ್ಡದು : ಅಂಡಗಿ

ಕಲಬುರಗಿ : ಜನ್ಮ ಕೊಟ್ಟ ತಾಯಿ, ತಂದೆ ಶಿಕ್ಷಣ ನೀಡಿದ ಗುರುಗಳು ನಮ್ಮ ಊರು, ನಮ್ಮ ಶಾಲೆ ಎಂಬ ಅಭಿಮಾನ ಮತ್ತು ಪ್ರೀತಿ ತೋರೊಸುವುದೇ ಗುರುವಿಗೆ ಅರ್ಪಿಸುವ ಗುರು ಕಾಣಿಕೆ ಎಲ್ಲಕ್ಕಿಂತ ದೊಡ್ಡದು. ಅಜಾತ ಶತ್ರು ಎಂದು ಪ್ರಖ್ಯಾತಿಗಳಿಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹರಿಕಾರರಾದ ದಿವಂಗತ ಮಾಜಿ ಮುಖ್ಯಮಂತ್ರಿ ಎನ್ ಧರಮ್ ಸಿಂಗ್ ಅವರ ಕುಟುಂಬದ ಶಾಲೆಯಲ್ಲಿ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು, ಅಭಿಮಾನದ ಸಂಗತಿ ಎಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಹೇಳಿದರು. ಜನವರಿ ೨೫ ರಂದು ರಾಜುವಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಮಕ್ಕಳ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಮಕ್ಕಳು ಕೂಡ ಶಿಕ್ಷಣ ಕಲಿತು ಈ ಭಾಗದ ಅಭಿವೃದ್ಧಿಗಾಗಿ ದುಡಿಯುವ ಮಹಾನ್ ವ್ಯಕ್ತಿಗಳಾಗಿ ಬೆಳೆಯಲಿ ಎಂದರು.
ಈ ಶಾಲೆ ಸಣ್ಣ ಸಣ್ಣ ಮಕ್ಕಳು ಪಠ್ಯದ ಓದಿನೊಂದಿಗೆ ಪಠ್ಯೇತರ ಚಟುವಟಿಕೆ ಹಮ್ಮಿಕೊಳ್ಳುತ್ತಿರುವುದು ಮಕ್ಕಳ ಬುದ್ಧಿ ಮಟ್ಟ ಹಾಗೂ ದೈಹಿಕವಾಗಿ ಸಬಲರಾಗಲು ಅನುಕೂಲವಾಗುತ್ತಿದೆ ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ನಾಯಕೋಡಿ ಮಾತನಾಡಿದರು.
ಮಹಾನಗರ ಪಾಲಿಕೆಯ ಸದಸ್ಯೆ ಯಂಕಮ್ಮ ಗುತ್ತೇದಾರ ವಿದ್ಯಾನಗರ ವೆಂಕಯ್ಯ ಸೋಸಾಯಿಟಿ ಅಧ್ಯಕ್ಷರು ಮಲ್ಲಿನಾಥ ದೇಶಮುಖ ಆರ್ಯನ್ ಶಿಕ್ಷಣ ಸಂಸ್ಥೆಯ ಚೇರಮನ್‌ರಾದ ಸಂಜಯ ಸಿಂಗ್ ರಾಜವಿಕ ಶಾಲೆಯ ಮುಖ್ಯಗುರುಗಳಾದ ಶೃತಿ ನಾಯ್ಡು, ಎಮ್.ಎಸ್.ಡಬ್ಲೂö್ಯ ಪ್ರಾಚಾರ್ಯರಾದ ಶ್ರೀದೇವಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕುಮಾರಿ. ಸೃಷ್ಟಿ, ಕುಮಾರ ರಾಹುಲ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ಮಾಲಿಪಾಟೀಲ್ ಸ್ವಾಗತಿಸಿದರು. ಶಾಲೆಯ ಶಿಕ್ಷಕರಾದ ರಾಜೇಶ್ವರಿ ಪಾಟೀಲ್, ನಸೀಮ್ ಜಿ.ಎ, ನಿರ್ಮಲಾ ಆರ್.ಕೆ, ಜಿಯಾ ನದಾಫ್, ಶಾಲೆಯ ಮಕ್ಕಳು ಹಾಗೂ ಪಾಲಕರು ಉಪಸ್ಥಿತರಿದ್ದರು.