ಶಿಕ್ಷಕ ವೃತ್ತಿ ಬಹಳ ದೊಡ್ಡದು: ಕರೇಲಿ

Oct 2, 2024 - 22:50
 0
ಶಿಕ್ಷಕ ವೃತ್ತಿ ಬಹಳ ದೊಡ್ಡದು: ಕರೇಲಿ
ಅಫಜಲಪುರ: ತಾಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ದೇವಪ್ಪ ಕಿರಸಾವಳಗಿ ಅವರು ಸೇವಾ ನಿವೃತ್ತಿಗೊಂಡ ಪ್ರಯುಕ್ತ ಗ್ರಾಮಸ್ಥರು ಸನ್ಮಾನಿಸಿದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಅಫಜಲಪುರ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ವೃತ್ತಿ ಮಾಡುವುದಕ್ಕೂ ಶಿಕ್ಷಕ ವೃತ್ತಿ ಮಾಡುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಶಿಕ್ಷಕ ವೃತ್ತಿ ಬಹಳ ದೊಡ್ಡದು ಎಂದು ಎಸ್‌ಡಿಎಂಸಿ ಅಧ್ಯಕ್ಷ ತುಕಾರಾಮ ಕರೇಲಿ ಹೇಳಿದರು.


ಅವರು ತಾಲೂಕಿನ ಬಳೂರ್ಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ದೇವಪ್ಪ ಕಿರಸಾವಳಗಿ ಅವರ ವಯೋ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇವಪ್ಪ ಕಿರಸಾವಳಗಿ ಶಿಕ್ಷಕರಾಗಿ ನಮ್ಮೂರಿನ ಮಕ್ಕಳಿಗೆ ಬಹಳ ಅಚ್ಚುಮೆಚ್ಚಿನವರಾಗಿದ್ದರು. ಅವರ ಗರಡಿಯಲ್ಲಿ ಕಲಿತ ಮಕ್ಕಳು ಬಹಳ ಜಾಣರಾಗಿದ್ದಾರೆ. ಅಲ್ಲದೆ ಊರಿನ ಯುವಕರಿಗೂ ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಶುಭ ಕೋರಿದರು. 


ಶಿಕ್ಷಕ ದೇವಪ್ಪ ಕಿರಸಾವಳಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಫಲಾಲಸಿಂಗ ರಾಠೊಡ, ಅರವಿಂದ ದೊಡ್ಮನಿ, ಚನ್ನಪ್ಪ ಅರ್ಜುಣಗಿ, ಸಿದ್ರಾಮಪ್ಪ ಬಿರಾದಾರ, ಶಾಂತಕುಮಾರ ಹಡಲಗಿ, ಹಜರತ್ ಪಟೇಲ್, ಮಚೇಂದ್ರ ಜಾಬಾದಿ, ವಿಜಯಕುಮಾರ ಪಾಟೀಲ್, ಭೀಮಣ್ಣ ಪೂಜಾರಿ, ಬಸವರಾಜ ಜಾಬಾದಿ, ಗೌತಮ ಸಕ್ಕರಗಿ, ಅಶ್ವಿನಿ ಸಕ್ಕರಗಿ, ದತ್ತು ದಿಮ್ಮೆ, ರಮೇಶ ಮುಗಳಿ, ದೌಲಪ್ಪ ಝಳಕಿ, ಭೀಮಣ್ಣ ದೊಡ್ಮನಿ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಇದ್ದರು. 

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.