ಬಬಲೇಶ್ವರ: ಟೊಯೋಟಾ ಕರ್ಲೋಸ್ಕರ್ ಸಿಎಸ್ಆರ್ ಅನುದಾನದ ಅಡಿಯಲ್ಲಿ, ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಕಣಮುಚನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯ ಸಂಕುಸ್ಥಾಪನೆಯ ಉದ್ಘಾಟನಾ ಕಾರ್ಯಕ್ರಮವನ್ನು ಸಚಿವ ಎಂ. ಬಿ. ಪಾಟೀಲ ಅವರ ಆಪ್ತ ಕಾರ್ಯದರ್ಶಿ ಬಿ.ಎನ್. ಬೋಸಲೆ ಉದ್ಘಾಟಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕಲ್ಲಯ್ಯ ಹಿರೇಮಠ, ಎಸ್, ಡಿ, ಎಂ. ಸಿ. ಅಧ್ಯಕ್ಷ ಲಕ್ಷ್ಮಣಗೌಡ ಬಿರಾದರ, ಮುಖ್ಯ ಶಿಕ್ಷಕ ಆರ್. ವಿ. ಹೊಸುರ, ಮತ್ತು ಸಿಬ್ಬಂದಿ ವರ್ಗ ಹಾಗೂ ವಿನೋದ, ಗ್ರಾಮ ಪಂಚಾಯತಿಯ ಸದಸ್ಯರು, ಊರಿನ ಹಿರಿಯರು, ನವ ಯುವಕರು, ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರಕಾಶ್ ಮನ್ನಿಕೆರಿ, ಪ್ರಾಸ್ತಾವಿಕ ನುಡಿ ಬಸವರಾಜ ತೆಲಿ, ವಂದನಾರ್ಪಣೆಯನ್ನು ಅಂಬಿಕಾ ಲಗಟಗೇರ ನೆರವೇರಿಸಿದರು.