ಚವಡಾಪುರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ

Oct 2, 2024 - 22:46
 0
ಚವಡಾಪುರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ
ಅಫಜಲಪುರ: ತಾಲೂಕಿನ ಚೌಡಾಪೂರದಲ್ಲಿ ಸೋಮವಾರ ಭೀಮಾ ಅರ‍್ಜಾ ರೈತ ಸಂಘದಿಂದ ದೇವಲ ಗಾಣಗಾಪುರದ ಭೀಮಾ ನದಿಗೆ ಹೈಡ್ರೋಲಿಕ್ ಗೇಟ್ ಅಳವಡಿಸಿ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಶಾಸಕ ಎಂ.ವೈ.ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಹಸಿಲ್ದಾರ ಸಂಜೀವಕುಮಾರ ದಾಸರ, ಸಿಪಿಐ ಚನ್ನಯ್ಯ ಹಿರೇಮಠ ಇದ್ದರು.

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

ಅಫಜಲಪುರ: ತಾಲೂಕಿನ ಚೌಡಾಪೂರ ಗ್ರಾಮದ ಕಲಬುರಗಿ - ಸೋಲಾಪೂರ ರಾಷ್ಟ್ರೀಯ ಹೆದ್ದಾರಿ ತಡೆದು ದೇವಲ ಗಾಣಗಾಪುರದ ಭೀಮಾ ನದಿ ಬ್ಯಾರೇಜ್ ಗೆ ಹೈಡ್ರೋಲಿಕ್ ಗೇಟ್ ಅಳವಡಿಸುವಂತೆ ಒತ್ತಾಯಿಸಿ ಟೈರಗ ಗೆ ಬೆಂಕಿ ಹಚ್ಚಿ ಸೋಮವಾರ ಭೀಮಾ ಅರ‍್ಜಾ ರೈತ ಸಂಘದಿಂದ ಪ್ರತಿಭಟನೆ ನಡೆಸಿದರು.


ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಶಾಸಕ ಎಂ.ವೈ.ಪಾಟೀಲ್ ಮಾತನಾಡಿ ದೇವಲಾ ಗಾಣಗಾಪುರದ ಭೀಮಾ ನದಿಗೆ ಅಡ್ಡಲಾಗಿ ಹೊಸದಾಗಿ ಹೈಡ್ರಾಲಿಕ್ ಗೇಟ್ ಅಳವಡಿಸಲು ಈಗಾಗಲೇ ಅಧಿಕಾರಿಗಳಿಂದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಬಾರಿಯ ಸಚಿವ ಸಂಪುಟ ಸಭೆಯಲ್ಲಿ ರ‍್ಚಿಸಿ ಅನುದಾನ ಬಿಡುಗಡೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ನೀರು ಪೋಲಾಗದಂತೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಭಾಗದ ಸಮಗ್ರ ನೀರಾವರಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಘೂಳನೂರ ಮೋಘನ ಇಟಗಾ ಮಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್ ನರ‍್ಮಿಸಲಾಗಿದೆ. ಬಂದರವಾಡ ಗ್ರಾಮದ ಭೀಮಾನ ನದಿಯ ಹತ್ತಿರ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ, ಅಂರ‍್ಜಲ ಮಟ್ಟವನ್ನು ಹೆಚ್ಚಿಸಲು ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ ನೀಲಿ ನಕಾಶೆ ಮಾಡಿದ್ದು ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ಹೇಳಿದರು.


 ಭೀಮಾ ಅರ‍್ಜಾ ರೈತ ಸಂಘದ ಅಧ್ಯಕ್ಷ ಅಣ್ಣಾರಾವ ಪೋಲಿಸ್ ಪಾಟೀಲ್ ಮಾತನಾಡಿ ದೇವಲ ಗಾಣಗಾಪುರದಲ್ಲಿ ಈಗಾಗಲೇ ಇರುವ ಗೇಟ್ ಗಳು ಸಂಪರ‍್ಣವಾಗಿ ಹಾಳಾಗಿ ನೀರು ಪೋಲಾಗುತ್ತಿವೆ ಇದರಿಂದಾಗಿ ರೈತರು ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಸ್ಥಿತಿ ಎದುರಾಗುವ ಆತಂಕದಲ್ಲಿದ್ದಾರೆ. ಹಲವು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ದಕ್ಷಿಣ ಭಾರತದ ಪ್ರಸಿದ್ಧ ತರ‍್ಥ ಕ್ಷೇತ್ರ ಗಾಣಗಾಪುರಕ್ಕೆ ನೀರಿನ ಅಭಾವವಾಗಿ ಭಕ್ತರಿಗೂ ತೊಂದರೆಯಾಗುತ್ತದೆ. ಶಾಸಕರು ಮುತುರ‍್ಜಿ ವಹಸಿ ಹೊಸ ಹೈಡ್ರಾಲಿಕ್ ಗೇಟ್ ಅಳವಡಿಸಬೇಕು ಎಂದು ಹೇಳಿದರು.


ಪ್ರತಿಭಟನೆಯಲ್ಲಿ ತಹಸಿಲ್ದಾರ ಸಂಜೀವಕುಮಾರ ದಾಸರ, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್ಐಗಳಾದ ವಾತ್ಸಲ್ಯ, ರಾಹುಲ್ ಪವಾಡೆ, ಭೀಮಾ ಅರ‍್ಜಾ ರೈತ ಸಂಘದ ಕರ‍್ಯರ‍್ಶಿ ಶಿವರಾಯ ಚಿಂಚೊಳಿ, ಪ್ರಮುಖರಾದ ಯಲ್ಲಪ್ಪ ಬಟಗೇರಿ, ಯಲ್ಲಪ್ಪ ಕೆರಕನಳ್ಳಿ, ವಿಠ್ಠಲ ಕಿರಸಾವಳಗಿ, ಗಂಗಪ್ಪ ಸಿದ್ದನಾಳ, ದಿಗಂಬರ ಕಾಡಪ್ಪಗೋಳ, ಅವಧೂತ ಮೂರನೀತಿ, ಶರಣಗೌಡ ಬಟಗೇರಿ, ಭೀಮರಾಯ ನಿಚಮ, ದತ್ತಗುರು ಬಿದನೂರ, ಮಾಳಪ್ಪ ಬಿದನೂರ, ನಿಂಗಪ್ಪ ಕಿರಸಾವಳಗಿ, ಮಾಳಪ್ಪ ದೊಡ್ಡಮನಿ ಇತರರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.