ಹೊರ್ತಿ : ಉಚಿತ ವೈದ್ಯಕೀಯ ಸೇವಾ ಕಾರ್ಯ ಪುಣ್ಯದ ಕಾರ್ಯವಾಗಿದ್ದು, ಈ ಮಾಧವಾನಂದ ಪ್ರಭುಜಿ ೪ದಿನದ ಉಚಿತ ಶಿಬಿರದಲ್ಲಿ ವೈದ್ಯರ ನಿರಂತರ ಸೇವಾ ಕಾರ್ಯ ಶ್ಲಾಘನೀಯ ಎಂದು ಇಂಚಗೇರಿಮಠದ ಗುರು ಬಂಧು ಶoಕ್ರೆಪ್ಪ ಕೌಜಲಗಿ ಮಹಾರಾಜರು ಹೇಳಿದರು.
ಸಮೀಪದ ಇಂಚಗೇರಿ ಮಠದಲ್ಲಿ ೪ದಿನ ಗುರು ಶಿಷ್ಯರ ಪಂಚಮವೇಣಿ ಪುಣ್ಯಸ್ಮೃರಣೆ ಸಪ್ತಾಹದ ಪ್ರಯುಕ್ತ ಹಮ್ಮಿಕೊಂಡಿದ್ದ ೨೫ನೇ ವರ್ಷದ ೪ದಿನ ಮಾಧವಾನಂದ ಪ್ರಭುಜಿ ಉಚಿತ ಆರೋಗ್ಯ ಸೇವಾ ಶಿಬಿರದ ಸಾನಿಧ್ಯ ವಹಿಸಿ ಮಾತನಾಡಿದರು. ಡಾ.ಬಳರಾಮ ರಾಠೋಡ ಮಾತನಾಡಿ,'ಈ ೨೫ನೇ ವರ್ಷದ ಶ್ರೀ ಮಠದ ದಿಂಡಿ ಪಲ್ಲಕ್ಕಿ ಪಾದಯಾತ್ರಿ ಭಕ್ತರ ೪ದಿನ ಶ್ರೀ ಮಾಧವಾನಂದ ಪ್ರಭುಜಿ ಉಚಿತ ಆರೋಗ್ಯ ಸೇವೆಯನ್ನು ಸಲ್ಲಿಸುವ ಭಾಗ್ಯ ನಮಗೆ ಸಿಕ್ಕಿರುವುದು ಪುಣ್ಯದ ಸೇವಾ ಕಾರ್ಯವಾಗಿದೆ. ಈ ಉಚಿತ ಸೇವೆಯಿಂದ ನಮಗೆ ಸಮಾಧಾನ ತೃಪ್ತಿ ತಂದಿದೆ 'ಎಂದು ಹೇಳಿದರು.
ಕಾರ್ಯಕ್ರಮದ ಮುನ್ನ ಇಂಚಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಮೀನಾಕ್ಷಿ ಜಮಾದಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ, ಇಂಚಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಮೀನಾಕ್ಷಿ ಜಮಾದಾರ, ಡಾ.ಎಂ ಬಿ. ರಾಠೋಡ ಡಾ.ಮಾದೇವ ಬೆಳ್ಳೆನವರ, ಡಾ.ಮಲ್ಲಿಕಾರ್ಜುನ ರಾಠೋಡ, ಸoತೋಷ ರಾಠೋಡ, ಡಾ.ರಮೇಶ ಹಿರೇಮಠ ಶಿಬಿರ ವ್ಯವಸ್ಥಾಪಕ ಕಾಡಸಿದ್ಧ ಮುರಗೋಡ, ರಮೇಶ ರಾಠೋಡ, ಸುನೀಲ ಮುರಗೋಡ, ಗುರುಪುತ್ರ ಮುರಗೋಡ ಹಾಗೂ ಶ್ರೀ ಮಾಧವಾ ನಂದ ಪ್ರಭುಜಿ ಪ್ರೌಢ ಶಾಲಾ ಶಿಕ್ಷಕರು ಇತರರು ಇದ್ದರು.