೩ನೇ ಬೃಹತ್ ರೈತ ಜಾಗೃತಿ ಸಮಾವೇಶದ ಸಿದ್ಧತೆಗೆ ಚಾಲನೆ

ವಿಜಯಪುರ: ಎಪ್ರಿಲ್ ೨೬,೨೭,೨೮ ರಂದು ವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿರುವ ೩ನೇ ಬೃಹತ್ ರೈತ ಜಾಗೃತಿ ಸಮಾವೇಶದ ಲೋಗೊ (ಲಾಂಚನ) ಬಿಡುಗಡೆಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಮುಗಳಖೋಡ/ಜಿಡಗಾದ ಡಾ.ಮುರುಘರಾಜೇಂದ್ರ ಸ್ವಾಮೀಜಿ ಶುಭಹಾರೈಸಿದರು.
ಇಡೀ ಜಗತ್ತಿಗೆ ಯಾವುದೇ ಫಲಾಫೇಕ್ಷೇ ಇಲ್ಲದೇ ಅನ್ನ ನೀಡುವ ಏಕೈಕ ಜೀವಿ ನಮ್ಮ ಹೆಮ್ಮೆಯ ರೈತರು, ಅವರೇ ಅನ್ನದಾತರು, ಸಮಸ್ತ ರೈತರು ಒಗ್ಗಟ್ಟಾಗಿ ಕೃಷಿಯಲ್ಲಿ ಆಗುತ್ತಿರುವ ಅನೇಕ ಅವಿಷ್ಕಾರಗಳ ಬಗ್ಗೆ, ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿತು ಕೃಷಿಯ ಜೊತೆಗೆ ಹತ್ತು ಹಲವಾರು ಉಪಕಸುಬುಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಿ ತಮ್ಮ ಕುಟುಂಬದವರೊಡನೆ ಯಾವುದೇ ಸಾಲವಿಲ್ಲದೇ ಸಂತಸದಿಂದ ಇದ್ದರೆ ಮಾತ್ರ ನಾವೂ ರೈತರಿಗೆ ಕೊಡುವ ಗೌರವ ನಿಜವಾದ ಗೌರವ, ಆವಾಗ ರೈತ ದೇಶದ ಬೆನ್ನೆಲುಬು ಎಂಬುದು ಸರ್ವಶ್ರೇಷ್ಠವಾಗುತ್ತದೆ ಎಂದರು.
ಈ ವೇಳೆ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಪ.ಪೂ ಶಶಿಕಾಂತ ಗುರೂಜಿ, ರಾಜ್ಯ ಕಾರ್ಯಧ್ಯಕ್ಷರಾದ ಮಹೇಶಗೌಡ ಸುಭೇದಾರ, ರಾಜ್ಯ ಯುವ ಘಟಕದ ಉಪಾಧ್ಯಕ್ಷ ನಿತೀನ ಮ್ಯಾಕೇರಿ, ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಸಂಚಾಲಕ ಜಕರಾಯ ಪೂಜಾರಿ, ನಗರ ಘಟಕದ ಅಧ್ಯಕ್ಷ ಸಂಗಪ್ಪ ಟಕ್ಕೆ, ಕಲ್ಬುರ್ಗಿ ಜಿಲ್ಲಾ ಉಪಾಧ್ಯಕ್ಷ ಗುಳಪ್ಪಗೌಡ .ಎಸ್.ಪಾಟೀಲ, ಸಿದ್ರಾಮ ಎಸ್.ಪಾಟೀಲ, ಶರಣಗೌಡ ಪಾಟೀಲ, ಬಸವರಾಜ ಮಂಗಲಗಿ ಸೇರಿದಂತೆ ಅನೇಕರು ಇದ್ದರು.