ಗದಗ : ಅಲ್ಲಿ ಶರಣರ ವಿಚಾರಧಾರೆಗಳ ಲೀಲಾಮಯ ಮನೋಹರವಾಗಿ ಸಾಗಿತ್ತು. ಆ ವೈವಿಧ್ಯತೆ ರಸಮಯ ನೋಟದ ಸುಗಂಧಮಯ ಮಕರಂದ ಕಣ್ಣಂಚಿನಲ್ಲಿನ ಅಮೋಘವಾಗಿ ಸೆರೆ ಹಿಡಿದು ಖುಷಿಯೋಲ್ಲಾಸದಿಂದ ಸಂಭ್ರಮಿಸಿದರು ಗದುಗಿನ ಶರಣ ಜೀವಿಗಳು..!
ಕೆಚ್ಚೆದೆಯ ವೀರವನಿತೆ ಓನಕೆ ಓಬವ್ವಳ ನೆಲ ಅಂಗಳದ ಐತಿಹಾಸಿಕ ಕಲ್ಲಿನ ಕೋಟೆ ಇತಿಹಾಸ ಹೊಂದಿರುವ ಚಿತ್ರದುರ್ಗ ಮಹಾನಗರದಲ್ಲಿ ಶರಣ ಪಂಥರ ಜ್ಞಾನೋಕ್ತಿ ಮಹಾ ಸಂಗಮಯ ಕಾರ್ಯಕ್ರಮವಾಗಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಭೂತಪೂರ್ವ ಮಹಾ ಸಮಾವೇಶದಲ್ಲಿ ಕಂಡು ಬಂದ ವಿನೋದಮಯ ದೃಶ್ಯಗಳ ವರ್ಣ ಲೇಪನಗಳಿವು !
ಚಿತ್ರದುರ್ಗ ನಗರಕ್ಕೆ ತನ್ನದೇ ಇತಿಹಾಸಯಿದೆ. ಇಂಥ ವೈವಿಧ್ಯಮಯ ಪರಿಸರದ ಅಂಗಳದಲ್ಲಿ ಶರಣ ಸಾಹಿತ್ಯ ಸಮಾವೇಶದ ಕಲರವ ಸಾಹಿತ್ಯ ಆಸಕ್ತರ ಗಮನ ಸೆಳೆದಿದೆ. ಶರಣ ಸಾಹಿತ್ಯದ ಇಂಪು,ಕಂಪು ಮನದಾಳದಲ್ಲಿ ಸೆರೆ ಹಿಡಿದು ಅವಿಸ್ಮರಣೀಯ ಭಾವಾವರಣವನ್ನು ಶರಣ ಜೀವಗಳು ಹೊರ ಸೂಸಿ ಸಾಹಿತ್ಯ ಪ್ರೇಮ ಮೆರೆದಿದ್ದಾರೆ.
ಕುಮಾರ ವ್ಯಾಸವೆಂದು ಪ್ರಸಿದ್ಧಿರಾದ ವೀರನಾರಾಯಣ ಖ್ಯಾತಿಯ ಕವಿಗಳ ನೆಲೆವೀಡು ಅಗಿ ಆಧುನಿಕ ಸಾಹಿತ್ಯಕ್ಕೆ ಪ್ರೇರಣೆ ನೀಡಿರುವ ಗದಗ ಜಿಲ್ಲೆ ಕವಿ ಕೋಗಿಲೆಗಳ ಪುಣ್ಯ ಧಾಮವಾಗಿ ಮಿನುಗಿದೆ.ಈ ನಗರದ ಹಲ ಸಾಹಿತ್ಯಾಸಕ್ತರು ಚಿತ್ರದುರ್ಗ ಶರಣ ಸಾಹಿತ್ಯ ಸಮಾವೇಶದಲ್ಲಿ ಭಾಗಿಯಾಗಿ ಸಾಹಿತ್ಯದ ಸವಿರುಚಿ ಹೀರಿ ಸಂತಸಾನುಭವ ತೋರಿದ್ದಾರೆ. ಶರಣ ಸಾಹಿತ್ಯ ಪರಿಷತ್ತು ಗದಗ ಜಿಲ್ಲಾಧ್ಯಕ್ಷ ಕೆ.ಎ.ಬಳಿಗೇರ,ಶಿರಹಟ್ಟಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ.ಲಮಾಣಿ, ತಾಲೂಕು ಕಾರ್ಯದರ್ಶಿ ಎಂ.ಕೆ. ಮಕಾನದಾರ, ಗದಗ ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಬುದಪ್ಪ ಅಂಗಡಿ, ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಗದಗ ಶಹರ ಘಟಕದ ಅಧ್ಯಕ್ಷ ಬಿ.ಕೆ.ನಿಂಬನೌಡರ ಇತರರು ಮುರಘಾ ಅಂಗಳದಲ್ಲಿನ ಶರಣ ಸಾಹಿತ್ಯದ ಮಹಾ ಸಮಾವೇಶದ ಪರಿಮಳದಲ್ಲಿ ಮಿಂದೆದ್ದು ಖುಷಿಯೋಲ್ಲಾಸದಿಂದ ಸಂಭ್ರಮಿಸಿದರು. ಶರಣ ತರ್ಪಣದ ಭಾವೋಲ್ಲಾಸ ಹಂಚಿಕೊಂಡು ವಿಶೇಷ ನೋಟ ಬೀರಿದ್ದು ಶರಣ ಸಾಹಿತ್ಯದ ಅಮೋಘ ಪ್ರೇಮಕ್ಕೆ ಸಾಕ್ಷಿಯಾಗಿದಿದ್ದಾರೆ.