5001ಮುತ್ತೈದೆಯರಿಗೆ ಉಡಿ ಉಡಿ ತುಂಬುವ ಕಾಯಕ್ರಮ ಉದ್ಘಾಟನೆ

Jan 5, 2025 - 09:50
 0
5001ಮುತ್ತೈದೆಯರಿಗೆ ಉಡಿ ಉಡಿ ತುಂಬುವ ಕಾಯಕ್ರಮ ಉದ್ಘಾಟನೆ
ಹೊರ್ತಿ:ಸಮೀಪದ ಜಿಗಜೇವಣಿ ಗ್ರಾಮದಲ್ಲಿ ಶ್ರೀ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮದಲ್ಲಿ ಸತ್ಯಪ್ಪ ಮಹಾರಾಜರ 5ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ 5001ಮುತ್ತೈದೆ(ಮಹಿಳೆ)ಯರಿಗೆ ಉಡಿ ತುಂಬಲಾಯಿತು.
5001ಮುತ್ತೈದೆಯರಿಗೆ ಉಡಿ ಉಡಿ ತುಂಬುವ ಕಾಯಕ್ರಮ ಉದ್ಘಾಟನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ 

ಹೊರ್ತಿ:'ಕೈಲಾಸದಲ್ಲಿ 33 ಕೋಟಿ ದೇವತೆಗಳ ಸ್ವರೂಪದ ಹಾಗೇ ಜಿಗಜೇವಣಿ ಗ್ರಾಮದ ಸತ್ಯ ಸದ್ಗುರು ಶ್ರೀ ಕೌದೇಶ್ವರ ಕೈಲಾಸ ಆಶ್ರಮದಲ್ಲಿ ಸತ್ಯಪ್ಪ ಮಹಾರಾಜರ 5ನೇ ಪುಣ್ಯಸ್ಮರಣೋತ್ಸವ ದಲ್ಲಿ ಮುತ್ತೈದೆಯರು ಕಾಣುತ್ತಿದ್ದಾರೆ ಆದ್ದರಿಂದ ದೇವತೆಗಳ ಸ್ವರೂಪಿಯಾದ ಹೆಣ್ಣ(ಮಹಿಳೆಯರ)ನ್ನು ಗೌರವದಿಂದ ಕಾಣಬೇಕು' ಎಂದು ಬುರಣಾಪೂರದ ಆರೂಢಾಶ್ರಮ ಯೋಗೇಶ್ವರಿ ಮಾತಾಜಿ ಹೇಳಿದರು.

ಸಮೀಪದ ಜಿಗಜೇವಣಿ ಗ್ರಾಮದ ಶ್ರೀ ಸತ್ಯ ಸದ್ಗುರು ಕೌದೇಶ್ವರ ಕೈಲಾಸ ಆಶ್ರಮದಲ್ಲಿ ಸತ್ಯಪ್ಪ ಮಹಾರಾಜರ 5ನೇ ಪುಣ್ಯಸ್ಮರಣೋತ್ಸವ ಪ್ರಯುಕ್ತ ಮಾತೃವಂದನಾ ಮತ್ತು 5001ಮುತ್ತೈದೆ(ಮಹಿಳೆ)ಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

'ಹೆಣ್ಣನ್ನು ಎಲ್ಲಿ ಗೌರವದಿಂದ ಕಾಣುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ ಎಂದವರು ಉಡಿತುಂಬುವ ಕಾರ್ಯವು ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರದ ಪ್ರತೀಕ' ಎಂದು ಆಶೀರ್ವಚನದಲ್ಲಿ ತಿಳಿಸಿದರು.

ಈ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತ್ರೋಶ್ರೀ ಶಿವಯೋಗಿನಿ ದೇವಿ, ಶಶಿಕಲಾ ವಿ.ಬಿರಾದಾರ, ದರ್ಶಾಯನಿ ಅ.ಮುತ್ತಿನ, ಸುಜಾತಾ ಈಕ್ಕಳಕಿ, ಮೀನಾಕ್ಷಿ ಕೆ. ಪಾಟೀಲ, ಲಕ್ಷ್ಮೀ ಕುಲಕರ್ಣಿ, ಕಲಾವತಿ ಬಿ.ಗುಡ್ಡದ, ಗೀತಾ ಬಿರಾದಾರ, ಸಾವಿತ್ರಿ ಗು. ಮುಚ್ಚಂಡಿ, ಕವಿತಾ ಕಂಬಾರ, ದ್ರಾಕ್ಷಾಯಣಿ ಸಂ. ಕುಂಬಾರ, ಏಶ್ವರ್ಯ ಸಿ. ಗುಡ್ಡದ, ಅನ್ನಪೂರ್ಣ ಸು.ಮಾವಿನಮರ, ಭುವನೇಶ್ವರಿ ಸಂ.ಕುಂಬಾರ, ಸರೋಜಿನಿ ಸಿ.ಪಾಟೀಲ, ಭುವನೇಶ್ವರಿ ಹಿರೇಮಠ ಹಾಗೂ ಜಿಗಜೇವಣಿ-ಸಾತಲಗಾಂವ ಪಿಬಿ ಮತ್ತು ಸುತ್ತಲೀನ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.