ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಸಭೆ: ಕೃಷಿ ಕ್ಷೇತ್ರದ ವಿಷಮತೆ ತೊಡೆದು ಹಾಕಲು ಸಾಮೂಹಿಕ ಕೃಷಿ ಪರಿಹಾರ

Oct 1, 2024 - 09:48
 0
ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ಸಭೆ: ಕೃಷಿ ಕ್ಷೇತ್ರದ ವಿಷಮತೆ ತೊಡೆದು ಹಾಕಲು ಸಾಮೂಹಿಕ ಕೃಷಿ ಪರಿಹಾರ
ಮುದ್ದೇಬಿಹಾಳ ಪಟ್ಟಣದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿಯಮಿತದ ವಾರ್ಷಿಕ ಸಾಮಾನ್ಯ ಸಭೆಯನ್ನು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಕುಕ್ಕುಟ ವಿಭಾಗದ ಸಹಾಯಕ ನಿರ್ದೇಶಕಿ ಪದ್ಮಾವತಿ ದೊಡಮನಿ ಉದ್ಘಾಟಿಸಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಮುದ್ದೇಬಿಹಾಳ : ಕೃಷಿಯಲ್ಲಿ ಹೆಚ್ಚುತ್ತಿರುವ ಚಿಕ್ಕ ಹಿಡುವಳಿಗಳು, ಬದಲಾಗುತ್ತಿರುವ ಕೃಷಿ ಆದ್ಯತೆಗಳು ಹಾಗೂ ಮರೆಯಾಗುತ್ತಿರುವ ಸಮಗ್ರ ಕೃಷಿ ಪದ್ದತಿಗಳಿಂದ ದೇಶದ ಕೃಷಿಕರ ಬದುಕಿನಲ್ಲಿ ಉಂಟಾದ ವಿಷಮತೆಯನ್ನು ತೊಡೆದು ಹಾಕಲು ಸಾಮೂಹಿಕ ಕೃಷಿಯೊಂದೆ ಪರಿಹಾರವೆಂದು ನಂಬಲಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ರೈತರೇ ಒಗ್ಗೂಡಿ ಕಟ್ಟಿದ ಕಂಪನಿ ರೈತ ಪಾಲಿನ ಅಕ್ಷಯ ಪಾತ್ರೆಯಾಗಬೇಕೆಂದು ಪಶು ಪಾಲನೆ ಮತ್ತು ಪಶು ವೈಧ್ಯಕೀಯ ಇಲಾಖೆಯ ಕುಕ್ಕುಟ ವಿಭಾಗದ ಸಹಾಯಕ ನಿರ್ದೇಶಕಿ ಡಾ. ಪದ್ಮಾವತಿ ದೊಡಮನಿ ಕರೆ ನೀಡಿದರು. 

ನಗರದ ಹೊರದಲ್ಲಿರುವ ಶ್ರೀ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಈಚೇಗೆ ಆಯೋಜಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿಯಮಿತದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಕಾಶೀಬಾಯಿ ರಾಂಪೂರ, ಪ್ರಗತಿಪರ ರೈತ ಬಿ.ಬಿ ಪಾಟೀಲ,ವೇ. ಶರಣಯ್ಯ ಹಿರೇಮಠ ಲೀಡ್‌ಬ್ಯಾಂಕ್ ವ್ಯವಸ್ಥಾಪಕ ನೇತಾಜಿ. ಡಿ, ಬಾಗಲಕೋಟೆಯ ಪ್ಯೂಚರ ಗ್ರೀನ್ಸ ಸಂಸ್ಥಾಪಕ ಬಿ.ಆರ್ ಅಥಣಿ ,ಕೊರಟೆಗೆರೆ ಪರಿವರ್ತನಾ ಇಕೋ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶಿವಕುಮಾರ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಹರೀಶ.ಕೆ, ಪ್ರೋ ಅಗ್ರೋ ಬಯೋಟೆಕ್ ಎಂ.ಡಿ ಎಸ್.ಆರ್ ಜಾಧವ, ಮಾತನಾಡಿದರು. ಕಂಪನಿಯ ಸಂಸ್ಥಾಪಕ ಅರವಿಂದ ಹು. ಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ದಾಸೋಹಿ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಆನಂದ ದೇಸಾಯಿ(ಸೂಳಿಭಾವಿ), ಜಗದೀಶ ಪಂಪಣ್ಣವರ, ಸೋಮಲಿಂಗಪ್ಪ ಗಸ್ತಿಗಾರ, ಕಲ್ಲಣ್ಣ ಪ್ಯಾಟಿ, ಬಿ.ಜಿ ಮಠ,ಗೋಲಪ್ಪ ಗಂಗನಗೌಡ್ರ, ಶ್ರೀಶೈಲ ಮೇಟಿ, ಭೀಮಣ್ಣ ಮಳಗೌಡರ,ಬಸವರಾಜ ಕುಂಟೋಜಿ, ಸೋಮನಗೌಡ ಬಿರಾದಾರ, ಗುರಯ್ಯ ಮುದ್ನೂರಮಠ ಇದ್ದರು.

ತಾಂತ್ರಿಕ ಗೋಷ್ಠಿಯಲ್ಲಿ ಸಿರಿಧಾನ್ಯ ಉತ್ಪಾದನೆ, ಮೌಲ್ಯವರ್ಧನೆ ಮತ್ತು ಮಾರಾಟ ಕುರಿತು ಸಿರಿವಾರ ಸಿರಿಧಾನ್ಯ ರೈತ ಉತ್ಪಾದಕ ಕಂಪನಿಯ ಸಿ.ಇ.ಓ ಶಿವಪ್ಪ ಮತ್ತು ಸುಸ್ಥಿರತೆಗಾಗಿ ಸಮಗ್ರ ಕೃಷಿ ಕುರಿತು ಪ್ರಗತಿಪರ ರೈತ ರಾಜೇಂದ್ರ ಬೋಸಲೆ ವಿಷಯ ಮಂಡಿಸಿದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.