ರಕ್ತದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸಗಳು ಮಾಡಬೇಕು : ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

Oct 2, 2024 - 22:56
 0
ರಕ್ತದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸಗಳು ಮಾಡಬೇಕು : ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಕಲಬುರಗಿ: ರಕ್ತದಾನದ ಮಹತ್ವದ ಬಗ್ಗೆ  ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಜಿಲ್ಲೆಯ ಅನೇಕ ಅಭಿಯಾನಗಳಿವೆ ಸೇವಾ ಸಂಘಗಳು ಇವೆ ಆದರೂ ನಾವೂ ಎರಡು ಮೂರು ಹೆಜ್ಜೆ ಮುಂದೆ ಹೋಗುವ ಅಗತ್ಯ ಇದೆ. ಒಂದು ಜೀವ ಉಳಿಸುವ ರೀತಿಯಲ್ಲಿ ನಾವು ಕಾರ್ಯ ಮಾಡಬೇಕು. ಜಿಲ್ಲಾಧಿಕಾರಿ ಬಿ ಘೌಜಿಯಾ ತರನ್ನುಮ್ ಅವರು ಹೇಳಿದರು.
ಮಂಗಳವಾರದಂದು ಹಳೆಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಆಸ್ಪತ್ರೆ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನಷನ್ ಸೊಸೈಟಿ,ಬೆಂಗಳೂರು,ಕರ್ನಾಟಕ ರಾಜ್ಯ ರಕ್ತ ಚಾಲನಾ ಪರಿಷತ್,ಬೆಂಗಳೂರು,ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಕಲಬುರಗಿ, ಜಿಲ್ಲಾ ಸಾರ್ವಜನಿಕ ಆಸ್ಪತ್ರೆ,ಜಿಲ್ಲೆ ರಕ್ತ ನಿಧಿ ಕೇಂದ್ರಗಳು ರೆಡ್ ರಿಬ್ಬನ್ ಕ್ಲಬಗಳು, ಸ್ವಯಂ ಸೇವಾ ಸಂಸ್ಥೆಗಳು,ಎನ್. ಎಸ್. ಎಸ್. ಘಟಕ. ಕಲಬುರಗಿ ಇವರಗಳ ಸಂಯುಕ್ತಶ್ರಾಯದಲ್ಲಿ ಸಸಿಗೆ ನೀರೆರೆಯುವ  ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ ವೈದ್ಯಾಧಿಕಾರಿಗಳು ಡಾ|| ಮಮತಾ ಪಾಟೀಲ್ ಮಾತನಾಡಿ, ೧೮ ವರ್ಷ ಮೇಲ್ಪಟ್ಟ ಅರ್ಹ ವ್ಯಕ್ತಿಗಳು ರಕ್ತಧಾನ ಮಾಡಬೇಕು ರಕ್ತದಾನ ಮಾಡುವದರಿಂದ ನಮ್ಮ ಆರೋಗ್ಯದ ದೃಷ್ಟಿಯಿಂದ ಕೂಡ ಒಳ್ಳೆಯದಾಗಿದೆ.ರಕ್ತದಾನ ಮಾಡುವುದು ಇನ್ನೊಬರ ಜೀವ ಉಳಿಸುವಂತ ಒಂದು ಪುಣ್ಯದ ಕೆಲಸವಾಗಿದೆ.ಹಾಗಾಗಿ ರಕ್ತದಾನ ಮಾಡಲು ಹೆಚ್ಚಿನ ಜನರು ಕಾಳಜಿವಹಿಸಬೇಕೆಂದರು.
  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ|| ಶರಣಬಸಪ್ಪಾ ಕ್ಯಾತನಾಳ ಅಧ್ಯಕ್ಷತೆ ವಹಿಸಿ ಮಾತನಾಡಿ   ಆರೋಗ್ಯ ತಪಾಸಣೆ ಮಾಡಿಕೊಂಡು ಸಲಹೆ ಸೂಚನೆಗಳನ್ನು ಪಡೆದುಕೊಂಡು ರಕ್ತದಾನ ಮಾಡಬಹುದಾಗಿದೆ ಎಂದರು.
ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆ ಜಾಥಾಕ್ಕೆ ಚಾಲನೆ: ರಕ್ತದಾನ ಮಹತ್ವವೆನೆಂದರೆ ೧೮ವರ್ಷ ಮೇಲ್ಪಟ್ಟ  ಪ್ರತಿಯೊಬ್ಬರು ಅರ್ಹ ವ್ಯಕ್ತಿಗಳು ರಕ್ತದಾನ ಮಾಡಬೇಕು ಜನರ ಜೀವಗಳನ್ನ ಉಳಿಸಬೇಕು ಎಂಬ ಧ್ಯಯದೊಂದಿಗೆ ಈ ರಕ್ತದಾನ ಆಚರಿಸಲಾಗುತ್ತಿದೆ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಶ್ರೀನಿವಾಸ್ ನವಲೆ ಅವರು ಹೇಳಿದರು.
ದೇಶದ ಸೈನಿಕರು ಗಡಿಯಲ್ಲಿ ತಮ್ಮ ದೇಹ ತ್ಯಾಗ ಮಾಡುವ ಮೂಲಕ  ಹೇಗೆ ನಮ್ಮ ದೇಶದ ರಕ್ಷಣೆಯನ್ನ ಮಾಡುತ್ತಿದ್ದರೆ ಹಾಗೆ ನಾವು ಸಹ ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸುವಂತಾಗಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ವಿಭಾಗೀಯ ಸಹನಿರ್ದೇಶಕರು ಡಾ|| ಎ.ಎಸ್.ರುದ್ರವಾಡಿ, ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಾಲಯ ಉಪ ನಿರ್ದೇಶಕರು ಡಾ|| ಶರಣಬಸಪ್ಪ ಗಣಜಲಖೇಡ್, ್ಲ  ಖ.ಅ.ಊ ಆಫಿಸರ್ ವಿವೇಕನಾಂದ ರೆಡ್ಡಿ, ವಿಭಾಗೀಯ ಜಂಟಿ ನಿರ್ದೇಶಕರ ಕಾರ್ಯಾಲಯ ಕಲಬುರಗಿ ಜಿಲ್ಲಾ ಆಸ್ಪತ್ರೆ ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧಿಕ್ಷಕರು ಡಾ|| ಓಂಪ್ರಕಾಶ ಅಂಬುರೆ,ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳು ಡಾ|| ಚಂದ್ರಕಾಂತ ನರಬೋಳಿ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.