ವಾಲಿಬಾಲ್ ಪಂದ್ಯಾಟದಲ್ಲಿ ರೋಚಕ ಗೆಲುವು ಆಲಮಟ್ಟಿ ಶಾರದಾ ಶಾಲಾ ತಂಡ 8 ನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಆಲಮಟ್ಟಿ : ಇಲ್ಲಿನ ಶಾರದಾ ಪ್ರಾಥಮಿಕ ಶಾಲಾ ಬಾಲಕಿಯರ ವಾಲಿಬಾಲ್ ತಂಡ ಎಂಟನೇ ಬಾರಿಗೆ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಪ್ರವೇಶ ಪಡೆದಿದೆ.
ಜಿಲ್ಲೆಯ ದೇವರ ಹಿಪ್ಪರಗಿ ಬಳಿಯ ಮಣೂರ ಗ್ರಾಮದಲ್ಲಿ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಕೆ.ಎಸ್.ಎಲ್.ಎ.ಪ್ರೌಢಶಾಲೆ ಆಶ್ರಯದಲ್ಲಿ ಆಯೋಜನೆಗೊಂಡಿದ್ದ 2024-25 ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಲಮಟ್ಟಿ ಶಾರದಾ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ವೀರೋಚಿತ ಗೆಲುವು ಸಾಧಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಈ ಶಾಲೆಯ ಬಾಲಕಿಯರ ವಾಲಿಬಾಲ್ ತಂಡವು ಹಲವಾರು ಬಾರಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಜಯ ಸಾಧಿಸುತ್ತಾ ಬಂದಿದೆ. ಇದೀಗ 8 ನೇ ಬಾರಿಗೆ ವಿಭಾಗ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಐತಿಹಾಸಿಕವಾಗಿದೆ. ಈ ಶಾಲೆಯ ಮೂವರು ಬಾಲೆಯರು ಈಗಾಗಲೇ ಒಂದು ಬಾರಿ ವಿಭಾಗ ಮಟ್ಟದಲ್ಲಿ ಉತ್ತಮ ಆಟದ ಕೌಶಲ್ಯ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ಮೆರೆದಿದ್ದಾರೆ.
ಈಗ ಪ್ರಸ್ತುತ ತಂಡದ ಬಾಲೆಯರು ತಮ್ಮ ಸಾಂಘಿಕ ಪ್ರತಿರೋಧದ ಅತ್ಯುತ್ತಮ ಹೋರಾಟದಿಂದ ಜಿಲ್ಲಾ ಮಟ್ಟದಲ್ಲಿ ಗೆಲುವಿನ ಸಂತಸ ಕಾಣುತ್ತಾ ಮಿಂಚಿದ್ದಾರೆ. ವಿಭಾಗ ಮಟ್ಟದಲ್ಲೂ ಮಿನುಗಲಿವೆಂದು ಈ ಭಾಗದ ಕ್ರೀಡಾಭಿಮಾನಿಗಳು ತಂಡಕ್ಕೆ ಶುಭ ಹಾರೈಸಿದ್ದಾರೆ.
ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜೇತ ಶಾರದಾ ಪ್ರಾಥಮಿಕ ಶಾಲಾ ತಂಡಕ್ಕೆ ಬ.ಬಾಗೇವಾಡಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ, ನಿಡಗುಂದಿ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್.ಗಲಗಲಿ ಪ್ರಮಾಣ ಪತ್ರ ಹಾಗೂ ಟ್ರೋಫಿ ವಿತರಿಸಿದರು. ಈ ಸಂದರ್ಭದಲ್ಲಿ ಜಯಗಳಿಸಿದ ಶಾರದಾ ಪ್ರಾಥಮಿಕ ಶಾಲೆ, ಸಂಸ್ಥೆಯ ಚೇರಮನ್ ಶ್ರೀಮತಿ ಎಸ್.ಬಿ.ಬೆಳಗಲಿ, ಮುಖ್ಯ ಗುರು ಜಿ.ಸಿ.ದ್ಯಾವಣ್ಣವರ, ಸಿಬ್ಬಂದಿ ಎನ್.ಬಿ.ದಾಸರ, ಬಿ.ವಿ.ಮಹಾಂತಣ್ಣವರ,ಎಸ್.ಬಿ.ಮಾನೆ,ಬಿ.ಎಸ್.ಬಾದವಾಡಗಿ, ಎಂ.ಎಚ್.ಎಂ.ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ, ಯೋಗಪಟು ಗಂಗಾಧರ ಹಿರೇಮಠ ಇತರರಿದ್ದರು. ಕ್ರೀಡಾಪಟುಗಳ ಸಾಧನೆಗೆ ಆಲಮಟ್ಟಿಯಲ್ಲಿ ಹರ್ಷವ್ಯಕ್ತವಾಗಿದ್ದು ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಎಸ್.ಬಿ.ಬೆಳಗಲಿ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು, ಕ್ರೀಡಾಭಿಮಾನಿಗಳು ಅಭಿನಂದಿಸಿದ್ದಾರೆ.