ಚೌಡಯ್ಯ ಜಯಂತಿಗೆ ಹೆಚ್ಚಿನ ಜನ ಭಾಗಿಯಾಗಲು ಮನವಿ

ಅಫಜಲಪುರ: ಮಾ.೧ರಂದು ಅಫಜಲಪುರ ಪಟ್ಟಣದಲ್ಲಿ ನಡೆಯುವ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಬೇಕೆಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಮಹಾರಾಯ ಅಗಸಿ ಮನವಿ ಮಾಡಿದ್ದಾರೆ.
ಅವರು ತಾಲೂಕಿನ ಆನೂರ ಗ್ರಾಮದ ಚಂದ್ರಗಿರಿ ದೇವಸ್ಥಾನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅಲ್ಲದೆ ಚೌಡಯ್ಯನವರ ಅದ್ದೂರಿ ಜಯಂತಿ ಆಚರಣೆ ಮಾಡಲಾಗುತ್ತಿದೆ ಹೀಗಾಗಿ ಹೆಚ್ಚಿನ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಬಸವರಾಜ ಸಪ್ಪನಗೋಳ, ಶ್ರೀಕಾಂತ ದೀವಾನಜೀ ಮಾತನಾಡುತ್ತಾ ಚೌಡಯ್ಯ ಶರಣರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ, ಅವರ ಸಿದ್ದಾಂತಗಳು, ತತ್ವಗಳು, ವಚನಗಳು ಎಲ್ಲರಿಗೂ ಅನ್ವಯ ಆಗುವಂಥವು ಹೀಗಾಗಿ ಚೌಡಯ್ಯ ಶರಣರ ಜಯಂತಿ ಕಾರ್ಯಕ್ರಮಕ್ಕೆ ಜಾತ್ಯಾತೀತವಾಗಿ ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಚಂದ್ರಗಿರಿ ದೇವಿ ಅರ್ಚಕ ರಾಹುಲ್ ಭಂಡಾರಿ, ಗ್ರಾ.ಪಂ ಮಾಜಿ ಅಧ್ಯಕ್ಷ ದತ್ತು ಘಾಣೂರ, ಡಾ. ಸಂಗಣ್ಣ ಸಿಂಗೆ, ಚಂದ್ರಕಾAತ ಸೀತನೂರ, ಬಾಬು ದೇವರಮನಿ, ಶಿವಶರಣ ತಳವಾರ, ಹಣಮಂತ ಪ್ಯಾಟಿ, ಸಿದ್ದು ತಳವಾರ, ಯಲ್ಲಪ್ಪ ಕೊಳ್ಳೂರ, ವಿಠ್ಠಲ್ ಹೇರೂರ ಬ್ರಿಗೇಡ್ ತಾಲೂಕು ಅಧ್ಯಕ್ಷ ಪೀರಪ್ಪ ಭಾಸಗಿ, ಪುಂಡಲೀಕ ಉಮ್ಮನಗೋಳ, ಯಲ್ಲಪ್ಪ ಬಿದನೂರ, ಶಿವಪುತ್ರ ಭೂಸನೂರ, ಗುರುದೇವ ಪ್ಯಾಟಿ, ಜಗು ತಳವಾರ ಇದ್ದರು.