ವಿಜಯಪುರ : ನೈರ್ಮಲ್ಯವನ್ನು ಪಾಲಿಸುವಲ್ಲಿ ವಿದ್ಯಾರ್ಥಿಗಳು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಸ್ವಚ್ಚತೆಯ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುವುದು ನೈರ್ಮಲ್ಯದ ವಾತಾವರಣವನ್ನು ನಿರ್ಮಿಸುವಲ್ಲಿ ಶಾಲಾ-ಕಾಲೇಜುಗಳ ಪಾತ್ರ ಮುಖ್ಯವಾಗಿದೆ ಎಂದು ಲಾಡಲಿ ಫೌಂಡೇಶನ ಟ್ರಸ್ಟದ ರಾಷ್ಟಿಯ ನಿರ್ದೇಶಕ ಡ. ಜಾವಿದ ಜಮಾದಾರ ನುಡಿದರು.
ಇಂದು ತಿಕೋಟಾ ತಾಲೂಕಿನ ಅರಕೇರಿ ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಲಾಡಲಿ ಫೌಂಡೇಶನ ಟ್ರಸ್ಟದ ಆಶ್ರಯದಲ್ಲಿ ಜರುಗಿದ ಶಾಲೆಯ ಮಕ್ಕಳಲ್ಲಿ ಸ್ವಚ್ಚತೆಯ ಅರಿವು ಹಾಗೂ ಶೈಕ್ಷಣಿಕ ಕಿಟ್ ಬ್ಯಾಗಗಳನ್ನು ವಿತರಿಸುವ ಸಮಾರಂಭದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳು ನೈರ್ಮಲ್ಯ ಮತ್ತು ನೈರ್ಮಲ್ಯದ ಮೂಲ ಅರ್ಥವನ್ನು ತಿಳಿಯಬೇಕು. ಶೌಚಾಲಯಗಳನ್ನು ನೈರ್ಮಲ್ಯವಾಗಿ ಬಳಸಬೇಕು ಮತ್ತು ಪರಿಸರದ ಸ್ವಚ್ಚತೆಯನ್ನು ಕಾಪಾಡಬೇಕು ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನ ಹರಿಸಬೆಕು. ಶಾಲೆಯಲ್ಲಿ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು ಇದರಿಂದ ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಮತ್ತು ಬುದ್ಧಶಕ್ತಿ ಹೆಚ್ಚುತ್ತದೆ ಎಂದರು.
ಸಮಾರAಭದ ಅಧ್ಯಕ್ಷತೆಯನ್ನು ವಹಿಸಿದ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಶಿರಾಳಶೆಟ್ಟಿ ಮಾತನಡಿ ಗ್ರಾಮೀಣ ಭಾಗದಲ್ಲಿ ಸ್ವಚ್ಚತೆ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಲಾಡಲಿ ಫೌಂಡೇಶನದವರು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯ. ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ ಮಕ್ಕಳು ನಕಲು ಮಾಡಿ ಪಾಸಾಗುವ ಪ್ರಯತ್ನ ಮಾಡಬಾರದು ಸ್ವಂತ ಜ್ಞಾನದಿಂದ ಉತ್ತೀರ್ಣರಾಗಬೇಕೆಂದು ಕಿವಿ ಮಾತು ಹೇಳಿದರು.
ಅರಕೇರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪೀರ ಪಟೇಲ ಪಾಟೀಲ, ಗ್ರಾಮ ಪಂಚಾಯತ ಸದಸ್ಯ ರಂಗಾ ಬರಕಡೆ ಮುಖ್ಯಾಧ್ಯಾಪಕ ಎಲ್.ಟಿ. ಮುಲ್ಲಾ ಮಾತನಾಡಿದರು. ಲಾಡಲಿ ಫೌಂಡೇಶನ ಟ್ರಸ್ಟದ ಜಿಲ್ಲಾ ವ್ಯವಸ್ಥಾಪಕ ಯುಸೂಫ ಕೊಟ್ಟಲ, ಸರಿತಾ ಚಕ್ರಸಾಲಿ ಶಿಕ್ಷಕರಾದ ಎ.ಜಿ. ಪೆಂಡಾರಿ ಎಚ್.ಎಲ್. ಕುಡಚಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ಬ್ಯಾಗಗಳನ್ನು ವಿತರಿಸಲಾಯಿತು.