ವಿಜಯಪುರ ಜಿಲ್ಲಾ ಲಿಂಗಾಯತ ನೌಕರರ ಸಂಘದ ಅಧ್ಯಕ್ಷರಾಗಿ ಶರಣಬಸವ ಲಂಗೋಟಿ ಆಯ್ಕೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಸಿಂದಗಿ : ಬಸವ ತತ್ವ ಜಗತ್ತೆ ಒಪ್ಪಿಕೊಂಡಿದೆ, ನಮ್ಮ ಮುಂದಿನ ಪೀಳಿಗೆಗಳಿಗೆ ಈ ತತ್ವಗಳನ್ನು, ವಚನಗಳನ್ನು ತಲುಪಿಸುವ ಕಾರ್ಯ ಆಗಬೇಕಾಗಿದೆ, ಲಿಂಗಾಯತ ಧರ್ಮನ್ನು ಉಳಿಸಿ ಬೆಳೆಸಲು ಮತ್ತು ನೌಕರರ ಸಂಘಟನೆಯನ್ನು ಉತ್ತಮವಾಗಿ ಸಂಘಟಿಸುವ ಸಾಮರ್ಥ್ಯ ನೂತನ ಅಧ್ಯಕ್ಷರಾದ ಶರಣಬಸವ ಲಂಗೋಟಿ ಅವರು ಮಾಡುತ್ತಾರೆ ಎಂದು ವೀರತೀಶಾಂತನಂದ ಸ್ವಾಮಿಜೀ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಲಿಂಗಾಯತ ನೌಕರರ ಸಂಘ (ರಿ ) ಬೀದರ " ಇವರ ವತಿಯಿಂದ "ಲಿಂಗಾಯತ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ " ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಲಿಂ. ನೌ. ಸಂಘ ಸ್ಥಾಪಕ ಅಧ್ಯಕ್ಷ ಶಿವರಾಜ ಕಪಲಾಪುರೆ ಸ್ಥಾಪನೆಯ ದ್ಯೇಯ ಉದ್ದೇಶಗಳನ್ನು ಹಾಗೂ ಬಸವ ತತ್ವವನ್ನು ಒಪ್ಪಿಕೊಂಡು ಬಂದವರೆಲ್ಲ ಲಿಂಗಾಯತರು. ಈ ಸಂಘವು ಯಾವುದೇ ರಾಜಕೀಯ, ಬೇರೆ ಸಂಘಗಳ ಪರ ಹಾಗೂ ವಿರೋಧಿ ಸಂಘವಲ್ಲ ಎಂದರು.
ಜಿಲ್ಲಾ ಘಟಕ ವಿಜಯಪುರ ನೂತನ ಅಧ್ಯಕ್ಷರನ್ನಾಗಿ ಶರಣಬಸವ ಲಂಗೋಟಿ ಹಾಗೂ ಜಿಲ್ಲಾ ಘಟಕ ವಿಜಯಪುರ ಉಪಾಧ್ಯಕ್ಷರಾಗಿ ಆರ್. ಆರ್. ನಿಂಬಾಳಕರ.ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಸುಧಾಕರ ಬಿರಾದಾರ.ರಾಜ್ಯ ಕಾರ್ಯದರ್ಶಿಯಾಗಿ ಶಿವಾನಂದ ಡೋಮನಾಳ, ಶ್ರೀಮತಿ ಜಯಶ್ರೀ ಬೆಣ್ಣಿ, ಶಾಂತಗಂಗಾಧರ ಸ್ವಾಮೀಜಿ ಗುರುದೇವ ಆಶ್ರಮ ಸಿಂದಗಿ ಇವರು ಹಾಗೂ ನೇತೃತ್ವವನ್ನು ಪೂಜ್ಯ ಶ್ರೀ ವೀರತೀಶಾಂನಂದ ಸ್ವಾಮೀಜಿ ವೀರಕ್ತ ಮಠ ಮನಗೂಳಿ ಇವರು ವಹಿಸಿದ್ದರು.
ಈ ಸಭೆಯ ಅಧ್ಯಕ್ಷತೆಯನ್ನು ಶಿವರಾಜ ಕಪಲಾಪುರೆ, ಮುಖ್ಯ ಅಥಿತಿಗಳಾಗಿ ಶಿವಾನಂದ ಡೊಮನಾಳ, ಎಸ್.ಎನ್. ಪಾಟೀಲ, ಸುಧಾಕರ ಬಿರಾದಾರ, ಶರಣಪ್ಪ ಕಣಜೆ, ಶ್ರೀಮತಿ ಜಯಶ್ರೀ ಬೆಣ್ಣಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ಹೆಚ್ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಶ ಬಸವರಾಜ ಸೋಂಪುರ, ಎ ಕೆ ಬಿರಾದಾರ, ಸಿ ಎನ ಶಿರಕನಳ್ಳಿ, ಎನ್ ಎಸ್ ತಿಳಗೂಳ, ಗುರು ಬಿರಾದಾರ, ಅಂಬಣ್ಣ ಯತ್ನಾಳ, ಬಿ ಎಸ್ ಹಿರೇಮಠ, ವಿಜಯಪುರ ಜಿಲ್ಲೆಯ ಲಿಂಗಾಯತ ನೌಕರರು ಸಭೆಯಲ್ಲಿ ಹಾಜರಿದ್ದರು.
ಪ್ರಾರ್ಥನಾ ಗೀತೆಯನ್ನು ಮಲಕಪ್ಪ ತಳವಾರ. ಪರಿಮಳಾ ನೀಲಕಂಠ ತಿಳಗೂಳ ರವರು ವಚನ ಪ್ರಾರ್ಥನೆ ಹೇಳಿದರು. ಎಮ್. ಡಿ. ಟಕ್ಕಳಕ್ಕಿ ನಿರೂಪಿಸಿದರು. ಶಿವುಕುಮಾರ ಶಿವಸಿಂಪಿ ಸ್ವಾಗತಿಸಿ ವಂದಿಸಿದರು.