ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಇಂಡಿ : ಸಪ್ತ ವ್ಯಸನಗಳಲ್ಲಿ ಮಧ್ಯಪಾನ ಅತ್ಯಂತ ಅಪಾಯಕಾರಿ ಮದ್ಯಪಾನದ ಮೆಟ್ಟಿಲು ಜಾರಿದರೆ ಉಳಿದೆಲ್ಲವನ್ನು ಜಾರಿದಂತೆ, ಹೀಗಾಗಿ ಗುಟಕಾ, ತಂಬಾಕು, ಮಧ್ಯಪಾನ ಸೇರಿದಂತೆ ಇನ್ನಿತರ ವ್ಯಸನಗಳಿಂದ ವ್ಯಕ್ತಿ, ಕುಟುಂಬ ಮತ್ತು ಸಮಾಜದ ಮೇಲೆ ಪರಿಣಾಮ ಬಿರುತ್ತದೆ ಎಂದು ತಡವಲಗಾ ಗ್ರಾಮದ ಹಿರೇಮಠದ ಅಭಿನವ ರಾಚೋಟೇಶ್ವರ ಶ್ರೀಗಳು ಹೇಳಿದರು.
ಅವರು ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ತಾಲೂಕಾ ಆಡಳಿತ ಇಂಡಿ, ಅಬಕಾರಿ ಇಲಾಖೆ, ಪುರಸಭೆ ಹಾಗೂ ಗ್ರಾ.ಪಂ ರೂಗಿ ಇವರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಸಹಯೋಗದಲ್ಲಿ ಬೊಳೆಗಾಂವ ಗ್ರಾಮವನ್ನು ಸರಾಯಿ ಮುಕ್ತ ಗ್ರಾಮಮಾಡಲು ೧೮೬೩ ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರ ವ್ಯಸನಿಗಳ ಬದುಕಿನಲ್ಲಿ ಬೆಳಕನ್ನು ಕೊಡಬೇಕಾಗಿದೆ. ಮಧ್ಯ ವ್ಯಸನಿಗಳನ್ನು ಮನುಷ್ಯರನ್ನಾಗಿ ಮಾಡಬೇಕಾಗಿದೆ. ಸನ್ಮಾರ್ಗದಲ್ಲಿ ನಡೆದು ಪರಿವರ್ತನೆ ಯಾಗಲು ಕಂದಾಯ ಉಪ ವಿಭಾಗಾಧಿಕಾರಿಗಳು ಬೊಳೆಗಾಂವ ಗ್ರಾಮವನ್ನು ವ್ಯಸನ ಮುಕ್ತ ಗ್ರಾಮವಾಗಿ ಮಾಡಲು ಪಣ ತೊಟ್ಟಿರುವದು ಶ್ಲಾಘನೀಯ ಎಂದರು. ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ವ್ಯಸನ ಮುಕ್ತ ಸಮಾಜ ಕೇಂದ್ರದ ಅಧ್ಯಕ್ಷ ಪ್ರಕಾಶ ಬಿರಾದಾರ,ಜಿಲ್ಲಾ ನಿರ್ದೇಶಕ ಸಂತೋಷಕುಮಾರ, ಅಬಕಾರಿ ಇಲಾಖೆಯ ವಾದಿರಾಜ ಅಶ್ರೀತ, ಯೋಜನಾಧಿಕಾರಿ ಎಲ್.ಎಂ. ನಟರಾಜ, ಸರಸ್ವತಿ, ರಾಜೇಶ, ಲಕ್ಷಿö್ಮÃ ಬಡಿಗೇರ ಮಾತನಾಡಿದರು.
ವೇದಿಕೆಯ ಮೇಲೆ ತಹಸೀಲ್ದಾರ ಬಿ.ಎಸ್.ಕಡಕಬಾವಿ, ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಅಬಕಾರಿ ಇಲಾಖೆಯ ರಾಹುಲ ನಾಯಕ, ಪರೀನಾ ವಣಕ್ಯಾಳ, ಪಿಡಿಒ ಬಸವರಾಜ ಬಬಲಾದ, ರೂಗಿ ಗ್ರಾ.ಪಂ ಅಧ್ಯಕ್ಷೆ ಸೋಮವ್ವ ಹೊಸಮನಿ ,ಶಶಿಕಲಾ ಬೇಟಗೇರಿ, ಸುಧೀರ ಕರಕಟ್ಟಿ ಮತ್ತಿತರಿದ್ದರು.
ಸಮಾರಂಭದಲ್ಲಿ ಭಾರತಿ ಮಾಳಾಬಾಗಿ, ಶ್ರೀಶೈಲ ಇಂಡಿ, ಜ್ಯೋತಿ ವಂದಾಲ, ದಿವಾಕರ ಪೂಜಾರಿ, ಜಯಲಕ್ಷಿ ಸೇರಿದಂತೆ ಮತ್ತಿತರಿದ್ದರು.
ದುಶ್ಚಟ ಬಿಡುವದು ಯುವಕರ ಜವಾಬ್ದಾರಿ:
ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ ಮಧ್ಯಪಾನ ದಂತಹ ದುಶ್ಚಟಗಳನ್ನು ಬಿಡುವದು ಯುವಕರ ಜವಾಬ್ದಾರಿ. ತಮ್ಮಲ್ಲಿರುವ ಅಂಧಕಾರ ಹೋಗಲಾಡಿಸಲು ಯುವಕರು ವ್ಯಸನ ಮುಕ್ತ ರಾಗುವದು ಮುಖ್ಯ. ಯಾವದೋ ಸಮಸ್ಯೆಗೆ ಸಿಲುಕಿ ವ್ಯಸನಿಗಳಾಗುತ್ತಿದ್ದು ಅದರಿಂದ ಕುಟುಂಬ ಸಮಾಜ ಮೇಲೆ ದುಷ್ಪರಿಣಾಮ ಬಿಳುತ್ತಿದ್ದು ಕುಟುಂಬದ ಅರ್ಥಿಕ ಸ್ಥಿತಿ ಕೆಟ್ಟು ಯುವಕರು ಬೀದಿ ಪಾಲಾಗುತ್ತದ್ದಾರೆ. ಅರಿವೇ ಗುರು ಎಂಬ ಮಂತ್ರ ಪಾಲಿಸಿ ತಮ್ಮಲ್ಲಿರುವ ಅರಿವನ್ನು ಒಳ್ಳೆಯತನಕ್ಕೆ ಬಳಸಿಕೊಳ್ಳಬೇಕಾಗಿದೆ
ಎಂದರು.