ಮಳೆಯಿಂದ ಮನೆಗಳು, ರಸ್ತೆಗಳು ಸೇತುವೆಗಳು ಹಾನಿಯಾದಲ್ಲಿ ತಕ್ಷಣ ಕ್ರಮಕೈಗೊಳ್ಳಲು ಡಿ.ಸಿ ಸೂಚನೆ

Oct 4, 2024 - 08:47
 0
ಮಳೆಯಿಂದ ಮನೆಗಳು, ರಸ್ತೆಗಳು ಸೇತುವೆಗಳು ಹಾನಿಯಾದಲ್ಲಿ ತಕ್ಷಣ ಕ್ರಮಕೈಗೊಳ್ಳಲು ಡಿ.ಸಿ ಸೂಚನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಕಲಬುರಗಿ: ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದ ಮನೆಗಳು, ರಸ್ತೆಗಳು/ಸೇತುವೆಗಳು ಹಾನಿಯಾದ ಮತ್ತು ಮಣ್ಣು ಕೊಚ್ಚಿಕೊಂಡು ಹೋಗಿದ್ದು ಹಾಗೂ ಕೆಲವು ಸ್ಥಳಗಳಲ್ಲಿ ನೀರಿನ ರಬಸಕ್ಕೆ ಜನ/ಜಾನುವಾರುಗಳು ಕೊಚ್ಚಿಕೊಂಡು ಹೊಗಿ ಮೃತ ಪಟ್ಟಿರುವ ಘಟನೆಗಳು ಸಂಭವಿಸಿರುವ ಕುರಿತು ವರದಿಯಾಗಿದ್ದಾರೆ ಕೊಡಲೇ ಸಂಬಂಧಪಟ್ಟ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ಸಂಬಂದಪಟ್ಟ ಫಲಾನಿಭವಿಗಳಿ ತುರ್ತಾಗಿ ಸರಕಾರದ ಓಆಖಈ/Sಆಖಈ ಮಾರ್ಗಸೂಚಿನ್ವಯ ಪರಿಹಾರ ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್  ಅಧಿಕಾರಿಗಳಿಗೆ ಸೂಚನೆ ನೀಡಿದರು.


ಗುರುವಾರದಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ   ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ   ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ  ಕಲಬುರಗಿ ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಹಾಗೂ ಭಾರಿ ಮಳೆಯಿಂದ ಹಾನಿಯಾದ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ  ನಡೆಸಿದರು.


