ವಿಷ್ಣು ಪ್ರಿಯಾ ಸಿನಿಮಾ ಫೆಬ್ರವರಿ 21ಕ್ಕೆ ರಿಲೀಸ್.!
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ. ಮಂಜು ಅವರಿಗೆ ‘ಸಾಹಸ ಸಿಂಹ’ ವಿಷ್ಣುವರ್ಧನ್ ಬಗ್ಗೆ ಅಪಾರವಾದ ಗೌರವ ಮತ್ತು ಅಭಿಮಾನ. ಆ ಗೌರವವನ್ನು ಅವರು ತಮ್ಮ ಸಿನಿಮಾಗಳ ಮೂಲಕ ತೋರಿಸಿದ್ದಾರೆ. ಅದರ ಮುಂದುವರಿದ ಭಾಗ ಎಂಬಂತೆ ತಮ್ಮ ಮಗ ಶ್ರೇಯಸ್ Shreyas ನಟನೆಯ ಸಿನಿಮಾಗೆ ‘ವಿಷ್ಣು ಪ್ರಿಯಾ’ Vishnu Priya movie ಎಂದು ಶೀರ್ಷಿಕೆ ಇಟ್ಟಿದ್ದು ಸುದ್ದಿ ಆಗಿತ್ತು.
ಬಹಳ ಹಿಂದೆಯೇ ನಿರ್ಮಾಣ ಆಗಿದ್ದ ಈ ಸಿನಿಮಾದ ಬಿಡುಗಡೆ ಕಾರಣಾಂತರಗಳಿಂದ ತಡವಾಗಿತ್ತು. ಈಗ ಈ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ರಾಜ್ಯಾದ್ಯಂತ ಫೆಬ್ರವರಿ 21ಕ್ಕೆ ‘ವಿಷ್ಣು ಪ್ರಿಯಾ’ ಬಿಡುಗಡೆ ಆಗಲಿದೆ. ಕಣ್ಸನ್ನೆ ಚೆಲುವೆ ಎಂದೇ ಫೇಮಸ್ ಆದ ಪ್ರಿಯಾ ವಾರಿಯರ್ Priya Varrier ಅವರು ‘ವಿಷ್ಣು ಪ್ರಿಯಾ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಟಾಲಿವುಡ್‌ನ ಸಂಗೀತ ನಿರ್ದೇಶಕ ಗೋಪಿಸುಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಧಾರವಾಡ ಮೂಲದ ಸಿಂಧುಶ್ರೀ ಅವರು ಬರೆದ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾದ ಸ್ಕ್ರಿಪ್ಟ್ ಸಿದ್ಧಪಡಿಸಲಾಗಿದೆ.