ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಉತ್ತಮ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸಬೇಕು: ಮಸಿಬಿನಾಳ

Oct 1, 2024 - 21:18
 0
ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಉತ್ತಮ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸಬೇಕು: ಮಸಿಬಿನಾಳ
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಮಾತನಾಡಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 


ದೇವರಹಿಪ್ಪರಗಿ:ಅಂಗನವಾಡಿ ಕೇಂದ್ರಗಳು,ಮಕ್ಕಳ ಪೂರ್ವ ಬೆಳವಣಿಗೆಯ ಅಡಿಪಾಯಗಳಾಗಿವೆ,ಆದ್ದರಿಂದ ಪ್ರತಿಯೊಬ್ಬ ಅಂಗನವಾಡಿ ಕಾರ್ಯಕರ್ತೆಯರು ಶ್ರದ್ದೆ ಹಾಗೂ ಸೇವಾಮನೋಭಾವದಿಂದ ಕಾರ್ಯನಿರ್ವಹಿಸಿ ಮಕ್ಕಳ ಉತ್ತಮ ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಪ.ಪಂ.ಉಪಾಧ್ಯಕ್ಷರಾದ ರಮೇಶ ಮಸಿಬಿನಾಳ ಕರೆ ನೀಡಿದರು.

