ಸ್ಪರ್ಶ ಕುಷ್ಠರೋಗ ಅರಿವು ಅಭಿಯಾನ ಜಾಥಾಕ್ಕೆ ಡಾ.ಸಂಪತ್ತ ಗುಣಾರಿ ಚಾಲನೆ

Feb 1, 2025 - 23:11
 0
ಸ್ಪರ್ಶ ಕುಷ್ಠರೋಗ ಅರಿವು ಅಭಿಯಾನ ಜಾಥಾಕ್ಕೆ ಡಾ.ಸಂಪತ್ತ ಗುಣಾರಿ ಚಾಲನೆ

ವಿಜಯಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪದವಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜ.೩೦ರಂದು ಹಮ್ಮಿಕೊಂಡ “ಸ್ವರ್ಶ ಕುಷ್ಠರೋಗ ಅರಿವು ಅಭಿಯಾನ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಉಪ ನಿರ್ದೇಶಕಿ ಡಾ. ಚನ್ನಮ್ಮ ಕಟ್ಟಿ ಜಂಟಿಯಾಗಿ ಚಾಲನೆ ನೀಡಿದರು.


ಕುಟುಂಬ ಕಲ್ಯಾಣದ ಉಪ ನಿರ್ದೇಶಕರಾದ ಡಾ. ಚನ್ನಮ್ಮ ಕಟ್ಟಿ ಕುಷ್ಠರೋಗ ಯಾವುದೇ ಪಾಪ ಅಥವಾ ಶಾಪದಿಂದ ಬರುವದಿಲ್ಲ. ಇದು ಸಹ ಒಂದು ಸಮಾನ್ಯ ಕಾಯಿಲೆಯಂತೆ ಎಲ್ಲರಿಗೂ ಬರಬಹುದು. ಮೈಕೋಬ್ಯಾಕ್ಟಿರಿಯಂ ಲೆಪ್ರೇ ಎನ್ನುವ ರೋಗಾಣುವಿನಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಸೀನುವದರಿಂದ, ಕೆಮ್ಮುವದರಿಂದ, ಗಾಳಿಯ ಮೂಲಕ ರೋಗಾಣುಗಳು ಹೊರಗಡೆ ಬಂದು ಆರೋಗ್ಯವಂತ ಮನುಷ್ಯರಿಗೆ ಉಸಿರಾಟದ ಮೂಲಕ ಹರಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.


ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯದ ದಿನದ ಅಂಗವಾಗಿ ಪ್ರತಿ ವರ್ಷ ಜನೇವರಿ-೩೦ ರಂದು ರಾಷ್ಟ್ರೀಯ ಕುಷ್ಠರೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ: ೩೦-೦೧-೨೦೨೪ ರಿಂದ ೧೩-೦೨-೨೦೨೪ರ ವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡು ಜನ ಸಮಾನ್ಯರಲ್ಲಿ ತಿಳುವಳಿಕೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ|| ಅರ್ಚನಾ ಕುಲಕರ್ಣಿ ಹೇಳಿದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ॥ ಸಂಪತ್ತ ಗುಣಾರಿ ರವರು ಮಾತನಾಡಿ, ೧೮೭೩ರಲ್ಲಿ ನಾರ್ವೇ ದೇಶದ ವಿಜ್ಞಾನಿ ಡಾ|| ಹ್ಯಾನ್ಸನ್ ಎಂಬುವರು ಮೈಕೋ ಬ್ಯಾಕ್ಕೇರಿಯಂ ಲೆಪ್ರೇ ಎನ್ನುವ ರೋಗಾಣುವಿಂದ ಕುಷ್ಠರೋಗ ಬರುತ್ತದೆ ಎಂದು ಕಂಡು ಹಿಡಿದರು. ಅಂದಿನಿಂದ ಈ ರೋಗಕ್ಕೆ ಹ್ಯಾನ್ಸನ್ ಡಿಸೀಸ್ ಎಂದು ಕರೆಯುತ್ತಾರೆ. ಒಟ್ಟಾಗಿ ನಾವು ಕುಷ್ಠರೋಗದ ಬಗ್ಗೆ ಅರಿವು ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶೀಕ್ಷಣಾಧಿಕಾರಿ ಜಿ ಎಮ್ ಕೊಲೂರ ರವರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಕುಷ್ಠರೋಗ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿಗಳಾದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಕೆ.ಡಿ ಗುಂಡಬಾವಡಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ॥ ಜಾನ್ ಕಟವಟೆ, ಸಹಾಯಕ ಆಡಳಿತಾಧಿಕಾರಿಗಳು ಹೇಮಂತ ಕುಲಕರ್ಣಿ, ತಾಲೂಕಾ ಆರೋಗ್ಯ ಅಧಿಕಾರಿಗಳು ಬ.ಬಾಗೇವಾಡಿ ಡಾ|| ಕವಿತಾ ದೊಡಮನಿ, ತಾಲೂಕಾ ಆರೋಗ್ಯ ಅಧಿಕಾರಿಗಳು ವಿಜಯಪುರ ಡಾ|| ಪರಸುರಾಮ ಹಿಟ್ನಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಬೆಳಗಾವಿ ಸುರೇಶ ಹೊಸಮನಿ, ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳು ಮೋತಿಲಾಲ ಲಮಾಣಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಶ್ರೀಮತಿ ರೇಖಾ ದಶವಂತ, ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗದವರು, ನರ್ಸಿಂಗ್ ಕಾಲೇಜಿನ ಭೋದಕ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.