ಸಿಎಂ ತಪ್ಪು ಮಾಡುವ ಜಾಯಮಾನದವರಲ್ಲ : ಕಾಂಗ್ರೆಸ್ ಮಹಿಳಾ ಮುಖಂಡೆ ಗೌರಮ್ಮ ಮುತ್ತತ್ತಿ

Oct 1, 2024 - 21:58
 0
ಸಿಎಂ ತಪ್ಪು ಮಾಡುವ ಜಾಯಮಾನದವರಲ್ಲ : ಕಾಂಗ್ರೆಸ್ ಮಹಿಳಾ ಮುಖಂಡೆ ಗೌರಮ್ಮ ಮುತ್ತತ್ತಿ
ಕಾಂಗ್ರೆಸ್ ಮಹಿಳಾ ಮುಖಂಡೆ ಗೌರಮ್ಮ ಮುತ್ತತ್ತಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ದೇವರಹಿಪ್ಪರಗಿ: ನಾಡು ಕಂಡ ಅಪರೂಪದ ರಾಜಕಾರಣಿ ಸಿದ್ದರಾಮಯ್ಯನವರ ಸಾಧನೆ, ರಾಜ್ಯದಲ್ಲಿನ ಜನಪರ ಆಡಳಿತ ಸಹಿಸದೆ ವಿರೋಧಪಕ್ಷದವರು ನಡೆಸಿದ ಕುತಂತ್ರ ಫಲ ನೀಡುವುದಿಲ್ಲ. ಸಿಎಂ ಸಿದ್ದರಾಮಯ್ಯ ತಪ್ಪು ಮಾಡುವ ಜಾಯಮಾನದವರಲ್ಲ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಮಹಿಳಾ ಮುಖಂಡರಾದ ಗೌರಮ್ಮ ಮುತ್ತತ್ತಿ ಹೇಳಿದರು.                

ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಹರಿದಾಡುತ್ತಿದೆ. ನ್ಯಾಯಾಂಗದಲ್ಲಿ ನಮಗೆಲ್ಲ ಸಂಪೂರ್ಣ ನಂಬಿಕೆಯಿದ್ದು, ಸುಳ್ಳು ಪ್ರಕರಣ ದಾಖಲಿಸಿರುವುದರಿಂದ ಆರೋಪ ಮುಕ್ತರಾಗುತ್ತಾರೆ. ಇಡೀ ರಾಜ್ಯ ಕಾಂಗ್ರೆಸ್ ಪಕ್ಷ ಹಾಗೂ ಸಚಿವ ಸಂಪುಟದ ಜೊತೆಗೆ ರಾಜ್ಯದ ಹಿತೈಸಿ ಬಳಗ ಅವರ ಬೆಂಬಲಕ್ಕಿದೆ. ಸುಮ್ಮನೆ ದಿನ ಬೆಳಗಾದರೆ ಸಿಎಂ ಬದಲಾವಣೆ ಚರ್ಚೆಯಿಂದ ಯಾವುದೇ ಕಾರ್ಯ ಸಾಧುವಾಗಲ್ಲ. ರಾಜ್ಯದಲ್ಲಿ ಅದೆಷ್ಟೇ ಸಂಕಷ್ಟ ಬಂದರೂ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆ ಗಳನ್ನು ಅನುಷ್ಠಾನಗೊಳಿಸಿ ಜನಪ್ರಿಯ ರಾಗಿದ್ದಾರೆ. ಇದರಿಂದ ವಿರೋಧ ಪಕ್ಷದವರಿಗೆ ಸಿದ್ರಾಮಯ್ಯನವರ ಜನಪ್ರಿಯತೆ ಸಹಿಸಲಾಗುತ್ತಿಲ್ಲ. ಅದಕ್ಕಾಗಿ ಇಂತಹ ವಿಚಾರವನ್ನು ಹರಿಬಿಟ್ಟು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಜನಪರ ಯೋಜನೆಗಳು ಎಲ್ಲ ಪಕ್ಷದವರೂ ಬೇರೆ ರಾಜ್ಯಗಳಲ್ಲಿ ಅಳವಡಿಸಿ ಕೊಳ್ಳುತ್ತಿದ್ದಾರೆ.  ಇಂತಹ ಸಮಯದಲ್ಲಿ ಸಿಎಂ ಬದಲಾವಣೆ ವಿಚಾರ ಅಪ್ರಸ್ತುತವಾಗಿದೆ. ಅಭಿವೃದ್ಧಿಗೆ ಸಹಕಾರ ನೀಡಬೇಕು. ನಮ್ಮ ರಾಜ್ಯದ ಪ್ರಗತಿಗೋಸ್ಕರ ಕೈ ಜೋಡಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.