ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ : ಮಾಜಿ ಶಾಸಕ ರಮೇಶ ಭೂಸನೂರ

Jan 8, 2025 - 23:53
 0
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ : ಮಾಜಿ ಶಾಸಕ ರಮೇಶ ಭೂಸನೂರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಸಿಂದಗಿ: ಸುದ್ದಿ ಮಾಧ್ಯಮಗಳು ಯಾವುದೇ ಪಕ್ಷಕ್ಕೆ ಸೀಮಿತವಲ್ಲ, ಸಾರ್ವಜನಿಕ ಜೀವನ ಆಡಳಿತ ಪಾರದರ್ಶಕವಾಗಿ ಇರಬೇಕಾದರೆ ಇಂತಹ ಸುದ್ದಿ ಮಾಧ್ಯಮಗಳ ಮುಖ್ಯ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.        

ಪಟ್ಟಣದ ಅಬ್ಬು ಫಂಕ್ಷನ್ ಹಾಲ್ ನಲ್ಲಿ ಸೋಮವಾರ ನೇರ ನುಡಿ ಸತ್ಯದ ಕಡೆ ಎಂಬ ಖಾಸಗಿ ಸುದ್ದಿ ವಾಹಿನಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಬೇಕೆಂದರೆ ಸುದ್ದಿ ಮಾಧ್ಯಮಗಳ ಪಾತ್ರ ಮುಖ್ಯವಾಗಿದೆ ಎಂದರು.

       

ಜೇರಟಗಿಯ ಮ.ನಿ.ಪ್ರ. ಮಹಾಂತ ಮಾಹಾಸ್ವಾಮಿಗಳು ದಿವ್ಯ  ಸಾನ್ನಿಧ್ಯ ವಹಿಸಿ ಮಾತನಾಡಿ ಖಾಸಗಿ ಸುದ್ದಿ ವಾಹಿನಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಶತಾಯುಷಿ ಅನಸರಸಾಬ ಖಾಸೀಂ ಸಾಬ್ ಕುದುರಗುಂಡು ಇವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ವೇಳೆ ವರದಿಗಾರರಾದ ಸುದರ್ಶನ್ ಜಂಗಣ್ಣಿ, ಆರೀಫ್ ಅಂತರಗAಗಿ, ನಾಗೇಶ ತಳವಾರ, ಶಾಂತವೀರ ಹಿರೇಮಠ, ವಾಸೀಮ ಗೋಗಿ, ಆರೀಫ್ ಮನಿಯಾರ,  ಗಪೂರ ಮುಜಾವರ, ಸೇರಿದಂತೆ ಸಿಂದಗಿ ತಾಲ್ಲೂಕಿನ ವರದಿಗಾರರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಎಮ್ ಶೇಖ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್, ದೇವರ ಹಿಪ್ಪರಗಿ ತಹಶೀಲ್ದಾರ್ ಪ್ರಕಾಶ್ ಸಿಂದಗಿ,  ಉಪನೊಂದನಾಧಿಕಾರಿ ಎಮ್ ಆರ್ ಪಾಟೀಲ, ಪುರಸಭೆ ಅಧ್ಯಕ್ಷ ಶಾಂತವೀರ ಎಸ್ ಬಿರಾದಾರ, ಗುಮ್ಮಟ ನಗರಿ ದಿನಪತ್ರಿಕೆ ಸಂಪಾದಕ ಇರ್ಫಾನ್ ಶೇಖ್ , ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಚನ್ನಯ್ಯ ವಸ್ತ್ರದ್, ಟಿವಿ ನಿರೂಪಕ ಸೀರಾಜ್ ವಾಲೀಕಾರ, ಕಾ.ನಿ.ಪ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಕಾ.ನಿ.ಪ. ದ್ವನಿ ಸಂಘದ ಅಧ್ಯಕ್ಷ ಪಂಡಿತ್ ಯಂಪುರೆ,  ಅಬು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ ಎ ಖತೀಬ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ ಸಿ ಮಯೂರ್,  ಟಿಪ್ಪು ಕ್ರಾಂತಿ ಸೇನೆ ಸಂಸ್ಥಾಪಕ ದಸ್ತಗೀರ ಮುಲ್ಲಾ ಇದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.