ಶಾಸಕ ಯತ್ನಾಳ ಒಬ್ಬ ಮಾನಸಿಕ ರೋಗಿ : ಸಾಧೀಕ ಸುಂಬಡ

Oct 1, 2024 - 22:02
 0
ಶಾಸಕ ಯತ್ನಾಳ ಒಬ್ಬ ಮಾನಸಿಕ ರೋಗಿ : ಸಾಧೀಕ ಸುಂಬಡ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಆಲಮೇಲ : ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ(ಯತ್ನಾಳ) ಭಾಷಣ ಮಾಡುತ್ತಾ ಹಜರತ್ ಟಿಪ್ಪು ಸುಲ್ತಾನ್ ಅವರ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿದ್ದಾರೆ  ವಿರೋಧಿಸಿ ಪ್ರತಿಭಟನೆ ಮಾಡಿ  ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಟಿಪ್ಪು ಸುಲ್ತಾನ ಯೂಥ್ ಕಮಿಟಿ ಮತ್ತು ಮುಸ್ಲಿಂ ಸಮಾಜದ ಮುಖಂಡರು ಆಲಮೇಲ ತಹಶೀಲ್ದಾರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.        

ಆಲಮೇಲ ಪ.ಪಂ ಅಧ್ಯಕ್ಷ ಮತ್ತು ಕಾಂಗ್ರೇಸ ಮುಖಂಡರಾದ ಸಾಧೀಕ ಸುಂಬಡ ಮಾತನಾಡಿ ವಿಜಯಪೂರ ನಗರ ಶಾಸಕ ಬಸವನಗೌಡ ಪಾಟೀಲ(ಯತ್ನಾಳ) ೨೦೧೨ರಲ್ಲಿ ಆಲಮೇಲದಲ್ಲಿ ನಡೆದ ಟಿಪ್ಪು ಸುಲ್ತಾನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದರು ಆ ಸಂದರ್ಭದಲ್ಲಿ ಟಿಪ್ಪು ಪ್ರೇಮಿಯಾಗಿದರು,ಈಗ ಟಿಪ್ಪು ಸುಲ್ತಾನ ಅವರನ್ನು ಹಗುರವಾಗಿ ಮಾತನಾಡಿ ನಿಮ್ಮನ್ನು ನೀವು ಅವಮಾನ ಮಾಡಿಕೊಂಡAತೆ, ಭಾರತ ಹಲವಾರು ಜಾತಿ ಧರ್ಮಗಳಿಂದ ಕೂಡಿದ ದೇಶವಾಗಿದೆ ನೀವು ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದೀರಿ, ನಿಮ್ಮ ಮಾತಿನಲ್ಲಿ ನಾಲಿಗೆ ಮತ್ತು ಮೆದುಳಿಗೆ ಸಂಪರ್ಕವಿರಲಿ ಮಾನಸಿಕ ರೋಗಿಯಂತೆ ವರ್ತಿಸಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.        

ಎಸ್.ಡಿ.ಪಿ.ಐ ಮುಖಂಡರಾದ ಅಲಿ ಲಾಲಬಂದ ಮಾತನಾಡಿ ರಾಜ್ಯ ಸರ್ಕಾರ ಶಾಸಕ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಬೇಕು ಶಾಸಕ ಪ್ರಚೋದನ ಕಾರಿಯಾಗಿ ಮಾತನಾಡುತ್ತಾ ದೇಶ ಶಾಂತಿಗೆ ಭಂಗ ತರುತ್ತಿದ್ದಾರೆ ಅತೀ ಶೀಘ್ರದಲ್ಲಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.                

ಈ ಸಂದರ್ಭದಲ್ಲಿ ಸೈಫನ ಜಮಾದಾರ,ಸೈಫನ ಮುಲ್ಲಾ, ಜಹಾಗೀರ ಅಪಘಾನ, ವಹಾಬ್ ಸುಂಬಡ ಬಾಬು ಕೊತ್ತಂಬರಿ, ಮಕ್ಸೂದ್ ಚೌಧರಿ,ಜಬ್ಬಾರ ಸುಂಬಡ, ಅಬ್ಬಾಸಲಿ ಕಮಲಾಪೂರ, ಮುರ್ತುಜ್ ಮರ್ತೂರ, ಸಾಧೀಕ ಗೌಂಡಿ, ವಸೀಮ್ ಮಳ್ಳಿ, ಯೂನುಸ ಚೌಧರಿ ಸೇರಿದಂತೆ ಅನೇಕರಿದ್ದರು.


ಮುಂಬರುವ ದಿನಗಳಲ್ಲಿ ಜಿಲ್ಲೆಯ ಮುಸ್ಲಿಂ ಪರ ಮತ್ತು ಕನ್ನಡ ಪರ ಸಂಘಟನೆಯವರು ಸೇರಿ ಆಲಮೇಲ ಪಟ್ಟಣದಿಂದ ರ್ಯಾಲಿ ಮೂಲಕ ವಿಜಯಪುರ ನಗರ ಶಾಸಕ ಬಸನÀಗೌಡ ಪಾಟೀಲ ಅವರ ಕಚೇರಿಗೆ ಹೋಗಿ ಟಿಪ್ಪು ಸುಲ್ತಾನ ಅವರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡುತ್ತೇವೆ.

-ಸಾಧೀಕ ಸುಂಬಡ
ಪ.ಪA ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡ ಆಲಮೇಲ

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.