ಪಟ್ಟಣದ ಕರಿಸಿದ್ದೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,ಸಮಗ್ರಶಿಶು ಅಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡ,ರಾಷ್ಟ್ರೀಯ ಅಭಿಯಾನದಡಿಯಲ್ಲಿ, ಪೋಷಣ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದ ಅವರು,ಪೋಷಣ ಕಾರ್ಯಕ್ರಮಪ.ಪಂ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇ ಇರುವುದು ಕಂಡು ಬಂದಿದ್ದು, ಇಲಾಖೆಯಿಂದ ಮೂಲಭೂತ ಸೌಕರ್ಯದ ಸಲುವಾಗಿ ವರದಿ ನೀಡಿದ್ದೆ ಆದರೆ, ಪ.ಪಂ ಯಿಂದ ಅಂಗನವಾಡಿ ಕೇಂದ್ರಗಳಿಗೆ ಎನ್ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಸಾಧ್ಯ ಎಂಬುದನ್ನು ಶಾಸಕರ, ಅಧ್ಯಕ್ಷರ, ಸರ್ವ ಸದಸ್ಯರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಸೌಲಭ್ಯ ಒದಗಿಸಲು ಬದ್ಧ. ಕಾರ್ಯಕರ್ತೆಯರಿಗೆ ಸರ್ಕಾರ ಮಹತ್ತರ ಜವಾಬ್ದಾರಿಯನ್ನು ನೀಡಿದೆ, ನಿಮ್ಮ ವ್ಯಾಪ್ತಿಯಲ್ಲಿ ಸಮಸ್ಯೆಗಳಿದ್ದರೆ ಸದಸ್ಯರ ಗಮನಕ್ಕೆ ತಂದು ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂದಗಿ ಶಿಶುಅಭಿವೃದ್ಧಿ ಅಧಿಕಾರಿ ಶಂಭುಲಿಂಗಯ್ಯ ಹಿರೇಮಠ ಅವರು ಮಾತನಾಡಿ, ರಾಷ್ಟ್ರೀಯ ಪೋಷಣ ಅಭಿಯಾನ ದಡಿಯಲ್ಲಿ ಪ್ರತಿ ವರ್ಷ ಸೆಪ್ಟಂಬರ್‌ನಲ್ಲಿ ಪೋಷಣ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಮಾಡಲಾಗುತ್ತದೆ.ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು,ಪೌಷ್ಟಿಕತೆಗೆ ಒತ್ತು ನೀಡುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಅಲ್ಲದೇ ಈ ಅಭಿಯಾನದ ಉದ್ದೇಶ,ಮಕ್ಕಳಪೌಷ್ಟಿಕತೆಗೆ ಪೋಷಕಾಂಶಗಳು,ಜೀವಸತ್ವಗಳು ಅವಶ್ಯ ಇದಕ್ಕಾಗಿ ಸಿರಿಧಾನ್ಯಗಳಸತ್ವ ಇರುವ ಆಹಾರ ಪದಾರ್ಥಗಳನ್ನು ಇಂದು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಎಸಿಡಿಪಿಓ ಎಸ್.ಎನ್.ಕೋರವಾರ, ಉಜ್ವಲ ಸಂಸ್ಥೆಯ ಸಾಗರ ಘಾಟಗೆ ಸೇರಿದಂತೆ ಹಲವಾರು ಜನ ಮಾತನಾಡಿ, ಅಂಗನವಾಡಿಯಲ್ಲಿ ವಿತರಿಸುವ ಪೌಷ್ಠಿಕತೆಯ ಆಹಾರಗಳ ಬಗ್ಗೆ ತಪ್ಪು ತಿಳಿವಳಿಕೆ ಬೇಡ,ಆ ಪೌಷ್ಠಿಕತೆಯಲ್ಲಿ ವೀಶೇಷವಾದ ಪ್ರೋಟಿನ್ ಗಳು ಇರುತ್ತದೆ.ಆದ್ದರಿಂದ ತಾಯಂದಿರು ಮಕ್ಕಳಿಗೆ ತುಪ್ಪು,ಹಾಲು,ಉಪ್ಪು,ಸಕ್ಕರೆ,ಹೀಗೆ ಪದಾರ್ಥಗಳನ್ನು ಮಿಶ್ರಣಮಾಡಿ ಕೊಟ್ಟರೆ ಒಳ್ಳೆಯದು ಎಂದು ಸಲಹೆ ನೀಡಿದರು. ಮಕ್ಕಳಿಗೆ ಅಂಗಡಿ ಮುಂಗಟ್ಟುಗಳಲ್ಲಿರುವ ಪಾದಾರ್ಥಗಳು ಹಾಗೂ ಪಿಜ್ಜಾ,ಬರ್ಗರ್,ಇನ್ನು ಮುಂತಾದ ತಿನಿಸುಗಳಿಂದು ದೂರವಿರಿಸಿ ಪೌಷ್ಠಿಕಾಂಶದ ಪಧಾರ್ಥಗಳನ್ನು ಕೊಡಬೇಕು ಎಂದು ತಿಳಿಸಿದರು. 
ಸಂಧರ್ಭದಲ್ಲಿ ಪಟ್ಟಣದ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಗರ್ಭಿಣಿಯರಿಗೆ ಸೀಮಂತ, ಮಕ್ಕಳ ಹುಟ್ಟು ಹಬ್ಬ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮ ನಡೆಯಿತು. ಚಧ್ಮ ವೇಷದ ಮಕ್ಕಳನ್ನು ಗುರುತಿಸಿ ಉಡುಗೊರೆ ಕೊಟ್ಟಿದ್ದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಸದಸ್ಯರುಗಳಾದ ಶಾಂತಯ್ಯ ಜಡಿಮಠ, ಕಾಸು ಜಮಾದಾರ, ಮಂಗಳೇಶ ಕಡ್ಲೆವಾಡ, ರತ್ನಬಾಯಿ ದೇವುರ, ಬಸವರಾಜ ದೇವಣಗಾಂವ, ಆರೋಗ್ಯ ಇಲಾಖೆಯ ಸುಕನ್ಯಾ ಚಳಗೇರಿ,ಮೇಲ್ವಿಚಾರಕಿಯರಾದ ಶಾಂತಾ ನಾಯಕ್, ಶಾಹಿದ್ ಕಂಗಲ್, ನಮ್ಮೂರ ಗ್ರಾಮದ ಶಶಿಕಾಂತ ಸುಂಗಠಾಣ , ರಾವೂತ ಮರಭಿ‌ , ಅಂಗನವಾಡಿ ಕಾರ್ಯಕರ್ತೆಯರಾದ ಅರ್.ಸಿ.ಗುತ್ತೇದಾರ, ರೇಣುಕಾ ಸೇರಿದಂತೆ ಪಟ್ಟಣದ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು, ಗಣ್ಯರು, ಮುಖಂಡರು ಸೇರಿದಂತೆ ಇತರರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.