ಬಿ.ಎಲ್.ಡಿ.ಇ ಆಸ್ಪತ್ರೆಯ ಕಾರ್ಯ ಶ್ಲಾಘನೀಯ

Jan 10, 2025 - 02:18
 0
ಬಿ.ಎಲ್.ಡಿ.ಇ ಆಸ್ಪತ್ರೆಯ ಕಾರ್ಯ ಶ್ಲಾಘನೀಯ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ : ಗ್ರಾಮೀಣ ಭಾಗದಲ್ಲಿ ಜನರ ಬಳಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಬಿ.ಎಲ್.ಡಿ.ಇ ಆಸ್ಪತ್ರೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜ್ಜರಗಿ ಗ್ರಾ. ಪಂ. ಮಾಜಿ ಅಧ್ಯಕ್ಷ ಸುಭಾಷಗೌಡ ಪಾಟೀಲ ಹೇಳಿದ್ದಾರೆ.

ಬುಧವಾರ ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಬಿ.ಎಲ್.ಡಿ.ಇ ಸೂಪರ್ ಸ್ಪೇ಼ಷಾಲಿಟಿ ಆಸ್ಪತ್ರೆಯಿಂದ ವತಿಯಿಂದ ಪ್ರಾಥಮಿಕ ಆರೋಗ್ಶ ಉಪಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಅವರ ಜನರ ಆರೋಗ್ಯ ಪರ ಕಾಳಜಿಯಿಂದಾಗಿ ತಜ್ಞ ವೈದ್ಯರು ಗ್ರಾಮೀಣ ಭಾಗಕ್ಕೆ ಬಂದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ಮಲೂಕ ಬಡಜನರಿಗೂ ಆರೋಗ್ಯ ಸೇವೆ ಸಿಗುವಂತಾಗಿದೆ ಎಂದು ಅವರು ಹೇಳಿದರು.  

ಪ್ರಾಸ್ತವಿಕವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ, ಬಿಜ್ಜರಗಿಯಲ್ಲಿ ಆಯೋಜಿಸಲಾದ ಉಚಿತ ಆರೋಗ್ಶ ತಪಾಸಣೆ ಶಿಬಿರ ಗ್ರಾಮೀಣ ಭಾಗದ ಬಡಜನರಿಗೆ ಜೀವ ಉಳಿಸುವ ಸಂಜಿವಿನಿಯಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಶಾಂತೇಶ ಸಲಗರೆ ಮಾತನಾಡಿ, ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸುಸಜ್ಜಿತ ಮತ್ತು ಅತ್ಯಾಧುನಿಗ ವೈದ್ಯಕೀಯ ಸೇವೆ ನೀಡುತ್ತಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಯಂತ್ರೋಪಕರಣಗಳನ್ನು ಹೊಂದಿದೆ. ಅಲ್ಲದೇ, ತಜ್ಞ ವೈದ್ಯರು ಮತ್ತು ನುರಿತ ಸುಶ್ರೂಷಕ ಸಿಬ್ಬಂದಿ ಸದಾ ಸೇವಾನಿರತರಾಗಿರುತ್ತಾರೆ. ಹೃದಯ ಮತ್ತು ಕಿಡ್ನಿ ಹಾಗೂ ಕಾರ್ನಿಯಾ ಸಂಬಂಧಿ ಶಸ್ತ್ರಚಿಕಿತ್ಸೆಗಳನ್ನೂ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಈ ಮೂಲಕ ಎಂ. ಬಿ. ಪಾಟೀಲರ ಆಶಯದಂತೆ ಆಸ್ಪತ್ರೆ ಈ ಭಾಗದ ಜನರಿಗೆ ಆಸ್ಪತ್ರೆ ವರದಾನವಾಗಿದೆ ಎಂದು ಹೇಳಿದರು.  

