ಅದ್ದೂರಿ ಅಂಬಾಭವಾನಿ ಛಬಿನಿ ಮೆರವಣೆಗೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಇಂಡಿ : ನವರಾತ್ರಿ ಅಂಗವಾಗಿ ಪಟ್ಟಣದ ಶ್ರೀ ಅಂಬಾಭವಾನಿ ಮಂದಿರದಲ್ಲಿ ಛಬಿಜಿ ಉತ್ಸವ ಅದ್ದೂರಿಯಾಗಿ ಜರಗುತ್ತಿದೆ. ದೇವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.
ಕುಲಸ್ವಾಮಿನಿ ಅಂಬಾಭವಾನಿ ಮಾತಾ ಶಾರದೀಯ ನವರಾತ್ರಿ ಉತ್ಸವ ವರ್ಷದ ದೊಡ್ಡ ಉತ್ಸವವಾಗಿದ್ದು ಅ.೩ ರಿಂದ ಘಟಸ್ಥಾಪನೆ ಯೊಂದಿಗೆ ಪ್ರಾರಂಭವಾಗಿದ್ದು ಪ್ರತಿದಿನ ಛಬಿನಿ ಕಾರ್ಯಕ್ರಮ ನಡೆಯುತ್ತದೆ.
ಬೆಳಗ್ಗೆ ೭.೩೦ ಗಂಟೆಗೆ ಮತ್ತು ಸಾಯಂಕಾಲ ೭.೩೦ ಗಂಟೆಗೆ ಆರತಿ ಆದ ನಂತರ ಛಬಿಜಿ ಮೆರವಣೆಗೆ ನಡೆಯುತ್ತದೆ.
ಅಂಬಾಭವಾನಿ ದೇವಿ ಬಂಗಾರದ ವಿಗ್ರಹವನ್ನು ಪಾಲಕೆಯಲ್ಲಿ ಇಟ್ಟು ಮಂದಿರದ ಪ್ರದರ್ಶನ ಹಾಕುವರು. ಅರ್ಚಕರು ಭಕ್ತಾದಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ.
ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದು ಪ್ರತಿದಿನ ವಿಶೇಷ ಪೂಜೆ ಅಲಂಕಾರ ಮತ್ತು ಭಕ್ತಿಯ ಕಾರ್ಯಕ್ರಮ ಜರುಗುತ್ತದೆ.
ದೇವಸ್ಥಾನ ಸಮಿತಿಯ ಬಾಳು ಕಠಾರೆ, ಸುನೀಲ ಸುಲಾಖೆ, ಕಿರಣ ಬಳಮಕರ, ಅಮರ ಪತಂಗೆ, ಶಿವಾನಂದ ಕೊಪ್ಪದ, ಸಿದರೇಶ ಅಂಬರಕರ, ಉದಯ ವಡತೇಲಿ,ಅಜೀತ ಶಹಾ, ಮೋತಿಲಾಲ ಕೋಳೆಕರ,ಕಿರಣ ಕೋಳೆಕರ ಮತ್ತಿತರಿದ್ದರು.