ರೇವಣಸಿದ್ದ ಏತ ನೀರಾವರಿಯಿಂದ ರೈತರ ಬದಕು ಹಸನ : ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ : ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾ ಶಕ್ತಿ ಹಾಗೂ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಯೋಗಾ ಯೋಗ ಎನ್ನುವಂತೆ ಹಿಂದಿನ ಮತ್ತು ಇಂದಿನ ಸರಕಾರಗಳು ನೀರಾವರಿ ಯೋಜನೆಗಾಗಿ ಶ್ರಮಿಸಿವೆ ಮತ್ತು ಶ್ರೀ ರೇವಣಸಿದ್ದ ಯಾತ ನೀರಾವರಿಯಿಂದ ರೈತರ ಬದಕು ಹಸನಾಗಲಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಅಗಸನಾಳ ಹತ್ತಿರ ರಾಷ್ಟಿçÃಯ ಹೆದ್ದಾರಿ ೫೧ ತಿಡಗುಂದಿ ಮುಖ್ಯ ಕಾಲುವೆ ೧೯ ಕೆರೆಗಳಿಗೆ ಪ್ರಾಯೋಗಿಕ ನೀರು ಹರಿಸುವ ಜಾಕವೇಲ್ ವೀಕ್ಷಣೆ ಮಾಡಿ ಮಾತನಾಡಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ ಚಡಚಣ , ಇಂಡಿ ಈ ಹಿಂದೆ ಕುಡಿಯಲು ನೀರು ಇಲ್ಲದೆ ಪರದಾಡುವಂತಾಗಿತ್ತು ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಇಂದು ನೀರಾವರಿ ಯೋಜನೆಗಳು ತ್ವರಿತ ಗತಿಯಲ್ಲಿ ಸಾಗುತ್ತಿದೆ. ಕೆರೆ ತುಂಬುವ ಯೋಜನೆಯಿಂದ ನೀರಿಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಲ್ಲಾ ಕೆರೆಗಳು ತುಂಬಿಸಲಾಗುವುದು ಎಂದರು.
ಗುರುನಾಥ ಬಗಲಿ, ಕಿಸಾನ ಸಂಘದ ಅಧ್ಯಕ್ಷ ಭೀಮಸೇನ ಕೊಕರೆ, ಮಲ್ಲನಗೌಡ ಪಾಟೀಲ, ಶಾಂತುಗೌಡ ಬಿರಾದಾರ,ರಮೇಶ ಬಿರಾದಾರ, ವಿಠ್ಠಲ ಏಳಗಿ, ರವಿ ಸಾತಲಗಾಂವ, ಹಣಮಂತ ಖಡೇಖಡೆ, ಡಾ. ರವಿ ಜಾಧವ, ಬಾಬು ಗುಡ್ಡದ, ಸದ್ದಾಮ ಮುಲ್ಲಾ, ಕಾಂತು ಗೊಡೇಕರ್ ಭದ್ರೇಶ ಮಹಿಷಿ, ರಮೇಶ ಖಾನಾಪುರ, ಚಂದ್ರಶೇಖರ ಖಾನಾಪುರ, ಶ್ರೀಮಂತ ಇಂಡಿ, ಇಲಿಯಾಸ ಬೋರಾಮಣಿ, ಜಾವೀದ ಮೋಮಿನ್, ಅಪ್ಪಾಸಾಬ ಟೋಕೆ,ಕಲ್ಲನಗೌಡ ಪಾಟೀಲ, ರಾಮಚಂದ್ರ ಟೋಕೆ ಮತ್ತಿತರಿದ್ದರು.