.ಅಕ್ಟೋಬರ್ ಮತ್ತು ಡಿಸೆಂಬರ್ ರಾಜ್ಯ ಬಹುತೇಕ ಭಾಗಗಳಲ್ಲಿ ವಾಡಿಕೆಕ್ಕಿಂತ ಹೆಚ್ಚು ಮಳೆ ಆಗುವ ಭಾರತೀ ಹವಾಮಾನ ಮುನ್ಸೂಚನೆ ಇದೆ. ಅಕ್ಟೋಬರ್ ತಿಂಗಳಿನಲ್ಲಿ ವಾಡಿಕೆಯಂತೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ನದಿಯ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಒಡಾಡದ ರೀತಿಯಲ್ಲಿ ತಾವುಗಳು ಕ್ರಮವಹಿಸಬೇಕು ಸಾರ್ವಜನಕರಿಗೆ ಯಾವುದೇ ಹಾನಿಕರ ಘಟನೆಗಳು ಆಗದಂತೆ ಮುನ್ನಚ್ಚರಿಕೆ ವಹಿಸಲು ಸೂಚಿಸಿದರು.
 ಜಿಲ್ಲೆಯ ೩೫೬ ಗ್ರಾಮಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ  ವಹಿಸಲು ಎಲ್ಲಾ ಗ್ರಾಮಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು  ಜನಪ್ರತಿನಿಧಿಗಳ ಜತೆ ಸಭೆಗಳನ್ನು ಮಾಡಿ ಪ್ರವಾಹದ ಕುರಿತು ಮುನ್ನಚ್ಚರಿಕೆ ಕ್ರಮಕೈಗೊಳ್ಳಬೇಕು ಮುಂದಿನ ಐದು ದಿನಗಳಲ್ಲಿ ಹವಾಮಾನ ಇಲಾಖೆ  ಮುನ್ಸೂಚನೆಯಿಂದ  ವ್ಯಾಪಕ ಹಾನಿ ತುಂತುರ  ಮಳೆ  ಹಾಗೂ ಸಾಧರಣ ಮಳೆಯಾಗುವ  ಮುನ್ಸೂಚನೆ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ಚಂದ್ರಪಳ್ಳಿ ಜಲಾಶಯದ ಜಲಾಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಒಳಹರಿವು ಬರುತ್ತಿದೆ.  ಚಂದ್ರಪಳ್ಳಿ ಆಣೆಕಟ್ಟಿನ ನದಿ ಪಾತ್ರ ರೈತರು, ಸಾರ್ವಜನಿಕರು, ರೈತ ಮಹಿಳೆಯರು, ದನಕರುಗಳು  ನೀರು ಕುಡಿಸುವುದಾಗಲ್ಲಿ ಹಳ್ಳದಲ್ಲಿ ಇಳಿಯುವುದಾಗಲಿ ಮೀನು ಹಿಡಿಯುವುದಾಗಲು ಬಟ್ಟೆ ಒಗ್ಗೆಯುವುದಾಗಲ್ಲಿ ಇನ್ನಿತರ ಯಾವುದೇ ಕಾರಣಕ್ಕೆ ನದಿಯಲ್ಲಿ ಪಕ್ಕದಲ್ಲಿ ಬರಕೂಡದು ಎಂದು ಜಿಲ್ಲಾದಿಕಾರಿ  ಎಚ್ಚರಿಕೆ ನೀಡಿದರು.


ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಈ ಯೋಜನೆ ಒಟ್ಟು ೨೦೪೦೬೧   ರೈತರು ನೋಂದಣಿ ಮಾಡಿ ಕೊಂಡಿರುತ್ತಾರೆ, ಸ್ಥಳಿಯ ಪ್ರಕೃತಿ ವಿಕೋಪದಡಿ ಒಟ್ಟು ೯೮೨೫೩ ದೂರುಗಳು ಬಂದಿದ್ದು, ಅದರಲ್ಲಿ ೪೫೪೯೦ ದೂರುಗಳ ಸರ್ವೆ ಕಾರ್ಯ ಮುಗಿದ್ದು, ಉಳಿದ ಸರ್ವೆ ಕಾರ್ಯ ೨-೩ ದಿನದಲ್ಲಿ ಪೂರ್ಣಗೊಳ್ಳಿಸುವುದಾಗಿ ಜಿಂಟಿ ನಿರ್ಧೇಶಕರು ಕೃಷಿ ಇಲಾಖೆ ತಿಳಿಸಿದರು, ಅದಕ್ಕೆ ಜಿಲ್ಲಾಧಿಕಾರಿಗಳು ಕೊಡಲೇ ಎಲ್ಲಾ ಸ್ವಿಕೃತವಾದ ದೂರುಗಳ ಸರ್ವ ಕಾರ್ಯ ತುರ್ತಾಗಿ ಮುಗಿಸಿ ಸಂಬಂದಪಟ್ಟ ಎಲ್ಲಾ ರೈತ ಪಲಾನುಭವಿಗಳಿಗೆ ಬೆಳೆ ವಿಮೆ ಬರುವ ಹಾಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ  
ಈಗಾಗಲೇ  ಸೆಪ್ಟೆಂಬರ್ ಮತ್ತು ಆಕ್ಟೋಬರ್ ಬೆಳೆಹಾನಿಯಾದ ಮಾಹಿತಿಯನ್ನು ತುರ್ತಾಗಿ ಪರಿಹಾರ ತಂತ್ತಾಂಶದಲ್ಲಿ ನಮೂದಿಸಲು ಎಲ್ಲ ಅಧಿಕಾರಿಗಳಿಗೆ ತಿಳಿಸಲಾಯಿತು. ಜೂನ್ ೧ ರಿಂದ  ಅಕ್ಟೋಬರ್ ೧ ರವರೆಗೆ ಪರಿಹಾರ ಮಾಹಿತಿಯನ್ನು ಹಾನಿಯಾದ ಮನೆಗಳಿಗೆ ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ಕೃಷಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಪಡೆದುಕೊಂಡು ರೈತರ ಬೀಜ ರಸಗೊಬ್ಬರಗಳ ಕೊರತೆಯಾಗದಂತೆ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೂಚನೆ ನೀಡಿದರು.


