ಅಶೋಕ ಎಲ್ಲಾ ಮತಗಳಿಗೂ ದಾನ-ದತ್ತಿ ಕೊಟ್ಟಿದ್ದಾನೆ : ಸಹನಾ ವಿಜಯಕುಮಾರ

Jan 6, 2025 - 08:40
 0
ಅಶೋಕ ಎಲ್ಲಾ ಮತಗಳಿಗೂ ದಾನ-ದತ್ತಿ ಕೊಟ್ಟಿದ್ದಾನೆ : ಸಹನಾ ವಿಜಯಕುಮಾರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ವಿಜಯಪುರ: ಅಶೋಕ ಬ್ರಾಹ್ಮಣ, ಜೈನ , ಬೌದ್ಧ ಸೇರಿದಂತೆ ಆಗಿನ ಎಲ್ಲಾ ಮತಗಳಿಗೂ ದಾನ- ದತ್ತಿಗಳನ್ನು ಕೊಟ್ಟಿದ್ದಾನೆ , ಇದನ್ನು ಅವನ ಶಾಸನಗಳೇ ಹೇಳುತ್ತವೆ ಎಂದು ಕಶೀರ , ಮಾಗಧ ಕಾದಂಬರಿಗಳ ಖ್ಯಾತಿಯ ಲೇಖಕಾರದ ಸಹನಾ ವಿಜಯಕುಮಾರ್ ಹೇಳಿದರು.

 ಶನಿವಾರ ದಿನಾಂಕ 4 ರಂದು , ನಗರದ ಶುಭಶ್ರೀ ಸಾಗರ ಹಾಲ್ ನಲ್ಲಿ ನಡೆದ ಅಖಿಲ 'ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ' ಆಯೋಜನೆ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ' ಅಶೋಕ ಸಾಮ್ರಾಜ್ಯ ಕಂದಹಾರದಿಂದ ಹಿಡಿದು ಸುವರ್ಣಗಿರಿ ಅಂದರೆ ಇವತ್ತಿನ ಉತ್ತರ ಕರ್ನಾಟಕದ ಭಾಗದವರೆಗೂ ಇತ್ತು. ಅಶೋಕನ ಅತಿಹೆಚ್ಚು ಶಾಸನ ಸಿಕ್ಕಿರುವುದು ನಮ್ಮ ಕರ್ನಾಟಕದಲ್ಲಿಯೇ. ಡೇರಿಯಸ್ ನ ಪ್ರಭಾವ ಅಶೋಕ ಶಾಸನಗಳ ಬರೆಸಲು ಪ್ರಾರಂಭಿಸಿದ. ಡೇರಿಯಸ್ ಅಂತಿಯೇ ಅಶೋಕ ಎತ್ತರವಾದ ಬಂಡೆಗಳಲ್ಲಿ ಶಾಸನಗಳನ್ನು ಬರೆಸಿದ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ವಹಿಸಿದ್ದರು. ನಿರೂಪಣೆ ರಾಹುಲ್ ಮರಳಿ, ಸ್ವಾಗತ ಪರಿಚಯ - ವರಣು ಸೋಲಾಪುರ , ವಂದನಾರ್ಪಣೆ ವಿವೇಕ ಕುಲಕರ್ಣಿ ನಿರ್ವಹಿಸಿದರು. ಸುಧೀಂದ್ರ ಟಂಕಸಾಲೆ , ರವೀಂದ್ರ ಹಲ್ಯಾಳ , ಶರಣು ಹೀರಾಪುರ, ಬಿ ಜೆ ಪುರಾಣಿಕ , ಶಶಿಧರ ಸಾತಿಹಾಳ , ಕೃಷ್ಣ ದೀಕ್ಷಿತ್, ಜಿ ಆರ್ ಕುಲಕರ್ಣಿ, ಅಂಬಾದಾಸ ಜೋಶಿ , ಕೃಷ್ಣ ಬೀಡಕರ , ಸಂಗಮೇಶ ಪೂಜಾರಿ, ಓಂಕಾರ ಅರ್ಥರ್ಗಾ , ಶಂಕರ್ ಕುಲಕರ್ಣಿ , ಎನ್ ಆರ್ ಕುಲಕರ್ಣಿ, ಎಸ್ ಎಮ್ ಕನಬೂರ , ಅನಿಲ ಮಾಶಾಳಕರ , ಶರಣಗೌಡ ಪಾಲೀಟ , ಸವಿತಾ ಸರಾಫ್ , ವೀರಣ್ಣ ನಾಯ್ಕೋಡಿ , ಡಾ.ಆರ್ ಎ ಕುಲಕರ್ಣಿ , ಶ್ರೀರಂಗ ಪುರಾಣಿಕ, ಜಯಶ್ರೀ ಜೋಶಿ , ಪ್ರಿಯಾ ಹರಿದಾಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ ವಿಜಯಪುರದ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.