ಭಾರತ ಸೇವಾದಳ ಮಕ್ಕಳ ರಾಷ್ಟ್ರೀಯ ಭಾವೈಕ್ಯತಾ ಮೇಳ

ಇಂಡಿ: ರಾಷ್ಟ್ರೀಯ ಭಾವೈಕ್ಯತೆ, ಶಿಸ್ತು, ಸೇವಾ ಮನೋಭಾವನೆ, ಸಹೋದರತ್ವ ಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಮೇಳವನ್ನು ಆಯೋಜಿಸಿರುವ ಭಾರತ ಸೇವಾದಳದ ಕಾರ್ಯ ಶ್ಲಾಘನೀಯ ಎಂದು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಶಿರಶ್ಯಾಡದ ಪರಮಪೂಜ್ಯ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.
ಭಾರತ ಸೇವಾದಳ ತಾಲೂಕು ಸಮಿತಿ ಇಂಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇಂಡಿ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರೇಮಸಳಿ ಇವರುಗಳ ಸಹಯೋಗದಲ್ಲಿ ಹಿರೇಮಸಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾದ ಇಂಡಿ ತಾಲೂಕು ಮಟ್ಟದ ಭಾರತ ಸೇವಾದಳ ಮಕ್ಕಳ ರಾಷ್ಟ್ರೀಯ ಭಾವೈಕ್ಯತಾ ಮೇಳದ ಸಮಾರೋಪ ಸಮಾರಂಭದಲ್ಲಿ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಎಸ್,ಪಿ, ಬಿರಾದಾರ, ಸೇವಾದಳ ಜಿಲ್ಲಾ ಉಪಾಧ್ಯಕ್ಷ ಶ್ರೀಮಂತ ಜೆ ಇಂಡಿ ,ಶಿಕ್ಷಕ ಸಂಘದ ಪದಾಧಿಕಾರಿ ವಾಯ್,ಟಿ, ಪಾಟೀಲ್, ಸೇವಾದಳ ತಾಲೂಕು ಅಧ್ಯಕ್ಷ ಕೆ, ಪಿ ,ಬೈರಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಶಾಲಾ ಎಸ್,ಡಿ,ಎಮ್,ಸಿ ಅಧ್ಯಕ್ಷ ಹಾಗೂ ಸದಸ್ಯರುಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕ ಸಂಘದ ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಸೇವಾದಳ ಶಿಕ್ಷಕ ವೃಂದ, ಶಾಲಾ ಶಿಕ್ಷಕ ವೃಂದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಭಾರತ ಸೇವಾದಳ ವಲಯ ಸಂಘಟಕ ನಾಗೇಶ ಡೋಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಪ್ರಭಾರಿ ಮುಖ್ಯ ಗುರು ಆನಂದ ಕೆಂಭಾವಿ ಸ್ವಾಗತಿಸಿದರು, ಅಂಬಣ್ಣ ಸುಣಗಾರ ಕಾರ್ಯಕ್ರಮ ನಿರೂಪಿಸಿದರು, ತಾಲೂಕು ಅಧಿನಾಯಕ ಎಸ್,ಬಿ, ಕಲ್ಲೋಳ್ಳಿ ವಂದಿಸಿದರು. ಮೇಳದಲ್ಲಿ ತಾಲೂಕಿನ ೫೦೦ ಮಕ್ಕಳು ,೪೦ ಜನ ಸೇವಾದಳ ಶಿಕ್ಷಕರು ಭಾಗವಹಿಸಿದ್ದರು.