ಹಾನಿಯಾದ ಬೆಳೆಗಳ ಕುರಿತು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಕಾರ್ಯಾ ಪ್ರಗತಿ ಹಂತದಲ್ಲಿ ಎಂದು ಜಂಟಿ ಕೃಷಿ ನಿದೇಶಕರು, ಕಲಬುರಗಿ ಇವರು  ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಮಳೆಯಿಂದ ಸೋರಿಕೆ ಆಗುತ್ತಿದ್ದಲ್ಲಿ ಕೊಡಲೇ ಅಂತಹ ಕಟ್ಟಡಗಳನ್ನು ಗುರುತಿಸಿ ದುರಸ್ತಿ ಕೈಗೊಳ್ಳಬೇಕು. ಇದೇ ರೀತಿ ಖಾಸಗಿ ಶಾಲೆ ಮೇಲೆಯೂ ನಿಗಾ ವಹಿಸಬೇಕು. ಮೇಲ್ಚವಣೆ ಕುಸಿದು ಮಕ್ಕಳಿಗೆ ಹಾನಿ ಪ್ರಕರಣ ಎಲ್ಲಿಯೂ ವರದಿಯಾಗಬಾರದು. ಕೊಡಲೆ ಎಚ್ಚೆತ್ತುಕೊಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅದೇ ರೀತಿಯ ಅಂಗನವಾಡಿ ಕಟ್ಟಡಗಳ ಬಗ್ಗೆಯೂ ಮಹಿಳಾ ಮತ್ತು ಮಕ್ಕಳ ಇಲಾಖೆ ಮನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.


ಕಲಬುರಗಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವುದನ್ನು ಪರೀಕ್ಷಿಸಬೇಕು. ಎಲ್ಲಾದರೂ ಸೋರಿಕೆ ಇದ್ದಲ್ಲಿ ಕೊಡಲೇ ದುರಸ್ತಿ ಮಾಡಬೇಕು. ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಸೇರದಂತೆ ಎಚ್ಚರ ವಹಿಸಬೇಕು, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲೆಯ ಎಲ್ಲಾ ಪೌರ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನೀರು ಸರಗಾವಾಗಿ ಹೋಗುಲು ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಅಧಿಕಾರಿಗಳಿಗೆಸೂಚಿಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ. ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಎಸ್.ಪಿ. ಎನ್. ಶ್ರೀನಿಧಿ ಕಲಬುರಗಿ ಸಹಾಯಕ ಆಯುಕ್ತೆ  ಸಾಹಿತ್ಯ ಎಂ.ಎ.    ಸೇಡಂ. ಸಹಾಯಕ ಆಯುಕ್ತ. ಪ್ರಭುರೆಡ್ಡಿ  ಪ್ರೊಬೇಷನರಿ ಐ.ಎ.ಎಸ್. ಮೀನಾಕ್ಷಿ ಆರ್ಯ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ  ಉಪಸ್ಥಿತರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.