ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳ ಬೆಳೆಸಿಕೊಳ್ಳಿ: ಡಾ. ಸಿ ಕೆ ಹೊಸಮನಿ

Feb 2, 2025 - 15:06
Feb 2, 2025 - 15:57
 0
ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಗಳ ಬೆಳೆಸಿಕೊಳ್ಳಿ: ಡಾ. ಸಿ ಕೆ ಹೊಸಮನಿ
ವಿಜಯಪುರ : ಯಶಸ್ಸನ್ನು ಯಾರೂ ತಂದು ನಮ್ಮ ಬೊಗಸೆಯಲ್ಲಿ ಇಡುವುದಿಲ್ಲ. ಯಶಸ್ಸುಗಳಿಸಲು ನಿರಂತರ ಸಾಧನೆ, ಕಠಿಣ ಪರಿಶ್ರಮ ಅಗತ್ಯ. ಚಂಚಲ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು ಹಾಗೂ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಸಾಧನೆಗೆ ಮುಂದಾದರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ ಸಿ ಕೆ ಹೊಸಮನಿ ಹೇಳಿದರು.
 ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಎಸ್ ಪದವಿ ಪೂರ್ವ ಕಾಲೇಜನ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ನಡೆಯಿತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದವರು ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಗಳು ಕ್ಲಸ್ಟರ್ ಹಾಗೂ ವೆಬ್ ಕಾಸ್ಟ್ ನಲ್ಲಿ ನಡೆಯುತ್ತವೆ ಹಾಗಾಗಿ ವಿದ್ಯಾರ್ಥಿಗಳು ಅದನ್ನು ಅರಿತು ಅಧ್ಯಯನ ಮಾಡಬೇಕು ಕಾಲೇಜಿಗೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಸರು ತರಬೇಕು ಅಂತ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ಪ್ರೋತ್ಸಾಹಿಸಲಾಗುವುದು ಎಂದರು.
 ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಡಾ. ವಾಯ್ ಎಂ ಜಯರಾಜ ಅವರು ಮಾತನಾಡಿ ನಿರಂತರ ಅಧ್ಯಯನ, ಕ್ರಿಯಾಶೀಲತೆ, ಸತತ ಪರಿಶ್ರಮ, ಶ್ರದ್ಧೆ, ವೃತ್ತಿ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.
 ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ರಾಜಕರಣ ಭಾಗವಹಿಸಿ ತಮ್ಮ ಹಾಸ್ಯ ಚಟಾಕಿಗಳ ಮೂಲಕ ಮನರಂಜಿಸಿದರು.
 
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ಅಧಿಕಾರಿಗಳಾದ ಆಯ್ ಎಸ್ ಕಾಳಪ್ಪನವರ ಮಾತನಾಡಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ಕೊಟ್ಟು, ವಿವಿಧ ಆಯಾಮದಲ್ಲಿ ಅಧ್ಯಯನಶೀಲರಾಗಬೇಕು ಎಂದು ಹೇಳಿದರು.
 ಆಡಳಿತ ಅಧಿಕಾರಿಗಳಾದ ಬಿ ಆರ್ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿಗಳಾದ ಪ್ರಕಾಶ್ ಗೋಂಗಡಿ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಪ್ರಾಚಾರ್ಯರಾದ ಡಾ ಜಿ ಡಿ ಅಕಮಂಚಿ ಪ್ರಾಸ್ತಾವಿಕವಾಗಿ ಮಾತನಾಡಿದರು.
 ಕಾರ್ಯಕ್ರಮದಲ್ಲಿ ಬಿ ಬಿ ಮನಗೊಂಡ, ಎ ಆರ್ ಪೋತದಾರ, ಡಿ ಆರ್ ಖಾನಾಪುರ, ಬಿ ಟಿ ಅಂಗಡಿ, ಜೆ ಎಮ್ ಬಿರಾದಾರ, ವೈಶಾಲಿ ಪಾಟೀಲ, ಸುಪ್ರಿಯ ಶೇರಿಕಾರ, ಅಮರೇಶ ಸಾಲಕ್ಕಿ, ಎಸ್ ಆರ್ ಬುಯರ, ಎಸ್ ಎಮ್ ಸಿ ಟಿ ಕಂದಗಲ್ ನಾಯಕೋಡಿ, ಆರ್ ಡಿ ತಾಂಬೆ, ಎಸ್ ಎಮ್ ಕುಂಬಾರ, ಎಮ್ ಟಿ ದೊಡ್ಡಮನಿ, ಎಮ್ ಎಲ್ ಖೈರವ, ವಾಣಿಶ್ರೀ ಮಠ, ಎಸ್ ಎಮ್ ಪಾಟೀಲ್ ಹಾಗೂ ಸಮಸ್ತ ಸಿಬ್ಬಂದಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 
 ಕಾರ್ಯಕ್ರಮವನ್ನು ಜೆ ಎ ಬಿರಾದಾರ ನಿರೂಪಿಸಿದರು. ಎಸ್ ಟಿ ತೇಲಕರ ಸ್ವಾಗತಿಸಿದರು. ಟಿ ಎಮ್ ಪವಾರ ವಂದಿಸಿದರು.
Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.