ವಲಯ ಮಟ್ಟದ ವಾಲಿಬಾಲ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ : ಅಭಿನಂದನೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ
ವಿಜಯಪುರ : ನಗರದ ಬಿಎಲ್‌ಡಿಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾ ವಿದ್ಯಾಲಯದ ಪುರುಷರ ಮತ್ತು ಮಹಿಳೆಯರ ತಂಡಗಳು ಆಳಂದದಲ್ಲಿ ಬುಧವಾರ ನಡೆದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರ್ಗಿಯ ವಲಯ ಮಟ್ಟದ ವಾಲಿಬಾಲ ಪಂದ್ಯಾವಳಿಯಲ್ಲಿ ತೃತೀಯ ಸ್ಥಾನ ಪಡೆದಿವೆ.
ಈ ಪಂದ್ಯಗಳ ಪುರುಷರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಮಾಂತೇಶ, ಮಹಾದೇವ, ವಿರುಪಾಕ್ಷ, ಅಮರ, ವೀರೇಶ, ನಿತಿನ, ಶುಭಂ, ಅಭಿಷೇಕ, ಅಖಿಲೇಶ, ಶರಣಗೌಡ, ವಿನಯಕುಮಾರ, ತುಷಾರ ಅವರನ್ನೊಳಗೊಂಡ ತಂಡ ತೃತಿಯ ಸ್ಥಾನ ಗಳಸಿದೆ. ಮಹಿಳೆಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಜೆಜಮ್ಮ, ರಶ್ಮಿ, ಸೌಮ್ಯ, ಕೃತಿಕಾ, ಪೂಜಾ, ಚನ್ನಮ್ಮ ಮೋದಿ, ಚನ್ನಮ್ಮ ಜೆ, ಸಹನಾ ಅವರನ್ನೊಳಗೊಂಡ ತಂಡ ತೃತಿಯ ಸ್ಥಾನ ಗಳಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ, ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ, ದೈಹಿಕ ನಿರ್ದೇಶಕ ಹಣಮಂತ ಪವಾರ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.