ಈ ಶಿಬಿರದಲ್ಲಿ 35 ಜನರಿಗೆ ಹೃದ್ರೋಗ, 30 ಜನರಿಗೆ ಮೂತ್ರಜನಕಾಂಗ, 35 ಜನರಿಗೆ ನರರೋಗ, 463 ಚಿಕ್ಕಮಕ್ಕಳಿಗೆ, 63 ಜನರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಅಲ್ಲದೇ, 70ಕ್ಕೂ ಹೆಚ್ಚು ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.  

ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷೆ ಲಕ್ಷ್ಮಿಬಾಯಿ ಖ್ಶಾತನ, ಉಪಾಧ್ಯಕ್ಷೆ ಲಕ್ಕವ್ವ ಧನಗೊಂಡ, ವೈದ್ಯಾಧಿಕಾರಿಗಳಾದ ಡಾ. ಅಶೋಕ ಪಟ್ಟಣಶೆಟ್ಟಿ, ಪಿಡಿಓ ಜಯಲಕ್ಷ್ಮಿ ದಶವಂತ, ಮುಖಂಡರಾದ ಮಲ್ಲಿಕಾರ್ಜುನ ಗುಣಕಿ, ಬಸವರಾಜ ಸವದಿ, ಆನಂದ ಹೊಸಮನಿ, ಶಾಲೆಯ ಮುಖ್ಯ ಶಿಕ್ಷಕ ಎನ್. ಎಸ್. ಜೊಲ್ಲಿ, ಎಸ್.ಡಿ.ಎಂ.ಸಿ ಅಧ್ಶಕ್ಷ ರಮೇಶ ಮಾಳೆದ, ಚಿಕ್ಕಮಕ್ಕಳ ತಜ್ಞರಾದ ಡಾ. ರಾಮಕೃಷ್ಣ, ಡಾ. ನವಾಜˌ ಡಾ. ಸಿದ್ದಾರ್ಥ, ಡಾ. ಮಹೇಶ ಪಾಟೀಲ, ಜಾನಪದ ಕಲಾವಿದ ಸೋಮನಿಂಗ ಧನಗೊಂಡ, ಪ್ರಗತಿಪರ ರೈತರಾದ ಶಿವಾನಂದ ಮಸಳಿ, ಚನ್ನಪ್ಪ ಸಿದ್ದನಾಥ, ಶರಣಪ್ಪ ತಿಕೋಟಾ, ಶಿಕ್ಷಕ ಶಿವಪ್ಪ ಮಸಳಿ, ಶ್ರೂಶ್ರೂಷಕ ಅಧಿಕಾರಿ, ರಮೇಶ ಮಗದಾರೆ ಮತ್ತು ಸಿಬ್ಬಂದಿಯಾದ ಸಿಬ್ಬಂದಿಯಾದ ಶಿವನಗೌಡ ಬಾದರಬಂಡಿ, ಸುರೇಶ, ಶಿಲ್ಪಾ, ಪ್ರೇಮಕುಮಾರ ಹಾಗೂ ಇಸಿಜಿ ತಂತ್ರಜ್ಞರಾದ ಬಿಸ್ನಾˌಸಾಜಿಪಾ, ಪಲ್ಲವಿ, ಮನಿಷಾ, ರಾಹುಲ ರಾಠೋಡˌ ಭುವನೇಶ್ವರಿ ˌಆಕಾಶ ಕಲಬುರ್ಗಿ, ಪಿ.ಆರ್.ಎ ಶಶಿಕಾಂತ ಕೋಳಿˌ ಹಣಮಂತರಾವ ಕನಸೆˌ ಚಂದ್ರಕಾಂತ ತೋಳೆˌ ಆಯಿಷಾˌ ಕಮಲಾಬಾಯಿ ಹಾಗೂ ಗ್ರಾಮದ ಆಶಾ ಕಾರ್ಯಕರ್ತೆಯರು, ಗ್ರಾ. ಪಂ. ಸಿಬ್ಬಂದಿಯಾದ ಅಪ್ಪು, ಆನಂದ, ಮಹೇಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು

.  

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.