ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಬಿಇಓ ಯಡ್ರಾಮಿ

Oct 2, 2024 - 22:12
 0
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು : ಬಿಇಓ ಯಡ್ರಾಮಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಸಿಂದಗಿ : ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ ಎಂದು ನೂತನ  ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಬಿ ಯಡ್ರಾಮಿ ಹೇಳಿದರು.

 ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ  ಇಲಾಖೆಯ ಕಾರ್ಯಲಯದಲ್ಲಿ ವಿಭಾಗದ ಹೊರಗಿನ ಸಾಮಾನ್ಯ ವರ್ಗಾವಣೆ ಯಲ್ಲಿ  ಸಿಂದಗಿ ತಾಲ್ಲೂಕಿನ ಶಾಲೆಗಳನ್ನು ಆಯ್ಕೆ ಮಾಡಿಕೊಂಡ ಕಲಬುರ್ಗಿ, ಯಾದಗಿರಿ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಕರಿಗೆ  ಏಕಕಾಲಕ್ಕೆ ಚಾಲನಾ ಆದೇಶಗಳನ್ನು ನೀಡಿ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡುವ ಮೂಲಕ ಅವರು ಮಾತನಾಡಿ  ಶಿಕ್ಷಕ ವೃತ್ತಿ ಬಹಳ ಪವಿತ್ರವಾದುದು. ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ಗಳಿಸುವ ಜ್ಞಾನ ಮತ್ತು ಅನುಭವವನ್ನು ತಮ್ಮ ಶಾಲೆಯ ತರಗತಿ ಕೋಣೆಯಲ್ಲಿ ನಂತರವು ಸಮಾಜಕ್ಕೆ ನೀಡಿ, ಸಮಾಜದ ಋಣ ತೀರಿಸಬೇಕು ಎಂದರು.            

ಈ ವೇಳೆಯಲ್ಲಿ ಶಿಕ್ಷಕಿ ಪದ್ಮ ರವಿ ಎಸ್.ಎ.ಅರಳಿಮಟ್ಟಿ ಇದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.