ಡಾ. ಶಿವಕುಮಾರ ಸ್ವಾಮಿಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ

Jan 22, 2025 - 08:22
 0
ಡಾ. ಶಿವಕುಮಾರ ಸ್ವಾಮಿಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮ

ಹುಬ್ಬಳ್ಳಿ: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ  ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಕೆಕೆ ಮಾರ್ಟನಲ್ಲಿ ಆಯೋಜಿಸಿದ್ದ ನಡೆದಾಡುವ ದೇವರು, ತ್ರೀವಿಧ ದಾಸೋಹಿ ತುಮಕೂರ ಸಿದ್ಧಗಂಗಾಮಠದ ಪರಮ ಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಜಿಯವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ  ಗಣ್ಯರು  ಪೂಜ್ಯರ ಭಾವಚಿತ್ರಕ್ಕೆ  ಮಾಲಾರ್ಪಣೆ ಮಾಡಿ ಶ್ರದ್ಧಾ-ಭಕ್ತಿಯ ನಮನಗಳನ್ನು ಸಲ್ಲಿಸಿದರು. ನುಡಿಗಳ ಮೂಲಕ ಶ್ರೀಗಳ ಗುಣಗಾನ ಮಾಡಿದರು.

ಸೋಹನ ಸುರೇಶ ಹೊರಕೇರಿ, ಸುಜಯ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ನಿವೃತ್ ಪ್ರಾಚಾರ್ಯ ಪ್ರೊ ಎಸ್.ಎಂ.ಸಾತ್ಮಾರ, ನಿವೃತ್ ಗ್ರಂಥಪಾಲಕ ಡಾ. ಬಿ.ಎಸ್.ಮಾಳವಾಡ, ಕೆಕೆ ಮಾರ್ಟನ ಮಾಲಿಕರು, ಇಂಜಿನಿಯರ್‌ಗಳಾದ ಶಿವಯೋಗಿ ಮುಗಬಸ್ತ,  ಸುನಂದಾ ಮುಗಭಸ್ತ, ಚನಬಸಪ್ಪ ಧಾರವಾಡಶೆಟ್ಟರ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕರ‍್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅನೇಖ ಶ್ರೀಗಳ ಭಕ್ತಾಧಿಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು. 

ಶ್ರೀಗಳು ಸರ್ವವ್ಯಾಪಿ. ಅವರು ಭಕ್ತರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೊಣ. ಸಮಷ್ಠಿ ಕಲ್ಯಾಣವನ್ನೇ ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಶ್ರೇಷ್ಠ ಸಂತರು, ಶರಣರು ತುಮಕೂರ ಸಿದ್ಧಗಂಗಾಮಠದ ಪರಮ ಪೂಜ್ಯ ಲಿಂ. ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮಿಜಿಯವರು. ತುಮಕೂರ ಸಿದ್ಧಗಂಗಾಮಠ ಎಲ್ಲರಲ್ಲಿ ಪ್ರೀತಿ, ವಿಶ್ವಾಸ ಮತ್ತು ಆತ್ಮವಿಶ್ವಾಸ ಮೂಡಿಸುತ್ತದೆ. ಪೂಜ್ಯರು ಸೇವೆಗಳಿಗೆ ಹೊಸ ಭಾಷ್ಯ ನೀಡಿದ್ದಾರೆ. ಕಾಯಕ, ದಾಸೋಹ, ಶಿವಯೋಗದ ಮಹತ್ವವನ್ನು ಎಲ್ಲರಲ್ಲಿ ಸದಾ ಜಾಗೃತಿಯನ್ನುಂಟು ಮಾಡಿದ ಮಹಾತ್ಮರು. ವಿದ್ಯಾರ್ಥಿಗಳಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದ ಪೂಜ್ಯರು ಸದಾ ಸ್ಮರಣಿಯರು. ಪೂಜ್ಯರು ಕಾಲವನ್ನೇ ಗೆದ್ದ ಶರಣರು. ಪ್ರಶಸ್ತಿಗಳಿಗೆ ಗೌರವ ತಂದು ಕೊಟ್ಟಿದ್ದಾರೆ. ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಪೂಜ್ಯರು ಸಮಾಜಕ್ಕೆ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಸಮಷ್ಟಿ ಕಲ್ಯಾಣ ಬಯಸಿದ ಪೂಜ್ಯರ ಸಂದೇಶಗಳನ್ನು ಪಾಲಿಸಬೇಕು ಎಂದು ಮಾತನಾಡಿದ ಎಲ್ಲರೂ ನುಡಿ ನಮನ ಸಲ್ಲಿಸಿದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.