ಹಿರಿಯ ನಾಗರಿಕರಿಗೆ ಬೇಕಾಗಾಗಿರುವ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆಯ ಅಗತ್ಯ : ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

Oct 2, 2024 - 22:53
 0
ಹಿರಿಯ ನಾಗರಿಕರಿಗೆ ಬೇಕಾಗಾಗಿರುವ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆಯ ಅಗತ್ಯ : ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಹಿರಿಯ ನಾಗರಿಕರಿಗೆ ಬೇಕಾಗಾಗಿರುವ ಮೂಲಭೂತ ಸೌಕರ್ಯಗಳು ಹಾಗೂ ರಕ್ಷಣೆಯ ಅಗತ್ಯ : ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 
ಕಲಬುರಗಿ: ಹಿರಿಯ ನಾಗರಿಕರಿಗೆ  ಬೇಕಾಗಿರುವ  ಮೂಲಭೂತ  ಸೌಕರ್ಯಗಳು  ಹಿರಿಯ ನಾಗರಿಕರಿಗೆ  ಸಹಾಯವಾಣಿ  ಮೂಲಕ  ಆರ್ಥಿಕ  ಭದ್ರತೆ ಆರೋಗ್ಯ ಪಾಲನೆ,  ಆಶ್ರಯ ಹಾಗೂ ಅವರನ್ನು ನಿಂದಿಸುವ ಮತ್ತು  ಅನುಚಿತ ಉಪಯೋಗ ಪಡೆದುಕೊಳ್ಳುವುದರಿಂದ ರಕ್ಷಣೆ ಒದಗಿಸುವುದು, ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಹೇಳಿದರು.
ಮಂಗಳವಾರ ಇಲ್ಲಿನ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಇಲಾಕೆ,  ವಿಕಲಚೇತನರ  ಹಾಗೂ ಹಿರಿಯ ನಾಗರೀಕರ ಸಬಲಿಕರಣ  ಇಲಾಖೆ ಕಲಬುರಗಿ ಹಾಗೂ ಹಿರಿಯ ನಾಗರಿಕ ಕ್ಷೇತ್ರದಲ್ಲಿ  ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ  ಸಹಯೋಗದೊಂದಿಗೆ  ಹೊಸ ಜಿಲ್ಲಾ ಪಂಚಾಯತ್  ಸಭಾಂಗಣದಲ್ಲಿ  ವಿಶ್ವ ಹಿರಿಯ ನಾಗರೀಕರ ದಿನಾಚರಣೆ  ಕಾರ್ಯಕ್ರಮವನ್ನು  ಉದ್ಘಾಟಿಸಿ  ಮಾತನಾಡಿದರು.
ವಿಶ್ವ ಹಿರಿಯ  ನಾಗರಿಕರ ದಿನ ಇತಿಹಾಸ ಮತ್ತು ಮೂಲ: ೧೪ ಡಿಸೆಂಬರ್  ೧೯೯೦ ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ  ಅಕ್ಟೋಬರ್ ೧ ಅನ್ನು  ವಯಸ್ಸಾದ ವ್ಯಕ್ತಿಗಳ ಅಂತರರಾಷ್ಟ್ರೀಯ ದಿನವೆಂದು ಗೊತ್ತುಪಡಿಸಿತು ಯುಎನ್‌ಒ  ಜನರಲ್ ಅಸೆಂಬ್ಲಿಯಿಂದ ಅದೇ ವರ್ಷದ ನಂತರ  ಅನುಮೋದಿಸಲಾಯಿತು.  ೧೯೯೧ ರಲ್ಲಿ  ವಯಸ್ಸಾದ ವ್ಯಕ್ತಿಗಳಿಗಾಗಿ  ವಿಶ್ವಸಂಸ್ಥೆಯ  ತತ್ವಗಳನ್ನು  ಅಳವಡಿಸಿತು ಎಂದು ತಿಳಿಸಿದರು
    ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು,  ವಿಕಲಚೇತನರ ಮತ್ತು ಹಿರಿಯ ನಾಗರೀಕರಣ ಸಬಲೀಕರಣ ಇಲಾಖೆಯ  ಸಾದಿಕ್  ಹುಸೇನ್ ಖಾನ್ ಅವರು ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ೨೦೧೧ರ ಜನಗಣತಿಯ ಅಂದಾಜಿನಂತೆ ಒಟ್ಟು  ಜನಸಂಖ್ಯೆ  ೨೫.೬೬ ಲಕ್ಷಗಳಲ್ಲಿ  ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು  ಶೇ.೭.೭೨ರಂತೆ ಸುಮಾರು ೧.೯೮ ಲಕ್ಷ ಇರುತ್ತಾರೆ. ಕರ್ನಾಟಕ  ರಾಜ್ಯದ ಕಲಬುರಗಿ ಜಿಲ್ಲೆಯ ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ಜೀವನ  ಒದಗಿಸಿ ಕೊಡುವ ಉದ್ದೇಶದಿಂದ ೫ ಸೆಪ್ಟೆಂಬರ  ೨೦೦೩ ರಂದು  ಹಿರಿಯ ನಾಗರಿಕರಿಗಾಗಿ ರಾಜ್ಯ ನೀತಿಯನ್ನು  ರೂಪಿಸಿದೆ ಎಂದು  ಹೇಳಿದರು.
ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ರಾಜಕುಮಾರ ರಾಠೋಡ  ಮಾತನಾಡಿ, ರಾಜ್ಯದಲ್ಲಿ  ಒಟ್ಟು ೩೦ ಜಿಲ್ಲೆಗಳಿಗೆ ಹಗಲು ಯೋಗಕ್ಷೇಮ ಕೇಂದ್ರಗಳನ್ನು  ಸ್ಥಾಪಿಸಿ ಸರ್ಕಾರದ ಮಂಜೂರಾತಿ ದೊರೆತಿದ್ದು, ಪ್ರತಿ ಕೇಂದ್ರದಲ್ಲಿ  ಸುಮಾರು  ೫೦-೧೫೦  ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದು. ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ  ಕಿತ್ತೂರು ರಾಣಿಚೆನ್ನಮ್ಮ ಮಹಿಳಾ ಮಂಡಳ ಅಡಿಯಲ್ಲಿ ಹಗಲು ಯೋಗಕ್ಷೇಮ ಕೇಂದ್ರ ರಾಘವೇಂದ್ರ ಕಾಲೋನಿ ಕಲಬುರಗಿಯಲ್ಲಿ ಕಾರ್ಯನಿರ್ವಹಿಸುತ್ತಿದೆ  ಎಂದು ಹೇಳಿದರು.
  ಬಕೇಟ್‌ನಲ್ಲಿ  ಬಾಲ ಎಸಿಯುವ ಆಟದಲ್ಲಿ ೭೦-೮೦ ವಯಸ್ಸಿನ ಹಿರಿಯರು  ಭಾಗವಹಿಸಿ ಗೆಲುವನ್ನು  ಸಾಧಿಸಿದ  ಮಹನೀಯರು  ಗುರುಮ್ಮ ಸಿದ್ದಾರೆಡ್ಡಿ, ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣ ಕುಮಾರ ಲೋಯಾ, ಅಫಜಲಪೂರ   ತಾಲೂಕಿನ ಅಂಧ ಬಾಲಕ ಮತ್ತು  ಬಾಲಕಿಯರ  ವಸತಿಯುತ ಶಾಲೆ ದತ್ತು ಅಗರವಾಲ್, ಪರಿರ್ವತನಾ  ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲೆ ಶ್ರೀಮಂತ ರೇವೂರ,ಮಹಾಗಾಂವಕರ ಶಿವರುದ್ರ ಟ್ರಸ್ಟ  ಸಹಾಯವಾಣಿ ಕೇಂದ್ರ ಕಲಬುರಗಿ ,  ಸುರೇಖಾ ಲೋಯಾ , ನಿವೃತ್ತ  ಜೇಲರ್  ಸಾಬಣ್ಣ,  ಖಾಜಾ ಪರೀದುದ್ದಿನ್ , ಶ್ರಿಮಂತ ಭಮಡಾರಿ, ಸಂಗಮ್ಮ ಅಜ್ಜಿ(೧೦೪), ಡಾ. ಜನಾಬಾಯಿ  ಹಿರಿಯರಿಗೆ  ವೇದಿಕೆ ಮೇಲೆ  ಜಿಲ್ಲಾಧಿಕಾರಿಗಳು  ಗೌರವ ಪೂರ್ವಕ ಸನ್ಮಾನ ಮಾಡಿ ಆರ್ಶಿವಾದ ಪಡೆದರು. ಹಾಗೂ  ಕ್ರೀಡಾ ಮತ್ತು  ಸಂಸ್ಕೃತಿಯಲ್ಲಿ  ಭಾಗವಹಿಸಿ   ಗೆಲವು ಸಾಧಿಸಿದ ಹಿರಿಯರಿಗೆ  ಪ್ರೋತ್ಸಾಹಧನ  ಮತ್ತು  ಪ್ರಶಸ್ತಿ ಪ್ರಧಾನ ಮಾಡಿದರು.
ಇದೇ ಸಂದರ್ಭದಲ್ಲಿ ಅಂಗವಿಕಲ ಅಧಿಕಾರಿಗಳು ಅಂಗವಿಕಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.