ಸಾರ್ವಜನಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ; ಶಾಸಕ ಯತ್ನಾಳ

Jan 31, 2025 - 17:11
Jan 31, 2025 - 17:13
 0
ಸಾರ್ವಜನಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ; ಶಾಸಕ ಯತ್ನಾಳ

ವಿಜಯಪುರ: ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ, ಸುಲಿಗೆ ಪ್ರಕರಣಗಳು ಮೀತಿ ಮೀರಿದ್ದು, ಇದರಿಂದ ಜನರು ಭಯದಲ್ಲಿದಿನ ಕಳೆಯುಂತ ಸ್ಥಿತಿ ಬಂದಿದೆ. ಅದು ಹೋಗಲಾಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.

ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ಮನೆಗೆ ನುಗ್ಗಿದ್ದ ದರೋಡೆಕೋರರು ತಡೆಯಲು ಬಂದ ಮನೆಯ ಮಾಲೀಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆಯಿಂದ ಜನರಲ್ಲಿ ಭಯ ಸೃಷ್ಟಿ ಆಗಿದೆ. ಅನೇಕ ಬಡಾವಣೆ, ಕಾಲೊನಿಗಳಲ್ಲಿ ಮಧ್ಯರಾತ್ರಿ ನಾಲ್ಕೈದು ಜನರ ತಂಡಕಟ್ಟಿಕೊಂಡು ದರೋಡೆಕೋರರು ಓಡಾಡುತ್ತಿದ್ದಾರೆ ಎಂದು ಅನೇಕರು ದೂರು ನೀಡಿದ್ದಾರೆ.

ಕೊಲೆ, ಸುಲಿಗೆ, ಕಳ್ಳತನ ಘಟನೆಗಳಿಂದ ನಗರದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಭಯಬೀತರಾಗಿದ್ದಾರೆ. ಭಯದಲ್ಲಿರುವ ಸಾರ್ವಜನಿಕರನ್ನು ಭಯ ಮುಕ್ತಗೊಳಿಸುವಂತೆ ಮಾಡುವುದು, ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ನಗರದ ಎಲ್ಲ ಭಾಗಗಳಲ್ಲಿ ಹಾಗೂ ವಿಶೇಷವಾಗಿ ನಗರ ಹೊರವಲಯದಲ್ಲಿ ಹೊಸದಾಗಿ ಅಭಿವೃದ್ಧಿಗೊಂಡಿರುವ ಬಡಾವಣೆ, ಕಾಲೊನಿಗಳಲ್ಲಿ ಪೊಲೀಸ್ ಬೀಟ್ ನಿಯೋಜಿಸಿ, ರಾತ್ರಿ ಎರಡ್ಮೂರು ಬಾರಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು.

ಕಾನೂನು ಕೈಗೆತ್ತಿಕೊಳ್ಳುವವರಿಗೆ ಹಾಗೂ ದರೋಡೆಕೋರರಿಗೆ ಭೀತಿ ಮೂಡಿಸುವ ಕೆಲಸವಾಗಬೇಕು. ಕೇವಲ ಪ್ರಕರಣದಾಖಲು ಮ ಡಿದರೆ ಸಾಲದು, ಅಗತ್ಯವಿದ್ದಲ್ಲಿ ಆಯುಧಗಳ ಮೂಲಕವೂ ಉತ್ತರಿಸಬೇಕು. ಆಗ ತಪ್ಪು ಮಾಡುವವರಿಗೆಎಚ್ಚರಿಕೆ ಆಗಲಿದೆ. ಜೊತೆಗೆ ಭಯದಲ್ಲಿರುವ ಜನರಿಗೆ ಧೈರ್ಯಬರಲಿದೆ. ಹೀಗಾಗಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು.

ಕಳ್ಳರು, ದರೋಡೆಕೋರರ ಮೇಲೆ ನಿಗಾ ಇಡಲು ಸಿಸಿಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಿ, ಹಾಳಾಗಿದ್ದರೆ ತಕ್ಷಸ. ರಿಪಡಿಸಬೇಕು. ಇನ್ನೂ ಕೆಲಕಡೆ ಸಿಸಿ ಕ್ಯಾಮೆರಾಗಳ ಅಗತ್ಯವಿದ್ದರೆ, ಅಳವಡಿಕೆ ಮಾಡಬೇಕು. ಅದೇ ರೀತಿಮಹಾನಗರ ಪಾಲಿಕೆಯವರು ಎಲ್ಲ ಪ್ರದೇಶಗಳಲ್ಲಿ ಬೀದಿದೀಪಗಳು ಬೆಳಗುವಂತೆ ನೋಡಿಕೊಳ್ಳಬೇಕು. ಸಮಸ್ಯೆ ಇದ್ದರೆ ತಕ್ಷಣ ದುರಸ್ತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.