ಜಿಲ್ಲಾ ಜಾತ್ಯಾತೀತ ಜನತಾದಳ ವತಿಯಿಂದ ರಾಜ್ಯಪಾಲರಿಗೆ ಮನವಿ

Oct 2, 2024 - 22:23
 0
ಜಿಲ್ಲಾ ಜಾತ್ಯಾತೀತ ಜನತಾದಳ ವತಿಯಿಂದ ರಾಜ್ಯಪಾಲರಿಗೆ ಮನವಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ವಿಜಯಪುರ : ಜಿಲ್ಲಾ ಜಾತ್ಯಾತೀತ ಜನತಾದಳ ವಿಜಯಪುರ ವತಿಯಿಂದ  ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ  ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.


    ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷರಾದ ಬಸನಗೌಡ ಎಸ್. ಮಾಡಗಿ ಮಾತನಾಡಿ ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಮತ್ತು ಉಕ್ಕು ಕಬ್ಬಿಣ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರು ಅವಹೇಳನಕಾರಿ ಪದ ಬಳಸಿರುವ ಐಪಿಎಸ್ ಅಧಿಕಾರಿ ಚಂದ್ರಶೇಖರ ಅವರ ಹೇಳಿಕೆಯಿಂದ ಕರ್ನಾಟಕದ ಲಕ್ಷಾಂತರ ಎಚ್.ಡಿ. ಕುಮಾರಸ್ವಾಮಿ ಅವರ ಅಭಿಮಾನಿಗಳ ಮನಸ್ಸಿಗೆ ನೋವಾಗಿದ್ದು. ಅಷ್ಟೆ ಅಲ್ಲ ರಾಜ್ಯ ಎರಡು ಬಾರಿ ಮುಖ್ಯಮಂತ್ರಿಯಾದವರು ಕೇಂದ್ರ ಸಚಿವರ ಬಗ್ಗೆ ಇತರಹ ಮಾತನಾಡುವವರು ಸಾಮಾನ್ಯ ಜನರ ಹಿತ ಹೇಗೆ ಕಾಪಾಡುತ್ತಾರೆ ಕರ್ನಾಟಕ ಪೋಲಿಸರಿಗೆ ದೇಶದಲ್ಲೆ ಮಹತ್ವದ ಗೌರವ ಇದೆ ಅಂತಹ ಕರ್ನಾಟಕದ ಪೋಲಿಸ ಐಪಿಎಸ್ ಅಧಿಕಾರಿಯಾಗಿ ಚಂದ್ರಶೇಖರ ಅವರು ಈ ರೀತಿ ಭಾಷೆ ಬಳಸಿರುವುದು ನಿಜಕ್ಕೂ ಆಘಾತಕಾರಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ರವರ ಬಗ್ಗೆ ಈ ರೀತಿ ಮಾತನಾಡಿರುವ ಚಂದ್ರಶೇಖರ ಅವರನ್ನು ಕೂಡಲೇ ಅಮಾನತುಗೊಳಿಸಿ ಶಿಸ್ತುಕ್ರಮಕೈಕೊಳ್ಳಬೇಕಾಗಿ ಆಗ್ರಹಿಸುತ್ತೇವೆ. 


    ಈ ಸಂದರ್ಭದಲ್ಲಿ ಎಸ್.ವಿ. ಪಾಟೀಲ, ರಾಜು ಹಿಪ್ಪರಗಿ, ನಿಂಗನಗೌಡ ಸೋಲಾಪೂರ, ಸಂಜು ಹಿರೇಮಠ, ಸುಭಾಸ ನಾಯಕ, ಪೀರಬಾಶಾ ಗಚ್ಚಿನಮಹಲ, ರವಿ ಚವ್ಹಾಣ, ಸಂಜು ದೊಡಮನಿ, ಸುಜಾತಾ ಕಣಬೂರ, ಬಾಬು ಶಿರಣಗಾರ, ಮಲ್ಲು ತೊರವಿ, ದಿಲೀಪ ರಾಠೋಡ, ಸಂತೋಷ ರಾಠೋಡ ಮತ್ತಿತರರು ಉಪಸ್ಥಿತರಿದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.