ಮೌಢ್ಯ ಹೋಗಲಾಡಿಸಲು ವೇಮನರು ಶ್ರಮಿಸಿದ್ದರು: ಶಂಕರಗೌಡ ಬಿರಾದಾರ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ಬಸವನಬಾಗೇವಾಡಿ : ‘ಕವಿ ಮತ್ತು ದಾರ್ಶನಿಕರಾಗಿದ್ದ ಮಹಾಯೋಗಿ ವೇಮನ ಅವರು ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ್ದರು’ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸ್ಮರಿಸಿದರು.
ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ತಾಲೂಕಾ ಆಡಳಿತ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ 613ನೆಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ವೇಮನ ನಂಬಿಕೆ ಇಟ್ಟಿದ್ದರು. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು. ತಮ್ಮ ತತ್ವಪದಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದರು. ವೇಮನರ ತತ್ವ, ಸಿದ್ಧಾಂತ ಸರ್ವ ಸಮುದಾಯಕ್ಕೂ ತಲುಪಲಿ ಎಂಬ ಉದ್ದೇಶದಿಂದ ಸರ್ಕಾರವು ಪ್ರತಿ ವರ್ಷವೂ ಸರ್ಕಾರದಿಂದ ಆಚರಣೆ ಮಾಡತ್ತಿರುವುದು ಶ್ಲಾಘನೀಯ ವಿಷಯ ಎಂದು ಹೇಳಿದರು.
ರವಿ ಚಿಕ್ಕೊಂಡ ಮಾತನಾಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ ಬೋರಮ್ಮ ಪೊಲೆಸಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್ ಎಂ ಗುರಡ್ಡಿ ಸಂಕನಗೌಡ ಪಾಟೀಲ ಸಂಗಮೇಶ ಹುಜರತ್ತಿ ಪ್ರಭು ಪಾಟೀಲ ಬಸವರಾಜ ದಾನಿ ಶಿವಾನಂದ ತೊಳನೂರ ಏ ಟಿ ಪಾಟೀಲ ಶಂಕರ ತಳವಾರ ಆರ್ ವಿ ಘಾಟಗೆ ನಿರ್ಮಲಾ ಪೂಜಾರಿ ಎಸ್ ಬಿ ಕುಂಬಾರ ಉಪಸ್ಥಿತರಿದ್ದರು ಸಮಾಜ ಕಲ್ಯಾಣ ಇಲಾಖೆಯ ವೀರೇಶ ಗುಡ್ಲಮನಿ ನಿರೂಪಿಸಿದರು. ಮಂಜುನಾಥ ಹಳ್ಳೂರ ಸ್ವಾಗತಿಸಿ ವಂದಿಸಿದರು.