ಬಬಲೇಶ್ವರ ತಾಲೂಕು ಕೆಡಿಪಿ ಸಮಿತಿಗೆ ನೂತನ ಸದಸ್ಯರ ನೇಮಕ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ: ಬಬಲೇಶ್ವರ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ(ಕೆ.ಡಿ.ಪಿ) ಸಮಿತಿಗೆ ಆರು ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಶೇಗುಣಸಿ ಗ್ರಾಮದ ಪ್ರಕಾಶ ಗಂಗಪ್ಪ ಕೋರಿ, ಕಾಖಂಡಕಿ ಗ್ರಾಮದ ಮಹಾಂತೇಶ ಕಾಖಂಡಕಿ, ಹೊಸೂರ ಗ್ರಾಮದ ತಿರುಪತಿ ಬಿರಾದಾರ, ನಿಡೋಣಿ ಗ್ರಾಮದ ಜಾಫರ ನಿಡೋಣಿ, ಕಾತ್ರಾಳ ಗ್ರಾಮದ ಮಲ್ಲೇಶಿ ಕೊಕಟನೂರ, ಜೈನಾಪುರ ಗ್ರಾಮದ ಸವಿತಾ ವಿಠ್ಠಲ ಪೂಜಾರಿ ಅವರನ್ನು ಕೆಡಿಪಿ ಸಮಿತಿಯ ಅಧಿಕಾರೇಯರ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಈ ನೇಮಕ ಮಾಡಲಾಗಿದೆ.
ಈ ನೇಮಕಕ್ಕೆ ಸಂತಸ ವ್ಯಕ್ತಪಡಿಸಿರುವ ಆರು ಜನ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ, ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.