ಅಕ್ರಮ ಗೃಹ ಬಳಕೆ ಸಿಲೆಂಡರ್ ಸರಬರಾಜು ದಂಧೆಗೆ ಕಡಿವಾಣ ಹಾಕುವಂತೆ ಜಯಕರ್ನಾಟಕ ಸಂಘಟನೆ ಆಗ್ರಹ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ವಿಜಯಪುರ : ಅವ್ಯಾಹಿತವಾಗಿ ನಡೆಯುತ್ತಿರುವ ಗೃಹ ಬಳಕೆ ಅಡುವೆ ಸಿಲೆಂಡರ್‌ಗಳನ್ನು ಅಕ್ರಮವಾಗಿ ಆಟೋಗಳಿಗೆ ಸರಬರಾಜು ಮಾಡುತ್ತಿರುವ ದಂಧೆಯು ವಿಜಯಪುರದಲ್ಲಿ ತಲೆ ಎತ್ತಿದ್ದು, ಈ ಅಕ್ರಮ ಅನೀಲ ಸರಬರಾಜು ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ, ವಿಜಯಪುರ ಜಿಲ್ಲಾ ಘಟಕ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಿದ್ದನಗೌಡ ದಾಶ್ಯಾಳ ರವರು ಮಾತನಾಡಿ, ವಿಜಯಪುರ ನಗರದಲ್ಲಿ ಬಹಳ ವರ್ಷಗಳಿಂದ ಅಕ್ರಮವಾಗಿ ಗೃಹ ಬಳಕೆ ಆಡುವೆ ಸಿಲೆಂಡರ್‌ಗಳನ್ನು ಆಟೋರಿಕ್ಷಾಗಳಿಗೆ ಸರಬರಾಜು ಮಾಡುತ್ತಿರುವ ಸಂಗತಿಯ ಬಗ್ಗೆ ಕ್ರಮಕೈಗೊಳ್ಳುವಂತೆ ಈ ಮೊದಲು ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಇಲ್ಲಿಯವರೆಗೆ ಕ್ರಮ ಕೈಗೊಂಡಿರುವದಿಲ್ಲ. ಹಾಗೂ ಇದರಿಂದ ಗೃಹ ಬಳಕೆ ಅಡುವೆ ಸಿಲೆಂಡರ್‌ಗಳ ದುರ್ಬಳಕೆ ಆಗುತ್ತಿದೆ. ಇದರಿಂದ ಗೃಹ ಬಳಕೆ ಸಿಲೆಂಡರ್‌ಗಳ ಸರಬರಾಜು ಗ್ರಾಹಕರಿಗೆ ಮನೆಗಳಿಗೆ ಸರಿಯಾದ ಸಮಯಕ್ಕೆ ಪೂರೈಕೆ ಆಗುತ್ತಿಲ್ಲ. ಇದರಿಂದ ಗ್ರಾಹಕರು ದಿನಂಪ್ರತಿ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಈ ಅಕ್ರಮ ಸಿಲೆಂಡರ್ ಸರಬರಾಜು ವಿಜಯಪುರ ಜಿಲ್ಲೆಯಲ್ಲಿ ಯಾವುದೇ ಅಂಜಿಕೆಯಿಲ್ಲದೇ ಯಾರಿಗೂ ಹೆದರದೆ ನಡೆಯುತ್ತಾ ಬಂದಿದೆ. ಈ ಬಗ್ಗೆ ಆಹಾರ ಇಲಾಖೆಯು ಕ್ರಮ ಕೈಗೊಳ್ಳಬೇಕು. ಮತ್ತು ಇಂತಹ ದಂಧೆಯಲ್ಲಿ ತೊಡಗಿರುವವರ ಮೇಲೆ ಯೋಗ್ಯ ಕಾನೂನು ಕ್ರಮಕೈಗೊಳ್ಳಬೇಕು. ಹಾಗೂ ಅಕ್ರಮ ಸಿಲೆಂಡರ್ ಸರಬರಾಜು ದಂಧೆಗೆ ಕಡಿವಾಣ ಹಾಕಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಿಂಟು ಗೊಬ್ಬೂರ, ಮುಕದ್ಸಸ್ ಇನಾಮದಾರ, ಸಿದ್ರಾಮ ಹೋಳಿ, ಆನಂದ ಹುನ್ನೂರ, ಶಿವರಾಜಗೌಡ ಪಾಟೀಲ, ಅಶೋಕ ಕೊಡಗ, ವಿರೇಶ ಪಾಟೀಲ, ಉಮೇಶ ಚಲವಾದಿ, ಸಂಗಮೇಶ ಗಾಣಿಗೆರ, ಮಲ್ಲು ಜಮಖಂಡಿ, ಚಿದಾನಂದ ಮಠಪತಿ, ಜಸಪೀತ್ ಸಿಂಗ್ ಗ್ಯಾನಿ, ಮೀಣಾ ಪತ್ತಾರ, ಲಕ್ಷ್ಮಿ ದಾಶ್ಯಾಳ, ಮಲ್ಲಮ್ಮ ಲಮಾಣಿ, ಕವಿತಾ ಖಿಲಾರಿ, ಮಂಜುಳಾ ಮುತ್ತಗಿಕರ, ಸುಜಾತಾ ಪೂಜಾರಿ, ಅನ್ನಪೂರ್ಣ ಕೋಳಿ, ಗಾಯತ್ರಿ ರೇಡೇಕರ, ಗಾಯತ್ರಿ ಬೆನಕನಹಳ್ಳಿ, ರಾಜಶ್ರೀ ವಾಲಿಕಾರ, ಇನ್ನಿತರರು ಉಪಸ್ಥಿತರಿದ್ದರು.