ಕೈಗಾರಿಕಾ ಕಾರ್ಖಾನೆ ಬೇರೆಡೆ ಸ್ಥಳಾಂತರಿಸಲು ರೈತಸಂಘ ಮನವಿ

ವಿಜಯಪುರ: ಜಿಲ್ಲೆಯ ನಾಗಠಾಣ ಹೊಬಳಿಯ ತಿಡಗುಂದಿ ಸಮೀಪದ ರೈತರ ಕಪ್ಪು ಮಣ್ಣಿನ ಫಲವತ್ತಾದ ೧೨೦೩ ಎಕರೆ ಭೂಮಿಯಲ್ಲಿ ಕೈಗಾರಿಕೆಗಾಗಿ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವುದನ್ನ ವಿರೋಧಿಸಿ ರೈತರು ರಾಜ್ಯಪಾಲರ ಆಪ್ತ ಕಾರ್ಯದರ್ಶಿಯವರಿಗೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮೂಲ ಸಚೇತಕ ಎನ್. ರವಿಕುಮಾರ, ನಗರ ಶಾಸಕ ಬಸನಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಠಕದೊಂಡ ಅವರಿಗೆ ಮನವಿ ಸಲ್ಲಿಸಿ ಒಟ್ಟಾರೆಯಾಗಿ ರೈತರ ಜೀವ ಹೋದರು ಪರವಾಗಿಲ್ಲ ಕೃಷಿ ಭೂಮಿಯನ್ನು ಕೈಬೀಡುವುದಿಲ್ಲ ಎಂದು ಆಗ್ರಹಿಸಿ ಸದನದಲ್ಲಿ ರೈತಪರ ಧ್ವನಿ ಎತ್ತಿ ಆ ಯೋಜನೆಯನ್ನು ಕೈಬೀಡುವಂತೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ಸದನದಲ್ಲಿ ಮಾತನಾಡಲು ಮನವಿ ಸಲ್ಲಿಸಲಾಯಿತು.
ಈ ವೇಳೆ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿಗೆ ಯೋಗ್ಯವಲ್ಲದ ಭೂಮಿಗಳಿವೆ, ಅಲ್ಲಿ ಅವಶ್ಯಕತೆಗೆ ತಕ್ಕಂತೆ ಕೈಗಾರಿಕರಣ ಮಾಡಲಿ ನಮ್ಮ ಅಭ್ಯಂತರ ಎನು ಇಲ್ಲ, ಈ ಮುಂಚೆ ಜಿಲ್ಲೆಯ ಮುಳವಾಡ ಕೆ.ಐ.ಡಿ.ಬಿ ಅಲ್ಲಿ ಸುಮಾರು ೩೫೦೦ ಎಕರೆ ಭೂಮಿ ಸ್ವಾಧೀನ ಪಡೆಸಿಕೊಂಡು ೧೦ ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಬೆರಳಣಿಕೆ ಎಷ್ಟು ಮಾತ್ರ ಕಾರ್ಖಾನೆಗಳು ಬಂದಿವೆ, ಇನ್ನು ಆಲಿಮಟ್ಟಿ ಜಲಾಶಯಕ್ಕೆ ಸಾವಿರಾರು ಎಕರೆ ಭೂಮಿ, ಕೂಡಗಿ ಎನ್.ಟಿ.ಪಿ.ಸಿ ಗೆ, ಘಾಳಿ ಫ್ಯಾನ್ ಗಳಿಗೆ, ಸೋಲಾರ ಎನರ್ಜಿಗಾಗಿ, ವಿಮಾನ ನಿಲ್ದಾಣಕ್ಕಾಗಿ ಹೀಗೆ ಜಿಲ್ಲೆಯಲ್ಲಿ ಸುಮಾರು ೨೦ ಕ್ಕೂ ಅಧಿಕ ಏತ ನೀರಾವರಿಗಾಗಿ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ, ಇಲ್ಲಿಯವರೆಗೂ ಭೂಮಿ ಕಳೆದುಕೊಂಡ ಯಾವ ರೈತರಿಗೂ ಸರಿಯಾದ ಪರಿಹಾರ ಬಂದಿಲ್ಲ, ಯಾವ ಕೈಗಾರಿಕೆಗಳು ಸಂಪೂರ್ಣವಾಗಿ ಮುಗಿದಿಲ್ಲ, ಹೀಗೆ ಆದರೆ ಮುಂದೆ ಜಿಲ್ಲೆಯಲ್ಲಿ ರೈತರು ಉಳಿಮೆ ಬಿಟ್ಟು ದೇಶಾಂತರ ದುಡಿಯಲು ಹೋಗಬೇಕಾಗುತ್ತದೆ ಎಂದರು.
ಮುಖಂಡ ಗಿರೀಶ ತಾಳಿಕೋಟಿ ಮಾತನಾಡಿದರು.
ಈ ವೇಳೆ ಪ್ರತಿಪರ ರೈತರಾದ ಅಶೋಕಗೌಡ ಬಿರಾದಾರ, ಮಡಿವಾಳ ತಿಲ್ಲಿಹಾಳ, ಭೀರಪ್ಪ ಬಿಜ್ಜರಗಿ, ಅಶೋಕ ಪಾಟೀಲ, ಮಲ್ಲಿಕಾರ್ಜುನ ಹೂಗಾರ, ಅರವಿಂಡ ಗಡಚಿ, ಗೌಡಪ್ಪ ಬಿರಾದಾರ, ಮಾಳಪ್ಪ ಜಂಬಗಿ, ಕಲ್ಲಪ್ಪ ಬಿರಾದಾರ, ಮಾಳಪ್ಪ ನಾಟೀಕಾರ ಸೇರಿದಂತೆ ಅನೇಕರು ಇದ್ದರು.