ತಾಂಬಾ ಅಭಿವೃದ್ಧಿಗೆ ಜೀತದಾಳನಂತೆ ದುಡಿಯುತ್ತೇನೆ : ಶಾಸಕ ಅಶೋಕ ಮನಗೂಳಿ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ತಾಂಬಾ : ಅಧಿಕಾರ ಶಾಶ್ವತ ಅಲ್ಲ ಇರುವ ದಿನಗಳು ಸಾರ್ವಜನಿಕರ ಬಡವರ ನೊಂದವರ ಧ್ವನಿಯಾಗಿ ಕಾರ್ಯ ಮಾಡೋಣ, ತಾಂಬಾ ಗ್ರಾಮದ ಅಭಿವೃದ್ಧಿಗೆ ನಾನು ಜೀತದಾಳನಂತೆ ದುಡಿದು ಗ್ರಾಮ ಮಾದರಿ ಗ್ರಾಮನಾಗಿಸುತ್ತೇನೆ ಎಂದು ಸಿಂದಗಿ ಶಾಸಕ ಅಶೋಕ ಎಮ್ ಮನಗೂಳಿ ಹೇಳಿದರು.
ಅವರು ೨೦೨೩-೨೪ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆಗೆ ಅಂದಾಜು ರೂ ೫೦ ಲಕ್ಷ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ರಸ್ತೆ ಸುಧಾರಣೆ ಮಾಡಬೇಕೆಂಬ ಸಂಕಲ್ಪದAತೆ ಕಾಮಗಾರಿಗೆ ಅನುದಾನ ನೀಡಲಾಗಿದ್ದೆ. ನಾನು ಯಾವುದೇ ಧರ್ಮ ಹಾಗೂ ಜಾತಿಗೆ ಅಂಟಿಕೊAಡು ಕೆಲಸ ಮಾಡದೆಯೇ ಎಲ್ಲ ಧರ್ಮ ಹಾಗೂ ಪ್ರತಿಯೊಂದು ಜಾತಿಯವರ ಕೆಲಸ ಕಾರ್ಯ ಮಾಡುತ್ತಿದ್ದೇನೆ. ಅದಕ್ಕೆ ಪ್ರತಿಯೊಂದು ಸಮಾಜದವರು ಯಾವುದೇ ಕೆಲಸ ಕಾರ್ಯಗಳಿದ್ದರೆ ನಿರ್ಭಿತಿಯಿಂದ ನನ್ನ ಬಳಿ ಬಂದು ಕೆಲಸ ಮಾಡಿಕೊಳ್ಳುವಂತೆ ಮನವಿ ಮಾಡಿದರು. ನಾನು ನಿಮ್ಮಂತೆ ಒಬ್ಬ ವ್ಯಕ್ತಿ. ನಿಮ್ಮ ಕಷ್ಟಗಳಿಗೆ ಸ್ಪಂದಿಸಿ, ಸಹಾಯ ಮಾಡುವ ಸೇವಕ ನಾಗಿದ್ದೇನೆ. ಹೊರತು ನಾಯಕನಲ್ಲ. ಗ್ರಾಮದಲ್ಲಿ ಆಗದೇಇರುವ ಕೇಲಸಗಳನ್ನು ನನ್ನ ಅಧಿಕಾರದಲ್ಲಿ ಮಾಡಿತೋರಿಸುವೆ. ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಬೆರಗಾಗಿದ್ದೇನೆ. ಜನತೆಗೆ ಮೂಲಸೌಕರ್ಯ ಒದಗಿಸಲು ಬದ್ದನಾಗಿದ್ದೇನೆ. ಅವರ ಋಣ ಎಂದಿಗೂ ಮರೆಯಲ್ಲ. ನನ್ನ ಕೈಲಾದಮಟ್ಟಿಗೆ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ. ತಾಂಬಾ ಗ್ರಾಮ ಸಮಗ್ರ ಅಭಿವೃದ್ಧಿಯ ನನ್ನ ಕನಸಿಗೆ ಜನತೆ ಕೈಜೋಡಿಸಬೇಕು ಎಂದರು.
ರಜಾಕ ಚಿಕ್ಕಗಸಿ, ರಾಚಪ್ಪ ಗಳೇದ, ಅಪ್ಪಣ್ಣ ಕಲ್ಲೂರ, ಪರಶುರಾಮ ಬಿಸನಾಳ, ನೂರಹ್ಮದ ಅತ್ತಾರ, ಕೆ.ಎನ್.ಪಾಟೀಲ, ವಿಜಯಕುಮಾರ ದೊಡ್ಡಮನಿ, ದಯಾನಂದ ನಿಂಬಾಳ, ಗೋಪಾಲ ಅವರಾದಿ, ಫತ್ತೆಸಾಬ ಉಜನಿ, ಅಮರ್ ವಸ್ತçದ, ಜಕ್ಕಪ್ಪ ತ.ಹತ್ತಳ್ಳಿ, ಶಾಂತಪ್ಪ ಹಚನಾಳ, ಗುರಪ್ಪಾ ಜಂಬಗಿ, ಸಿದ್ದನಗೌಡ ಪಾಟೀಲ, ಯೊಗಪ್ಪ ಹೋರಪೇಟಿ, ಬಸವರಾಜ ಅವಟಿ, ಮಹ್ಮದ ದಡೇದ, ಮುನ್ನ ನಾಗಠಾಣ, ಜೈಭೀಮ ರೂಗಿ, ಅನೇಕರು ಉಸ್ಥಿತರಿದ್ದರು.