ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

ಇಂಡಿ : ತಾಲೂಕಿನಲ್ಲಿ ಹರಿಯುವ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ವರೆಗೂ ನೀರು ಹರಿಸಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡ ಬಸವರಾಜ ಪಾಟೀಲ ಹಂಜಗಿ ಕಾಲುವೆಯ ನೀರು ತಾಂಬಾ ಗ್ರಾಮದ ವರೆಗೆ ಸರಿಯಾಗಿ ಬರುತ್ತದೆ. ನಂತರ ಹಂಜಗಿ ಗ್ರಾಮದ ವರೆಗೆ ಸ್ವಲ್ಪ ಪ್ರಮಾಣದಲ್ಲಿ ಬರುತ್ತದೆ. ಗುತ್ತಿ ಬಸವಣ್ಣ ಕಾಲುವೆಯಲ್ಲಿ ಅಲ್ಲಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ತುಂಬಿದೆ. ಗಿಡಗಂಟಿಗಳಿವೆ. ಹೀಗಾಗಿ ನೀರು ಕಾಲುವೆಯಲ್ಲಿ ಹರಿದು ಹೋಗದೆ ಬೇರೆ ಕಡೆಗೆ ಹೋಗುತ್ತದೆ. ಅಧಿಕಾರಿ ಗಳ ನೀರ್ಲಕ್ಷದಿಂದ ನೀರು ಸರಿಯಾಗಿ ಕೊನೆಯ ಭಾಗದ ವರೆಗೂ ಹರಿಯುತ್ತಿಲ್ಲ ಎಂದರು.
ತಹಶೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು. ಕೆಂಚಪ್ಪ ನಿಂಬಾಳ ಮಾತನಾಡಿದರು. ಪ್ರತಿಭಟನೆಯಲ್ಲಿ ಜಟ್ಟೆಪ್ಪ ಸಾಲೋಟಗಿ, ಲಾಯಪ್ಪ ಉಪ್ಪಾರ, ಸುರೇಶ ಜೇವೂರ, ಹಣಮಂತ ಮಸಳಿ, ಶರಣಪ್ಪ ಗುಂದಗಿ, ಗುರಪ್ಪ ಅಗಸರ, ರಮೇಶ ದಳವಾಯಿ, ಬಾಳು ಕೊಟಗೊಂಡ, ಶ್ರೀಮಂತ ಉಪ್ಪಾರ, ಸಿದ್ದಪ್ಪ ಕರಂಡೆ, ದಯಾನಂದ ಕಂಟಗೊAಡ, ಜಟ್ಟೆಪ್ಪ ತಳವಾರ ಹಾಗೂ ಅಂಜುಟಗಿ, ಹಿರೇರೂಗಿ,ತಡವಲಗಾ , ಹಂಜಗಿ ಗ್ರಾಮದ ರೈತರು ಪಾಲ್ಗೊಂಡಿದ್ದರು.