ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕ ವಸೂಲಾತಿ ಸಂಗ್ರಹಣೆಗೆ ಮಹಿಳಾ ಸ್ವಸಹಾಯ ಸಂಘಗಳಿಂದ ಅರ್ಜಿ ಆಹ್ವಾನ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ಮಹಾನಗರ ಪಾಲಿಕೆ ದೀನ್ ದಯಾಳ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಡೇ-ನಲ್ಮ್ ಅಭಿಯಾನದಡಿ ಜಿಲ್ಲೆಯ ಆಸ್ತಿ ತೆರಿಗೆ ಹಾಗೂ ನೀರಿನ ಶುಲ್ಕ ವಸೂಲಾತಿ ಸಂಗ್ರಹಣೆ ಮಾಡುವ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅರ್ಹ ಮಹಿಳಾ ಸ್ವಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮಹಿಳಾ ಸ್ವಸಹಾಯ ಸಂಘವು ಈಗಾಗಲೇ ಡೇ-ನಲ್ ಅಭಿಯಾನದಡಿ ನೊಂದಾಯಿಸಿರಬೇಕು ಹಾಗೂ ಪಂಚಸೂತ್ರ ಅನುಸರಿಸುತ್ತಿರಬೇಕು. ಸಂಘಸ ಸದಸ್ಯರು ಕನಿಷ್ಠ 7ನೇ ತರಗತಿಯ ವರೆಗೆ ಶಿಕ್ಷಣ ಹಾಗೂ ಎಲೆಕ್ಟಾçನಿಕ್ ಪರಿಕರಗಳ ಬಳಕೆ ಗೊತ್ತಿರಬೇಕು. ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆ ಹೊಂದಿರಬೇಕು ಹಾಗೂ ಬ್ಯಾಂಕನ ತಮ್ಮ ಖಾತೆಯಲ್ಲಿ ಸಾಲ ಪಡೆದು ನಿಯಮಿತವಾಗಿ ಮರು ಪಾವತಿ ಮಾಡಿರಬೇಕು. ಸ್ವ-ಸಹಾಯ ಗುಂಪು ಸಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಡೇ.ಎನ್‌ಯುಎಲ್‌ಎಂ ಅಭಿಯಾನದಡಿ ನೋಂದಾಯಿಸಿಕೊಂಡು ಮಾನ್ಯತೆ ಇರುವ ಎಂಐಎಸ್ ಕೋಡ್ ಹೊಂದಿರಬೇಕು. ಸಂಘ ರಚನೆಯಾಗಿ ಕನಿಷ್ಟ 3 ವರ್ಷ ಪೂರೈಸಿರಬೇಕು. ಸಂಘ ಅಥವಾ ಸಂಘದ ಸದಸ್ಯ ಯಾವುದೇ ಅಪರಾಧ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರಬಾರದು. ನಗರ ಸ್ಥಳೀಯ ಸಂಸ್ಥೆಯಿಂದ ನಿಗದಿಪಡಿಸಲಾದ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಮಸೂಲಾತಿಯ ಗುರಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಆಸಕ್ತಿ ಮತ್ತು ಬದ್ಧತೆಯನ್ನು ಹೊಂದಿರಬೇಕು.
ಆಸಕ್ತ ಮಹಿಳಾ ಸ್ವಸಹಾಯ ಸಂಘಗಳು ಕಾರ್ಯಾಲಯದಿಂದ ಅರ್ಜಿ ನಮೂನೆ ಪಡೆದು ಜನವರಿ 15ರ ಸಂಜೆ 5.30ರ ಒಳಗಾಗಿ ತಮ್ಮ ಅರ್ಜಿಯನ್ನು ಜಿಲ್ಲಾ ಮಹಾನಗರಪಾಲಿಕೆ ಆಯುಕ್ತ ಕಛೇರಿಗೆ ಸಲ್ಲಿಸಬೇಕು ಎಂದು ಪ್ರಕಟಣೆಯು ತಿಳಿಸಿದೆ.