ಯುವಕರಿಗೆ ಸದಾ ಸ್ಪೂರ್ತಿ ಕ್ರಾಂತಿಕಾರಿ ಭಗತಸಿಂಗ : ಶಂಕರಗೌಡ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬಸವನಬಾಗೇವಾಡಿ : ಅಸಮಾನ ತೆಯ ವ್ಯವಸ್ಥೆಯನ್ನು ಹೋಗಲಾಡಿಸಿ ಬದಲಾವಣೆ ತರಲು ಹೋರಾಡಿದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ್ ಹೇಳಿದರು
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ಏರ್ಪಡಿಸಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಅವರ ೧೧೭ನೆಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶಭಕ್ತ ಭಗತ್ ಸಿಂಗ್ ಅವರ ಜೀವನ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆ. ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಪಾಲ್ಗೊಂಡು ಸಣ್ಣ ವಯಸ್ಸಿನಲ್ಲೇ ನೇಣುಕಂಬಕ್ಕೆ ಏರಿದವರು ಭಗತ್ ಸಿಂಗ್ ಅವರು ಜಲಿಯನ್ ವಾಲಾಬಾಗ್ ದುರಂತದ ನಂತರದಲ್ಲಿ ಭಗತ್ ಸಿಂಗ್ ಒಬ್ಬ ಕ್ರಾಂತಿಕಾರಿ ಯಾಗಿ ಬದಲಾಗುತ್ತಾರೆ ಭಗತ್ ಸಿಂಗ್ ಅವರು ಬ್ರಿಟಿಷರಿಗೆ ಸಿಂಹಸ್ವಪ್ನ ರಾಗಿದ್ದರು. ಭಗತ್ ಸಿಂಗ್ ರಾಜಗುರು ಸುಖದೇವ್ ಮೂವರು ಕೇವಲ ೨೪ ವರ್ಷದ ಪ್ರಾಯದಲ್ಲಿ ದೇಶಕ್ಕಾಗಿ ಜೀವವನ್ನು ತ್ಯಾಗ ಮಾಡಿದರು.
ಯುವ ಜನರು ಕ್ರಾಂತಿಕಾರಿ ವಿಚಾರಗಳಿಂದ ದೂರವಾಗುತ್ತಿದ್ದಾರೆ ಭಗತ್ ಸಿಂಗ್ ಕಂಡಂತಹ ಕನಸು ನನಸಾಗದೆ ಉಳಿದಿದೆ. ಭಗತ್ ಸಿಂಗ್ ಕೇವಲ ಸ್ವಾತಂತ್ರ‍್ಯವನ್ನು ಮಾತ್ರ ಬಯಸಿರಲಿಲ್ಲ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಮಾನತೆ ಜಾತಿ ಧರ್ಮಗಳಿಂದ ಮುಕ್ತವಾದ ಯುವ ಭಾರತದ ಪರಿಕಲ್ಪನೆಯ ಸ್ವಾತಂತ್ರ‍್ಯವನ್ನು ಕೂಡ ಬಯಸಿದ್ದರು ಅವರ ಕ್ರಾಂತಿಕಾರಿ ವಿಚಾರಗಳು ಅವರ ಆದರ್ಶಗಳು ಇಂದಿನ ಯುವ ಜನತೆಗೆ ದಾರಿದೀಪವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವಸೈನ್ಯದ ತಾಲೂಕ ಅಧ್ಯಕ್ಷರಾದ ಸಂಜು ಬಿರಾದಾರ ಸುನೀಲ ಚಿಕ್ಕೋಂಡ.ನಿಂಗಪ್ಪ ಅವಟಿ ಮನ್ನಾನ ಶಾಬಾದಿ. ಮಲ್ಲು ಬನಾಸಿ ಮಹಾಂತೇಶ ಹೆಬ್ಬಾಳ. ಅಮೀನ ಚೌದ್ರಿ ಸಲೀಮ ಸಯ್ಯದ ದಯಾನಂದ ಜಾಲಗೇರಿ ಸಂಗಮೇಶ ಕಲ್ಲೂರ ಸುರೇಶ ಚಿಕ್ಕೊಂಡ ರಾಮಣ್ಣ ಕಲ್ಲೂರ ಬಸವರಾಜ ಮಾಲಗಾರ ಅನಿಲ ಬೋಸ್ಲೆ ವೀರೇಶ ಗಬ್ಬೂರ ದೀಪಕ ಬೆದರಕರ ಉಪಸ್ಥಿತರಿದ್ದರು.