ನಮ್ಮ ದೇಶದ ಸ್ವತ್ತುಗಳು ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಹೊಣೆ ಹಾಗೂ ಜವಾಬ್ದಾರಿ : ಡಿಸಿ ಫೌಜಿಯಾ ತರನ್ನುಮ್
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಕಲಬುರಗಿ: ನಮ್ಮ ದೇಶದ ಸ್ವತ್ತುಗಳು ಅವುಗಳನ್ನು ರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರಹೊಣೆ ಹಾಗೂ ಜವಾಬ್ದಾರಿ ಆಗಿದೆ ಅದರ ಸಂರಕ್ಷಣೆ ಮಾಡುವುದಕ್ಕಿಂತ ಅಲ್ಲಿ ಅನಾವಶ್ಯಕವಾಗಿ ಅಶಿಸ್ತು ಮಾಡುವುದೇ ಹೆಚ್ಚು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.
ಸೋಮುವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಕಲಬುರಗಿ ಹಾಗೂ ಇನ್‌ಟ್ಯಾಕ್ ಕಲಬುರಗಿ ಅಧ್ಯಾಯ ಮತ್ತು ಸರ್ಕಾರಿ ಕಾಲೇಜು (ಸ್ವಾಯತ್ತ) ಕಲಬುರಗಿ ರವರ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಡಾ. ಬಿ.ಆರ್.ಅಂಬೇಡ್ಕರ್ ಸಭಾಂಗಣ ಸರ್ಕಾರಿ ಕಾಲೇಜು (ಸ್ವಾಯತ್ತ) ರಾಜಾಪೂರ ಕಲಬುರಗಿ ಕಾರ್ಯಕ್ರಮದಲ್ಲಿ ಜೋತಿ ಬೆಳಗಿಸುವುದರ ಉದ್ಪಾಟಿಸಿ ಮಾತನಾಡಿದರು.
ಸೆಪ್ಟೆಂಬರ್ ೨೭ ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಮಾಡಬೇಕಾಗಿತ್ತು ಆದರೆ ಸೆಪ್ಟೆಂಬರ್ ೩೦ ರಂದು ಆಚರಣೆ ಮಾಡುವುದಕ್ಕೆ ಯುವ ಪೀಳಿಗೆಗಳಿಗೆ ಅರಿವು ಮೂಡಿಸುವ ಸಲುವಾಗಿ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಲಬುರಗಿ ಕೋಟೆಯಲ್ಲಿ ಇರುವ ಒಂದೋಂದು ಕಲ್ಲುಗಳು ಎಷ್ಟು ಪುರಾತನ ಕಾಲದ್ದು ಅವುಗಳಿಗೆ ಯಾವ ರೀತಿಯಲ್ಲಿ ಕೆತ್ತನೆ ಮಾಡಿದ್ದಾರೆ. ಎಂಬುಂದು ಕಾಳಜಿ ವಹಿಸಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಇದರ ಜತೆಗೆ ಸಂಸ್ಕೃತಿ ಕೂಡ ಮುಖ್ಯವಾಗಿದೆ ವಿವಿಧತೆಯಲ್ಲಿ ಏಕತೆ ಹೊಂದಿದ್ದು ಅವರವರ ಸಂಸ್ಕೃತಿ ಬಗ್ಗೆ ಕಾಳಜಿ ವಹಿಸಬೇಕು ಎಂದರು.ನಮ್ಮ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ನಾಗಾವಿ ಹೀಗೆ ಇನ್ನೂ ಇರುವ ಪ್ರವಾಸಿ ತಾಣಗಳು ಎಷ್ಟು ಪುರಾತನ ಕಾಲದ್ದಾಗಿದೆ ಎಂದು ಅವರು ತಿಳಿಸಿದರು.
೭ ಮತ್ತು ೮ ನೇ ತರಗತಿಯ ವಿದ್ಯಾರ್ಥಿಗಳು ಐತಿಹಾಸಿಕದ ಬಗ್ಗೆ ಬಹಳ ಚನ್ನಾಗಿ ಭಾಷಣ ಮಾಡಿದರು. ಆದ್ದರಿಂದ ಪ್ರವಾಸಿ ತಾಣಗಳ ತರಬೇತಿ ಕೂಟ್ಟು ಅದರ ಬಗ್ಗೆ ಗೈಡ್ಸ್ಗಳನ್ನು ನೇಮಕ ಮಾಡಿ ಪ್ರಶಸ್ತಿಗಳನ್ನು ಪ್ರಧಾನ ಮಾಡಿದ್ದೇವೆ. ಇದೂ ಇಷ್ಟೇಕ್ಕೆ ಸಿಮಿತವಲ್ಲ ಮುಂಬರುವ ದಿನಗಳಲ್ಲಿ ಪ್ರತಿಯೊಂದು ಕಾಲೇಜು ಮತ್ತು ವಿಶ್ವವಿದ್ಯಾಲಯ ಮಾಡಬೇಕು ಎಂದು ಆಶ್ವಾಸನೆ ಕೊಟ್ಟರು.
ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಅರ್ಥಶಾಸ್ತ್ರ ವಿಭಾಗ ಸರ್ಕಾರಿ ಕಾಲೇಜು(ಸ್ವಾಯತ್ತ) ಕಲಬುರಗಿಯ ಡಾ.ಎಮ.ಎಸ್. ಕುಂಬಾರ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನಲೆ ಇದೆ. ಶೇ ೭೯ ರಷ್ಟು ಆದಾಯ ಇದರಿಂದ ಬರುತ್ತದೆ. ಪ್ರತಿಶತ ೧೦ ರಷ್ಟು ಉದ್ಯೋಗ ಸೃಷ್ಟಿಸುವ ಚಟುವಟಿಕೆ ಹೊಂದಿದೆ ಪ್ರವಾಸೋದ್ಯಮ ಮತ್ತು ಶಾಂತಿಗಳ ಬಗ್ಗೆ ಹೊಸ ಹೊಸ ಘೋಷವಾಕ್ಯ ಸೃಷ್ಟಿಸಿವೆ. ಪ್ರವಾಸೋದ್ಯಮ ಮತ್ತು ಶಾಂತಿ ಇದು ಯಾವುದೇ ಕಾರಣಕ್ಕೂ ವಾಣಿಜ್ಯ ಚಟುವಟಿಕೆ ಆಗಬಾರದು. ಕಲೆ ಮತ್ತು ಸಂಸ್ಕೃತಿ ತಿಳಿದುಕೊಂಡು ಶಾಂತಿ ದೊತರಾಗಬೇಕು ಎಂದರು.
ಯುವಮಿತ್ರರು ಮೋಸ ಹೋಗಬಾರದು ಪ್ರವಾಸ ತಾಣಗಳು ಸೆಲ್ಪಿ ಫೋಟುಗಾಗಿ ವಿಡಿಯೋ, ಶಾರ್ಟ್ಗಳಿಗಾಗಿ ಮಾತ್ರ ಸೀಮಿತ ಆಗಬಾರದು ಪ್ರವಾಸಿತಾಣಗಳನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಕಲಬುರಗಿ ಅಧ್ಯಾಯ ಇನ್ಟಾö್ಯಕ್ ಸಂಯೋಜಕರು, ಡಾ.ಶಂಭುಲಿಂಗ ಎಸ್.ವಾಣಿ ಅವರು ಮಾತನಾಡಿ, ವಿನೂತ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು. ಸನ್ನತಿಯ ರಣಮಂಡಲ ಮತ್ತು ಕನಕನಹಳ್ಳಿಯಲ್ಲಿನ ಸ್ತೋಪ ನೋಡುವಂತಹ ಪ್ರವಾಸಿ ತಾಣಗಳು ಅಶೋಕನ ಐದು ಜನ ಹೆಂಡ್ತಿಯರ ವಿಶೇಷ ಚಿತ್ರಿಕರಣ ನೋಡಬಹುದಾಗಿದೆ. ಪ್ರಮುಖವಾಗಿ ೧೪ ನೇ ಶತಮಾನದಲ್ಲಿನ ಜಾಮೀಯಾ ಮಸೀದಿ ೨೧೬ ಅಡಿ ಧ್ವನಿ ಪ್ರಸರಣ ಕೇಳಿಬರುತ್ತದೆ. ಅತ್ಯಂತ ಉದ್ದವಾದ ತೋಪು ನಮ್ಮ ಕೋಟೆಯಲ್ಲಿ ಕಾಣಬಹುದು ಎಂದು ತಿಳಿಸಿದರು.
ಸರಕಾರಿ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲರು ಡಾ. ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದರು.
ಪ್ರಬಂಧ ಮತ್ತು ಭಾಷಣ ಹಾಗೂ ಟ್ರೇನಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಮೀನಾಕ್ಷಿ ಆರ್ಯ, ಸರ್ಕಾರಿ ಸ್ವಾಯತ್ತ ಕಾಲೇಜಿನ ಪರೀಕ್ಷಾ ನಿಯಂತ್ರಕರು ಡಾ.ಟಿ.ವಿ ಅಡಿವೇಶ, ಕಲಾ ವಿಭಾಗದ ಡೀನ್ ಡಾ.ವಿಜಯಕುಮಾರ್ ಸಾಲಿಮನಿ, ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್ ಡಾ. ರಾಜಕುಮಾರ ಸಲಗರ ಮತ್ತು ವಿಜ್ಞಾನ ವಿಭಾಗದ ಡೀನ್ ಡಾ. ದೌಲಪ್ಪ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದರು.