307 ನೆಯಮಾಸಿಕ ಶರಣ ಸಂಗಮ ಹಾಗೂ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ

Jan 22, 2025 - 08:18
 0
307 ನೆಯಮಾಸಿಕ ಶರಣ ಸಂಗಮ ಹಾಗೂ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ
ಭಾಲ್ಕಿ : ಹಿರೇಮಠ ಸಂಸ್ಥಾನ ಭಾಲ್ಕಿ ಅವರ ವತಿಯಿಂದ ದಿನಾಂಕ 22-01-2025 ಬುಧವಾರ ಸಾಯಂಕಾಲ 5-30 ಗಂಟೆಗೆ 307ನೆಯ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಉತ್ಸವವನ್ನು   ಚನ್ನಬಸವಾಶ್ರಮ ಭಾಲ್ಕಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷರು ಅನುಭವಮಂಟಪ ಬಸವಕಲ್ಯಾಣ ಅವರು ವಹಿಸಲಿದ್ದಾರೆ. ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ, ಭಾಲ್ಕಿ ಅವರ ದಿವ್ಯ ಸಮ್ಮುಖದಲ್ಲಿ ಜರುಗಲಿದೆ. ಪೂಜ್ಯ ಶ್ರೀ ಡಾ. ಗಂಗಾಂಬಿಕಾ ಅಕ್ಕ ಬಸವಸೇವಾ ಪ್ರತಿಷ್ಠಾನ, ಬಸವಗಿರಿ, ಬೀದರ ಅವರಿಂದ ಅನುಭಾವ ಗೋಷ್ಠಿ ಜರುಗಲಿದೆ. ಶರಣ ಸೋಮಶೇಖರ ಬಿರಾದಾರ ಚಿದ್ರಿ ಜಿಲ್ಲಾಧ್ಯಕ್ಷರು ಕರ್ನಾಟಕ ಸರಕಾರಿ ನೌಕರರ ಸಂಘ, ಬೀದರ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶರಣ ಮಾಣಿಕರಾವ ವಾಡೇಕರ್ ಗಡವಂತಿ ಜಿಲ್ಲಾಧ್ಯಕ್ಷರು, ಸಿದ್ಧರಾಮೇಶ್ವರ ಸಮಾಜ, ಬೀದರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಶರಣ ದತ್ತು ತಿಪ್ಪಣ್ಣ ಪವಾರ ಗೌರವಾಧ್ಯಕ್ಷರು ಸಿದ್ದರಾಮೇಶ್ವರ ಸಮಾಜ ಬೀದರ, ಶರಣ ರಾಜಕುಮಾರ ಹನುಮಂತ ಸಿಂದೆ ಅಧ್ಯಕ್ಷರು ಸಿದ್ದರಾಮೇಶ್ವರ ಸಮಾಜ ಭಾಲ್ಕಿ, ಶರಣ ಸಂಜು ಕುಮಾರ್ ಸಿಂಧೆ ಕಾರ್ಯದರ್ಶಿಗಳು ಸಿದ್ದರಾಮೇಶ್ವರ ಸಮಾಜ  ಭಾಲ್ಕಿ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶರಣ ಅಪ್ಪಾರಾವ್ ಸೌದಿ ಕನ್ನಡಪ್ರಭ ಕಲಬುರ್ಗಿ ಅವೃತ್ತಿ ಮುಖ್ಯಸ್ಥರು ಬೀದರ್, ಶರಣ ರಾಜಕುಮಾರ್ ಹೆಬ್ಬಾಳ ಪ್ರಧಾನ ಕಾರ್ಯದರ್ಶಿಗಳು ರಾಷ್ಟ್ರೀಯ ಜನಪದ ಬುಡಕಟ್ಟು ಕಲಾಪರಿಷತ್ತು ನವದೆಹಲಿ, ಶರಣ ಚಂದ್ರಶೇಖರ ಬನ್ನಾಳೆ ಅಧ್ಯಕ್ಷರು ಸರಕಾರಿ ನೌಕರರ ಸಂಘ ಭಾಲ್ಕಿ ಘಟಕ, ಶರಣ ಚನ್ನಬಟ್ಟೆ ಕಲ್ಲಪ್ಪ ಸಿದ್ದಪ್ಪ ಲೈನ್ ಮ್ಯಾನ್ ಅವರಿಗೆ ಸನ್ಮಾನ ಜರುಗುವುದು.

ಶರಣೆ ವಿಜಯಲಕ್ಷ್ಮಿ ಸಂಗಮೇಶ್ ಬಿರಾದಾರ್ ಶಿಕ್ಷಕರು ಗುರುಪ್ರಸಾದ ಪ್ರಾಥಮಿಕ ಶಾಲೆ ಭಾಲ್ಕಿ ಅವರಿಂದ ಧರ್ಮ ಗ್ರಂಥ ಪಠಾಣ ಜರುಗುವುದು. ಶರಣ ದೀಪಕ ಠಮಕೆ ಭಾತಂಬ್ರಾ ಅವರು ನಿರೂಪಿಸುವರು. ಶರಣ ರಾಜು ಜುಬರೆ ಭಾಲ್ಕಿ
ವಚನ ಗಾಯನ ಮಾಡುವರು.  ಭಕ್ತಿದಾಸೋಹವನ್ನು ಶರಣೆ ಶ್ರೀದೇವಿ ಶರಣ ಗಣಪತರಾವ ಪಾಂಚಾಳ ಭಾಲ್ಕಿ ಅವರು ನೆರವೇರಿಸುವರು ಎಂದು ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.