ಇಂಡಿ : ಶ್ರಮವಹಿಸಿ ದುಡಿದರೆ ಭುಮಿ ತಾಯಿ ಎಂದಿಗೂ ಕೈ ಬಿಡುವದಿಲ್ಲ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಶಂಕರಮೂರ್ತಿ ಹೇಳಿದರು.
ಮಾನವ ವಿಕಾಸ ಕೇಂದ್ರ ವಿಜಯಪುರ ಮತ್ತು ಶ್ರೀಮತಿ ಶಾಲಿನಿತಾಯಿ ಮಾಣಿಕ ಚಂದ ದೋಶಿ ಮಹಿಳಾ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗ್ರಾಮೀಣಾಭಿವೃದ್ದಿಯಲ್ಲಿ ಕೃಷಿಯಾಧಾರಿತ ಮಹಿಳಾ ಕೌಶಲ್ಯ ಮಹತ್ವ ವಿಚಾರ ಸಂಕೀರಣದಲ್ಲಿ ಮಾತನಾಡಿದರು.
ರೈತರ ಕಲ್ಯಾಣದಲ್ಲಿ ದೇಶದ ಕಲ್ಯಾಣ ಅಡಗಿದೆ.ರೈತರ ಪರ ಅಗತ್ಯ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿ ಅನುಷ್ಠಾನಗೊಳಿಸುವ ಅಗತ್ಯತೆ ಇದೆ ಎಂದರು. ಜನಸAಖ್ಯೆಯಲ್ಲಿ ೫೧.೬ % ಗಂಡಸರು ಇದ್ದರೆ ೪೮.೪ % ಹೆಣ್ಣು ಸಂಖ್ಯೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಶೇ ೮೦ ರಷ್ಟು ಮಹಿಳೆಯರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.ಶೇ ೬೦ ಮಹಿಳೆಯರು ಕೃಷಿ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಕೃಷಿ ಪ್ರಧಾನ ಚಟುವಟಿಕೆಗಳಲ್ಲಿ ಮಹಿಳೆಯರು ಪ್ರಧಾನ ಪಾತ್ರ ವಹಿಸುತ್ತಿದ್ದಾರೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎ.ಬಿ.ಪಾಟೀಲ, ಶಾಂತೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಂ.ಎಮ್ಮಿ, ಎಸ್.ಬಿ.ಹಡಪದ, ವಿಜಯ ರಾಠೋಡ, ಸದಾನಂದ ಈರನಕೇರಿ ಮಾತನಾಡಿದರು.
ಆರ್.ಎಸ್.ಬಿರಾದಾರ, ಶ್ರೀಮತಿ ವಾಣಿ ಹಿರೇಮಠ, ಜ್ಞಾನೇಶ್ವರ ಧೂಳಖೇಡ, ಆರ್.ಜಿ.ಪೂಜಾರಿ, ಆರ್.ವಿ.ಅಂಗಡಿ ವೇದಿಕೆಯ ಮೇಲಿದ್ದರು.