ಇಂದು ಕಲಕೇರಿಯಲ್ಲಿ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಕಲಕೇರಿ: ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ವಿಜಯಪುರ ಹಾಗೂ ಕಲಕೇರಿಯ ಎ.ಕೆ. ಸಿರಸಗಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ೨೦೨೪-೨೫ನೇ ಸಾಲಿನ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜಿನ ಬಾಲಕರ ಬಾಲಕಿಯರ ಕುಸ್ತಿ ಪಂದ್ಯಾವಳಿಗಳನ್ನು ಇಂದು ಸ.೩೦ರ ಬೆಳಿಗ್ಗೆ ೯ ಗಂಟೆಗೆ ಕಲಕೇರಿಯ ಎ.ಕೆ.ಸಿರಸಗಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಪದವಿಪೂರ್ವ ದೈಹಿಕ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಶಾಂತೇಶ ದುರ್ಗಿ ಹೇಳಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಯ ೧೫ ಕಾಲೇಜುಗಳು ಸೇರಿದಂತೆ ಸುಮಾರು ೨೦೦ ವಿದ್ಯಾರ್ಥಿಗಳು ಮತ್ತು ೧೦೦ ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದ್ದು, ಈ ಕ್ರೀಡಾಕೂಟವನ್ನು ರಾಜ್ಯಮಟ್ಟದ ಮಾದರಿಯಲ್ಲಿ ಹಮ್ಮಿಕೊಳ್ಳುವ ಹುಮ್ಮಸ್ಸಿನೊಂದಿಗೆ ಕಾಲೇಜಿನ ಆಡಳಿತ ಮಂಡಳಿ ತಯಾರಿ ಮಾಡಿದ್ದು, ವಿಜೃಂಭಣೆಯೊಂದಿಗೆ ನಡೆಯುವ ಜಿಲ್ಲಾಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ವೀಕ್ಷಕರು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆಯ ಪರವಾಗಿ ವಿನಂತಿ ಮಾಡಿಕೊಂಡರು.
ಸಮಾರಂಭದಲ್ಲಿ ಉದ್ಘಾಟಕರಾಗಿ ದೇವರಹಿಪ್ಪರಗಿ ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ, ಸಿಂದಗಿ ಶಾಸಕ ಅಶೋಕ ಮನಗೂಳಿ, ಸಂಸ್ಥೆಯ ಕಾರ್ಯದರ್ಶಿ ಜಾಹಾಂಗೀರಭಾಷಾ ಸಿರಸಗಿ, ಪ.ಪೂ. ಉಪನಿರ್ಧೇಶಕಡಾ.ಸಿ.ಕೆ ಹೊಸಮನಿ, ಶಾಖಾಧಿಕಾರಿ ಪ್ರಕಾಶ ಗೊಂಗಡಿ, ಗ್ರಾ.ಪಂ. ಅದ್ಯಕ್ಷ ರಾಜಅಹ್ಮದ ಅ.ಸಿರಸಗಿ, ಉಪಾಧ್ಯಕ್ಷ ಶ್ರೀಮತಿ ವಿಜಯಲಕ್ಷ್ಮೀ ಬೇಡರ, ಎಸ್.ಎಮ್.ವ್ಹಿ.ವ್ಹಿ ಸಂಘದ ಅಧ್ಯಕ್ಷ ಶಾಂತಗೌಡ.ಬಾ.ಪಾಟೀಲ, ಎಸ್.ಬಿ.ಪಿಯು ಕಾಲೇಜಿನ ಪ್ರಾಚಾರ್ಯ ಸಿ.ಎಸ್.ಹಿರೇಮಠ, ಸಿಂದಗಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಚ್. ಸೋಮಾಪೂರ, ವಿಜಯಪುರದ ವಿ.ದೈಹಿಕ ಉಪನ್ಯಾಸಕ ಶಾಂತಗೌಡ ಗೋಗಿ, ಸಿಂದಗಿ ಜೋಗೂರ ಮೋರ‍್ಸ್ನ ಉಮೇಶ್.ಸಿ.ಜೋಗೂರ, ಸಿಂದಗಿ ವಿ.ಮಹೇಶ್ವರಿ ಬ್ಯಾಂಕ್ ವ್ಯವಸ್ಥಾಪಕ ಸಂಗಯ್ಯ.ಎಂ.ಮಠ, ಕಲಕೇರಿ ಪಿಎಸ್‌ಐ ಸುರೇಶ ಮಂಟೂರ, ಶ್ರೀಧರ.ಎಸ್.ಬಿರಾದಾರ, ಪ್ರಾಂಶುಪಾಲ ಶ್ರೀಮತಿ ಆರ್.ಎಸ್.ಮುಜಾವರ ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.