ಆರೋಗ್ಯಕರ ಆಹಾರಕ್ಕೆ ಒತ್ತು ನೀಡಿ : ಜಾವಿದ ಜಮಾದಾರ

ವಿಜಯಪುರ : ಆರೋಗ್ಯಕರ ಆಹಾರದಿಂದ ಮಕ್ಕಳು ಪ್ರಯೋಜನೆ ಪಡೆಯುತ್ತಾರೆ ಆರೋಗ್ಯಕರ ಆಹಾರಗಳು ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ ಪ್ರಯೋಜಕಾರಿಯಾಗಿದೆ ಇದರಿಂದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ಲಾಡಲಿ ಫೌಂಡೇಶನ ಟ್ರಸ್ಟದ ರಾಷ್ಟೀಯ ನಿರ್ದೇಶಕ ಡಾ. ಜಾವಿದ ಜಮಾದಾರ ಅಭಿಪ್ರಾಯಪಟ್ಟರು.
ಶುಕ್ರವಾರ ನಗನರದ ಇಬ್ರಾಹಿಂಪೂರದಲ್ಲಿ ಸರಕಾರಿ ಶಾಲೆ ನಂ. ೬ ರಲ್ಲಿ ಲಾಡಲಿ ಫೌಂಡೇಶನ ಟ್ರಸ್ಟ ವತಿಯಿಂದ ಮಕ್ಕಳ ಆರೋಗ್ಯ ಅರಿವು ಮತ್ತು ಪೌಷ್ಠಿಕಾಂಶ ಆಹಾರದ ಮಹತ್ವ ಕುರಿತು ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಹಾರವನ್ನು ನಿರ್ವಹಿಸುವ ಮತ್ತು ತಿನ್ನುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಿರಿ ಎಲ್ಲಾ ಅಡಿಗೆ ಪಾತ್ರೆಗಳನ್ನು ನಿಖರವಾಗಿ ಸ್ವಚ್ಚವಾಗಿಡಿ. ಕೀಟಗಳು ವಂಶಗಳು ಮತ್ತು ಇತರ ಪ್ರಾಣಿಗಳ ಸೇರಿದಂತೆ ಹಾರ ರಕ್ಷಿಸಿ ಆಹಾರ ತಯಾರಿಕೆಯಲ್ಲಿ ಮತ್ತು ಹಣ್ಣುಗಳ ಮತ್ತು ತರಕಾರಿಗಳನ್ನು ತಿನ್ನಲು ತೊಳೆಯಲು ಸುರಕ್ಷಿತ ನೀರನ್ನು ಬಳಸಿ ಶಾಲೆಯಲ್ಲಿ ಆರೋಗ್ಯ ತಪಾಸಣೆಗಳು ಮುಖ್ಯವಗಿವೆ. ಅವುಗಳ ಸಹಾಯದಿಂದ ವಿದ್ಯಾರ್ಥಿಗಳು ಸಾಮಾನ್ಯ ಬೆಳವಣಿಗೆಯನ್ನು ಗುರುತಿಸಿ ಅಸಹಜತೆಗಳ ಆರಂಭಿಕ ಲಕ್ಷಣ ಪತ್ತೆ ಹಚ್ಚಿ ಸಮಯಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ಮುಖ್ಯವಾಗಿ ಪಾಲಕರು ತಮ್ಮ ಮಕ್ಕಳನ್ನು ಶುಚಿತ್ವದಿಂದ ಬೆಳೆಸಬೇಕು. ಪೌಷ್ಠಿಕಾಂಶ ಆಹಾರ ನೀಡುವ ಬಗ್ಗೆ ಗಮನ ಹರಿಸಬೇಕೆಂದರು.
ಅದ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಪಕ ಆರ್.ಎಸ್. ಪಾದಗಟ್ಟಿ ಸರಕಾರಿ ಶಾಲೆಯಲ್ಲಿ ಆರೋಗ್ಯ ಅರಿವು, ಶೈಕ್ಷಣಿಕ ಕಿಟ್‌ಗಳನ್ನು ಲಾಡಲಿ ಫೌಂಡೇಶನ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಅದರ ಜೊತೆಗೆ ನಮ್ಮ ಶಾಲೆಯಲ್ಲಿ ಅತ್ಯಾಧುನಿಕ ಶೌಚಾಲಯ ನಿರ್ಮಾಣ ಮಾಡುತ್ತಿರುವುದು ಇದರಿಂದ ಸರಕಾರಿ ಶಾಲೆಯಿಂAದ ಹೊರಗಡೆ ಉಳಿಯುತ್ತಿರುವ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ ಮಕ್ಕಳ ಸರ್ವೊತೋಮುಖ ಬೆಳವಣಿಗೆಗೆ ಬಹಳ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಲಾಡಲಿ ಫೌಂಡೇಶನ್ ಟ್ರಸ್ಟದ ಜಿಲ್ಲಾ ವ್ಯವಸ್ಥಾಪಕ ಯುಸೂಫ ಕೊಟ್ಟಲ ಸಂಯೋಜನಾಧಿಕಾರಿಗಳಾದ ಸರಿತಾ ಚಕ್ರಸಾಲಿ, ಪ್ರೀತಿ ಪತ್ತರ, ಶಿಕ್ಷಕರಾದ ಸಿ.ಆರ್. ಕೋರಿ, ಎಸ್.ವಿ. ಪಾಟೀಲ, ಎಸ್.ಎಸ್. ಅಮ್ಮನವರ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್ ಬ್ಯಾಗಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಮೊದಲಿಗೆ ಎ.ಎಸ್. ತಳಗಡೆ ಸ್ವಾಗತಿಸಿದರು. ಎಲ್.ಜಿ. ಪವಾರ ವಂದಿಸಿದರು.